• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿಪ್ರಾಯ ಮಂಡನೆಗೆ ಸಾಮಾಜಿಕ ಜಾಲ ತಾಣಗಳು ಬೇಕು: ಲಿಂಬಾವಳಿ

By Mahesh
|

ಬೆಂಗಳೂರು, ಮಾರ್ಚ್ 26: ಪ್ರಜಾಪ್ರಭುತ್ವ, ಸ್ವಚ್ಛ ಆಡಳಿತ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಷಯವಾಗಿ ಭಾರತ್ ನೀತಿ ಸಂಸ್ಥೆಯಿಂದ ಬೆಂಗಳೂರಿನಲ್ಲಿ ವಿಶೇಷ ಸಂವಾದ, ಸಮ್ಮೇಳನ ಭಾನುವಾರದಂದು ನಡೆಯುತ್ತಿದ್ದು, ಅಪ್ಡೇಟ್ಸ್ ಇಲ್ಲಿದೆ.

ಉತ್ತಮ ಆಡಳಿತದಲ್ಲಿ ತಂತ್ರಜ್ಞಾನದ ಪಾತ್ರ ಏನು, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ನಾಗರಿಕರು ಹೇಗೆ ಕೊಡುಗೆ ನೀಡಬಹುದು ಎಂಬ ಬಗ್ಗೆ ರಾಜಕಾರಣಿಗಳು, ಉದ್ಯಮಿಗಳು ಭಾಷಣ ಮಾಡಲಿದ್ದಾರೆ.

ಅರವಿಂದ್ ಲಿಂಬಾವಳಿ: ಸಾರ್ವಜನಿಕರ ಅಭಿಪ್ರಾಯ ಮಂಡನೆಗೆ ಸಾಮಾಜಿಕ ಜಾಲ ತಾಣಗಳು ಸೂಕ್ತ ಹಾಗೂ ಮುಕ್ತ ವೇದಿಕೆ ಒದಗಿಸಿವೆ. ನನ್ನ ಕ್ಷೇತ್ರದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್-ಐಟಿ ನಿರ್ದೇಶಕಿ ಅರುಣಾ ಸುಂದರ್ ರಾಜನ್, ಆಂಧ್ರ ಸರಕಾರದ ಕಾರ್ಯದರ್ಶಿ ವಿಜಯಾನಂದ್, ತೆಲಂಗಾಣದ ಕಾರ್ಯದರ್ಶಿ ಜಯೇಶ್ ರಂಜನ್, ವಿದೇಶಾಂಗ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಮತ್ತಿತರರು ಪಾಲ್ಗೊಂಡಿದ್ದಾರೆ.

ಭಾರತ್ ನೀತಿ ಸಂಸ್ಥೆಯು ಈವರೆಗೆ ಹಲವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಂಗಳೂರಿನಲ್ಲಿ 2016ರಲ್ಲಿ ನಡೆದ ಡಿಜಿಟಲ್ ಇಂಡಿಯಾ ಸಮಾವೇಶ ಒಂದು ಉದಾಹರಣೆಯಾಗಿ ಹೇಳಬಹುದು.

ನಾಸ್ಕಾಂ (NASSCOM) ಜತೆಗೆ ಭಾರತ್ ನೀತಿ ಸಂಸ್ಥೆ ಜಂಟಿಯಾಗಿ ಈ ಹಿಂದೆ ದೆಹಲಿಯಲ್ಲಿ ಕೂಡ ಕಾರ್ಯಕ್ರಮಗಳನ್ನು ನಡೆಸಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು www.bharatniti.in/conclave2017ತಾಣಕ್ಕೆ ಭೇಟಿ ನೀಡಬಹುದು.

English summary
National Conclave on 'Democracy, Good Governance and Social Media' underway today(March 26) organised by Bharat Niti at Bengaluru. Here are the updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X