ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಯನಾ ರಾವ್: 13ರ ಬಾಲೆಗೆ ರಂಗಪ್ರವೇಶ ಸಂಭ್ರಮ!

By ಶ್ರೀನಿಧಿ ಓಡಿಲ್ನಾಳ, ಬೆಂಗಳೂರು
|
Google Oneindia Kannada News

ಅದೇನೂ ನೃತ್ಯ ಕಲಾವಿದರಿದ್ದ ಕುಟುಂಬವೇನೂ ಅಲ್ಲವೇ ಅಲ್ಲ. ಕೇವಲ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವನ್ನು ಬೆರಗುಗಣ್ಣಿನಿಂದ ನೋಡಿ ತಾನೂ ಅದೇ ರೀತಿ ಹೆಜ್ಜೆಗಳನ್ನು ಹಾಕುತ್ತಾ ಕುಣಿಯುತ್ತಿದ್ದ ಬಾಲೆ ಇದೀಗ ಭರತನಾಟ್ಯ ರಂಗಪ್ರವೇಶದ ಸಂಭ್ರಮದಲ್ಲಿದ್ದಾಳೆ. ಆಕೆಯೇ ನಯನಾ ರಾವ್.

ಬಿ.ಜೆ.ಎಸ್. ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ನಯನಾ ರಾವ್ ಗೆ ತಾನೊಬ್ಬ ದೊಡ್ಡ ಭರತನಾಟ್ಯ ಕಲಾವಿದೆಯಾಗಬೇಕೆಂಬುದು ಕನಸು. ಚಿಕ್ಕಂದಿನಲ್ಲಿಯೇ ಈಕೆಗೆ ಭರತನಾಟ್ಯದ ಬಗೆಗೆ ಬೆಳೆದ ಆಸಕ್ತಿಯನ್ನು ಮಾಡುತ್ತಿದ್ದ ನೃತ್ಯವನ್ನು ಗಮನಿಸಿದ ತಾತ ದಿ. ನಾರಾಯಣ ರಾವ್ ಅವರು ಭರತನಾಟ್ಯ ಕಲಿಕೆಗೆ ಸೇರಿಸಿದರು.

ಅತ್ಯಂತ ಹಿರಿಯ ಭರತನಾಟ್ಯ ಕಲಾವಿದೆ ‘ಭರತದರ್ಶನ' ನಾಟ್ಯಶಾಲೆಯ ಗುರುಗಳೂ ಆಗಿರುವ ಶ್ರೀಮತಿ ನಾಗಮಣಿ ಶ್ರೀನಿವಾಸ್‍ರಾವ್ ಅವರ ಬಳಿ ಈಗ ಹೆಜ್ಜೆಗೆ ಗೆಜ್ಜೆ ಕಟ್ಟಿಕೊಂಡಿದ್ದಾಳೆ. ನಿರಂತರ ಅಭ್ಯಾಸ, ಆಸಕ್ತಿಯಿಂದ ಭರತನಾಟ್ಯ ಕಲಿಯುವ ನಯನಾ ರಾವ್, ಶ್ರೀಮತಿ ನಾಗಮಣಿ ಶ್ರೀನಿವಾಸ್ ರಾವ್ ಅವರ ಮೆಚ್ಚಿನ ಶಿಷ್ಯೆ.

ನಯನಾ ರಾವ್ ಭರತನಾಟ್ಯದ ಕಲಿಕೆ

ನಯನಾ ರಾವ್ ಭರತನಾಟ್ಯದ ಕಲಿಕೆ

ಪ್ರತೀ ದಿನ ಸಂಜೆ 5 ಗಂಟೆಗೆ ಭರತನಾಟ್ಯದ ಕಲಿಕೆಗೆ ಸಮಯ ನಿಗದಿಯಾಗಿತ್ತು. ನಯನಾ ದಿನಾ ಶಾಲೆ ಮುಗಿಸಿ ಕೆಲವೊಂದು ಬಾರಿ 4 ಗಂಟೆಗೇ ಹಾಜರಾದರೂ ಶ್ರೀಮತಿ ನಾಗಮಣಿ ಶ್ರೀನಿವಾಸ್‍ರಾವ್ ಆಗಲೇ ತನ್ನ ಮೆಚ್ಚಿನ ಶಿಷ್ಯೆಗೆ ತರಗತಿ ಆರಂಭಿಸಲು ಸಿದ್ಧರಿರುತ್ತಾರೆ. ಈಗ ಎಷ್ಟರ ಮಟ್ಟಿಗೆ ಇವರ ಈ ಸಂಬಂಧ ಬೆಳೆದಿದೆ ಎಂದರೆ ನಯನಾ ಸ್ವತಃ ಮನೆ ಸದಸ್ಯೆ ಎಂಬಷ್ಟರ ಮಟ್ಟಿಗೆ ಬೆಳೆದಿದೆ.

ನಿಲ್ಲದ ಭರತನಾಟ್ಯದತ್ತ ಆಕರ್ಷಣೆ

ನಿಲ್ಲದ ಭರತನಾಟ್ಯದತ್ತ ಆಕರ್ಷಣೆ

ನಯನಾ ರಾವ್ ಗೆಳತಿಯರು ಪ್ರದರ್ಶನ ನೀಡುತ್ತಿದ್ದ ಭರತನಾಟ್ಯ ನೃತ್ಯವನ್ನು, ಟಿ.ವಿ ನಲ್ಲಿ ಪ್ರಸಾರವಾಗುತ್ತಿದ್ದ ಭರತನಾಟ್ಯದ ವೈಭವವನ್ನು ಮೆಚ್ಚಿ ಅದರ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಂಡು ನಿಧಾನವಾಗಿ ತಾನೂ ಭರತನಾಟ್ಯದತ್ತ ಆಕರ್ಷಿತಳಾದಳು.

ಕಥಕ್ ನೃತ್ಯವನ್ನು ಕಲಿಯಬೇಕೆಂಬ ಆಸೆ

ಕಥಕ್ ನೃತ್ಯವನ್ನು ಕಲಿಯಬೇಕೆಂಬ ಆಸೆ

ನಯನಾ ರಾವ್ ‍ಳಿಗೆ ಭರತನಾಟ್ಯದ ನಂತರ ಮುಂದೆ ಕಥಕ್ ನೃತ್ಯವನ್ನು ಕಲಿಯಬೇಕೆಂಬ ಆಸೆಯೂ ಇದೆ. ತಾನೊಬ್ಬ ದೊಡ್ಡ ವೈದ್ಯಯಾಗಬೇಕೆಂಬುದರ ಜೊತೆಗೆ ದೊಡ್ಡ ಭರತನಾಟ್ಯ ಕಲಾವಿದೆಯೂ ಆಗಬೇಕೆಂಬ ಇರಾದೆಯನ್ನು ಜತನವಾಗಿ ಕಾಪಾಡಿಕೊಂಡು ಬರಲು ಸಿದ್ಧಳಾಗಿದ್ದಾಳೆ.

ರಂಗಪ್ರವೇಶ ಕಾರ್ಯಕ್ರಮದ ವಿವರಣೆ

ರಂಗಪ್ರವೇಶ ಕಾರ್ಯಕ್ರಮದ ವಿವರಣೆ

ನಯನಾ ರಾವ್ ‍ಳ ತಾತ ದಿ.ನಾರಾಯಣ ರಾವ್ ಅವರ ನೆನಪಿನಲ್ಲಿ ಇದೇ ಜನವರಿ 19ರಂದು ಭಾನುವಾರ ಸಂಜೆ 6 ಗಂಟೆಯಿಂದ ಜಯನಗರ 8ನೇ ಹಂತದಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ನಯನಾ ರಾವ್‍ಳ ಭರತನಾಟ್ಯದ ಮೊಟ್ಟ ಮೊದಲ ‘ರಂಗಪ್ರವೇಶ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ಹೆಜ್ಜೆ-ಗೆಜ್ಜೆಯ ದನಿಯನ್ನು ನೋಡಿ-ಕೇಳಿ

ಹೆಜ್ಜೆ-ಗೆಜ್ಜೆಯ ದನಿಯನ್ನು ನೋಡಿ-ಕೇಳಿ

ಜನವರಿ 19ರಂದು ಭರತನಾಟ್ಯ ಕಲಾಪ್ರೇಮಿಗಳು ನಯನಾ ರಾವ್ ‍ಳ ಹೆಜ್ಜೆ-ಗೆಜ್ಜೆಯ ದನಿಯನ್ನು ನೋಡಿ-ಕೇಳಿ ಆಸ್ವಾದಿಸಬಹುದು. ಆ ದಿನ ಈ ಬಾಲೆಗೆ ‘ಆಲ್ ದಿ ಬೆಸ್ಟ್' ಅನ್ನೋಣ. ಈ ಸಂಭ್ರಮವನ್ನು ಮಿಸ್ ಮಾಡಲ್ಲ ತಾನೇ?

English summary
Bharatanatya tradition "Ranga Pravesh" or Arangatram is ritual is an official stamp of recognition to a dancer to exhibit one's talents before the public and art-connoisseurs. Here is the introduction by Srini Odilnala about Ranga pravesham of Nayana Rao
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X