ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದೆ, ಬೆಂಗಳೂರಲ್ಲಿ ಎಲ್ಲಾ ಸಾರಿಗೆಗಳು ಸಂಚಾರವನ್ನು ಸ್ಥಗಿತಗೊಂಡಿದೆ, ನಮ್ಮ ಮೆಟ್ರೋ ಎಂದಿನಂತೆ ಸಂಚರಿಸುತ್ತಿದೆ.

 ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಇದೆರಡೂ ಕಾರಣಗಳಿಗಾಗಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ನಮ್ಮ ಮೆಟ್ರೋ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದಿನಂತೆ ಸಂಚರಿಸುತ್ತಿದೆ ಎಂದು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತರಾವ್ ಟ್ವೀಟ್ ಮಾಡಿದ್ದಾರೆ.

LIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರುLIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರು

ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದ ಪ್ರತಿಭಟನೆಗಳು ಆರಂಭವಾಗಿದೆ, ಅಂಗಡಿ ಮುಗ್ಗಟ್ಟುಗಳನ್ನು ಕಾರ್ಯಕರ್ತರು ಮುಚ್ಚಿಸುತ್ತಿದ್ದಾರೆ, ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣ ನಿಂಯಿದೆ, ಜತೆಗೆ ಓಲಾ, ಊಬರ್ ಟ್ಯಾಕ್ಸಿಗಳು ಕೂಡ ಸಂಚರಿಸುತ್ತಿಲ್ಲ, ಆಟೋಗಳು ಸುಲಿಗೆಗೆ ನಿಂತಿವೆ ಅವರು ಕೇಳಿಷ್ಟು ಹಣವನ್ನು ನೀಡಿದರೆ ಮಾತ್ರ ಹೇಳಿದಲ್ಲಿಗೆ ಬರುತ್ತೇವೆ ಎಂದು ಮಾತಿಗೆ ಮಾತು ಬೆಳೆಸುತ್ತಿದ್ದಾರೆ. ಸಾಕಷ್ಟು ಕಚೇರಿಗಳಿಗೆ ರಜೆ ಘೋಷಿಸಿಲ್ಲ ಹೀಗಾಗಿ ಕಚೇರಿಗಳಿಗೆ ತೆರಳಲೇ ಬೇಕಾಗಿದೆ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

Bharat bundh: Namma Metro running smooth and normal

ಹೇಗಪ್ಪಾ ಹೋಗೋದು ಎಂದು ಬೇಸರ ಮಾಡಬೇಡಿ ನಮ್ಮ ಮೆಟ್ರೋ ಎಂದಿನಿಂತೆ ಬೆಳಗ್ಗೆ 5ರಿಂದಲೇ ಸಂಚಾರವನ್ನು ಆರಂಭಿಸಿದೆ. ಬೆಳಗ್ಗೆ 10ಗಂಟೆಯವರೆಗೂ ಯಾವುದೇ ತೊಂದರೆ ಉಂಟಾಗಿಲ್ಲ, ಪೊಲೀಸರ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ, ಒಂದೊಮ್ಮೆ ಅಹಿತಕರ ಘಟನೆಗಳು ನಡೆದಲ್ಲಿ ಪೊಲೀಸರ ಸಲಹೆ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
BMRCL has said namma metro train service was normal as all trains are running as per scheduled up to 9 am following Bharat bundh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X