ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿ.ಎನ್.ಆರ್.ರಾವ್ ಛಾಯಾಚಿತ್ರ ಪ್ರದರ್ಶನ

|
Google Oneindia Kannada News

ಬೆಂಗಳೂರು, ಜೂ. 18 : ಭಾರತರತ್ನ ಪ್ರಶಸ್ತಿ ಪುರಸ್ಕೃತ ಸಿ.ಎನ್.ಆರ್.ರಾವ್ ಅವರ ಜೀವನದ ಅಮೂಲ್ಯ ಕ್ಷಣಗಳ ಛಾಯಾಚಿತ್ರ ಪ್ರದರ್ಶನವನ್ನು ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಬುಧವಾರ ರಾಜ್ಯ ಸರ್ಕಾರದ ವತಿಯಿಂದ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ವಾರ್ತಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರೊ. ಸಿ.ಎನ್.ಆರ್. ರಾವ್ ಅವರ ಜೀವನದ ಅಮೂಲ್ಯ ಕ್ಷಣಗಳ ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಸಚಿವ ಆರ್. ರೋಷನ್ ಬೇಗ್ ಉದ್ಫಾಟಿಸಿದರು.

ಅಪರೂಪದ ಈ ಛಾಯಾ ಚಿತ್ರ ಪ್ರದರ್ಶನದಲ್ಲಿ ಮೂರು ತಲೆಮಾರಿನ ಕುಟುಂಬದ ಹಿರಿಯ ಸದಸ್ಯರೊಂದಿಗೆ ಬಾಲಕ ಸಿ.ಎನ್.ಆರ್. ರಾವ್ ಇರುವ ಚಿತ್ರಗಳಿವೆ. ರಾವ್ ಅವರ ವಿದ್ಯಾರ್ಥಿ ಜೀವನ, ಕನ್ನಡ ನಾಟಕವೊಂದರಲ್ಲಿ ಅಭಿನಯಿಸಿದ ಚಿತ್ರ. ಪ್ರಯೋಗಾಲಯಗಳಲ್ಲಿ ತೊಡಗಿಕೊಂಡಿರುವ ಚಿತ್ರಗಳಗಳಿವೆ.

ಸಿ.ಎನ್.ಆರ್.ರಾವ್ ವಿವಾಹ, ಹಲವಾರು ಪ್ರಶಸ್ತಿ ಪಡೆಯುತ್ತಿರುವ ಚಿತ್ರಗಳು, ವಿವಿಧ ಗಣ್ಯವ್ಯಕ್ತಿಗಳೊಂದಿಗೆ ಅವರು ಸಂವಾದ ನಡೆಸುತ್ತಿರುವ ಚಿತ್ರಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಇತ್ತೀಚೆಗೆ ಭಾರತರತ್ನ ಪ್ರಶಸ್ತಿ ಸ್ವೀಕರಿಸಿದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

bangalore

ವಾರ್ತಾ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜಾನ ಇಲಾಖೆ ಹೊರತಂದಿರುವ ಸಿ.ಎನ್.ಆರ್. ರಾವ್ ಕುರಿತ ಸಾಕ್ಷ್ಯಚಿತ್ರಗಳ ಸಿ.ಡಿ. ಹಾಗೂ ಕನ್ನಡಕ್ಕೆ ಅನುವಾದವಾಗಿರುವ ಅವರು ಬರೆದಿರುವ ಪುಸ್ತಕಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. [ಸಿಎನ್ಆರ್ ಸಂದರ್ಶನ ಓದಿ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಇಲಾಖೆ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಇಂದು ಅಭಿನಂದನಾ ಸಮಾರಂಭ : ಕರ್ನಾಟಕ ರಾಜ್ಯ ಸರ್ಕಾರವು ಭಾರತರತ್ನ ಪ್ರಶಸ್ತಿ ಪುರಸ್ಕೃತ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜೂನ್ 18 ಸಂಜೆ 5ಗಂಟೆಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರ್ತಾ ಸಚಿವ ಆರ್. ರೋಷನ್ ಬೇಗ್, ವಿಧಾನ ಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

English summary
Bharat Ratna Prof CNR Rao Photo Exhibition organized in Vidhana Soudha Bangalore on Tuesday 17th June 2014. Karnataka information minister R Roshan Baig inaugurated the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X