ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋತಿಗಳು ಇವೆಯಂತೆ ನಮ್ಮ ಮೆಟ್ರೋ ಬೇಗ ಬೇಗ ಹತ್ರೋ....!

|
Google Oneindia Kannada News

ಬೆಂಗಳೂರು ಜುಲೈ 18: ಸಾಮಾನ್ಯವಾಗಿ ಪ್ರವಾಸಿ ತಾಣಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ ಕೋತಿಗಳಿದ್ದರೆ ಎಚ್ಚರಿಕೆ ಸಂದೇಶಗಳನ್ನು ಹಾಕುವುದು ಸಾಮಾನ್ಯ. ಇಲ್ಲೊಂದು ಸ್ಥಳದಲ್ಲಿ ಇದೇ ರೀತಿ 'ಕೋತಿ ಇದೆ ಎಚ್ಚರಿಕೆ' ಎಂಬ ಸಂದೇಶ ಅಂಟಿಸಲಾಗಿದೆ.

ಈ ಸ್ಥಳದಲ್ಲಿ ನಿತ್ಯ ನೂರಾರು ಜನರು ಸೇರುತ್ತಾರೆ. ಇಲ್ಲಿ ಎಚ್ಚರಿಕೆಯ ಸಂದೇಶವನ್ನು ಯಾರೂ ಕೂಡ ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಕೋತಿ ಇರುವುದು ಒಂದೇ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಒಂದೇ.

ಇಂತಹ ಸೂಕ್ಷ್ಮ ಸ್ಥಳದಲ್ಲಿ ಕೋತಿ ಇರುವುದು ಜನರಲ್ಲಿ ಭಯ ಹುಟ್ಟಿಸಿದೆ. ಅಷ್ಟಕ್ಕೂ ಈ ಎಚ್ಚರಿಕೆ ಸಂದೇಶ ಕಂಡು ಬಂದಿದ್ದು ಎಲ್ಲಿ ಗೊತ್ತಾ?. ಎಲ್ಲಿ ಅಂತ ಕೇಳಿದರೆ ನೀವೆಲ್ಲರೂ ಆಕಡೆಗೆ ಕಾಲಿಡಲು ಹಿಂದೇಟು ಹಾಕುತ್ತೀರಿ.

ಹೌದು...ಈ ಸಂದೇಶ ಹಾಕಿದ್ದು ನಮ್ಮ ಮೆಟ್ರೋ ನಿಲ್ದಾಣದಲ್ಲಿ. ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಂಥಹದೊಂದು ಸಂದೇಶ ಕಾಣಿಸಿಕೊಂಡಿದೆ. ಮೆಟ್ರೋ ನಿಲ್ದಾಣದಲ್ಲಿ ಈ ಸಂದೇಶ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ದಿನಕ್ಕೆ ನೂರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಮೆಟ್ರೋ ರೈಲು ಆಗಮಿಸುವವರೆಗೂ ಜನ ನಿಲ್ದಾಣದಲ್ಲಿ ಕಾಯುತ್ತಾರೆ. ಈ ವೇಳೆ ಯಾವುದೇ ಕಾರಣಕ್ಕೂ ಹಳದಿ ಬಣ್ಣದ ಗೆರೆ ದಾಟುವಂತಿಲ್ಲ. ಸರತಿ ಸಾಲಿನಲ್ಲಿ ನಿಂತು ಮೆಟ್ರೋ ಹತ್ತಬೇಕು. ಹೀಗಿರುವಾಗ ಇಲ್ಲಿ ಕೋತಿ ಇದೆ ಎಚ್ಚರಿಕೆ ಎಂಬ ಫಲಕ ಭಯ ಹುಟ್ಟಿಸಿದೆ. ಈ ಸಂದೇಶದಂತೆ ಕೋತಿಗಳು ನಿಲ್ದಾಣಕ್ಕೆ ಬಂದರೆ ಪರಿಸ್ಥಿತಿ ಏನಾಗಬಹುದು? ಎನ್ನುವುದನ್ನು ನಾವು ಊಹಿಸಿಕೊಳ್ಳಲೂ ಅಸಾಧ್ಯ.

ಬಿಬಿಎಂಪಿ-ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯ

ಬಿಬಿಎಂಪಿ-ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯ

ಹಿರಿಯರು, ಮಕ್ಕಳು, ವಯಸ್ಸಾದವರು ಎಲ್ಲಾ ರೀತಿಯ ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಕೋತಿ ಅಂದರೆ ಧೈರ್ಯ ಮಾಡಿ ನಿಲ್ಲಿವವರಿಗಿಂತ ಓಡಿ ಹೋಗುವವರೇ ಹೆಚ್ಚು. ಹೀಗಿರುವಾಗ ಮೆಟ್ರೋ ನಿಲ್ದಾಣದಲ್ಲಿ ಕೋತಿಗಳಿವೆ ಅಂದರೆ ಜನ ಎಲ್ಲಿಗೆ ಹೋಗಬೇಕು?. ಹೀಗೇನಾದರು ಹಠಾತ್ ಕೋತಿಗಳ ಹಿಂಡು ದಾಳಿ ಮಾಡಿದರೆ ಜನ ಹೆದರಿಕೆಯಿಂದ ಹಳಿಗೆ ಬಿದ್ದರೆ ಯಾರು ಹೊಣೆ? ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.

ಇಂಥಹ ಎಚ್ಚರಿಕೆ ಸಂದೇಶ ಹಾಕುವ ಬದಲು ಬಿಎಂಆರ್‌ಸಿಎಂ ಹಾಗೂ ಬಿಬಿಎಂಪಿ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಜನರ ಮೇಲೆ ಹಠಾತ್ ದಾಳಿಯ ಭಯ

ಮಾಗಡಿ ಮೆಟ್ರೋ ನಿಲ್ದಾಣದ ಸುತ್ತಲೂ ಅಷ್ಟಾಗಿ ಮರ-ಗಿಡಗಳಿಲ್ಲ. ಆದರೂ ಕೋತಿಗಳು ಹೇಗೆ? ಎಲ್ಲಿಂದ ಮೇಲೆ ಬರುತ್ತವೆ ಅನ್ನೋದು ಇಲ್ಲಿ ದೊಡ್ಡ ಪ್ರಶ್ನೆ. ಹಾಗೊಂದು ವೇಳೆ ಬಂದರೂ ಅದಕ್ಕೆ ಮೇಲೆ ಹತ್ತಲು ಸಾಧ್ಯವಿರುವ ಸ್ಥಳದಿಂದಲೇ ಬರಬೇಕು. ಇದರ ಬಗ್ಗೆ ಬಿಎಂಆರ್‌ಸಿಎಲ್‌ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಬಿಬಿಎಂಪಿ ಕೂಡ ಕೋತಿಗಳು ಮೆಟ್ರೋ ನಿಲ್ದಾಣವನ್ನು ಪ್ರವೇಶಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆದರೆ ಇದ್ಯಾವುದು ಇಲ್ಲವಾಗಿದೆ. ಯಾಕೆಂದರೆ ಮಾಗಡಿ ಮೆಟ್ರೋ ನಿಲ್ದಾಣದಲ್ಲಿ ಒಂದೇ ಒಂದು ಸೆಕ್ಯೂರಿಟಿ ಗಾರ್ಡ್‌ ಇಲ್ಲ. ಒಬ್ಬ ಮಹಿಳಾ ಪೊಲೀಸರು ಮಾತ್ರ ಇದ್ದಾರೆ. ಈ ನಿಲ್ದಾಣದಲ್ಲಿ ಕೋತಿಗಳು ಇವೆ ಎನ್ನುವ ವಿಚಾರ ತಿಳಿದು ಒಬ್ಬರೇ ಒಬ್ಬರು ಸೆಕ್ಯೂರಿಟಿ ಗಾರ್ಡ್ ಅನ್ನು ಬಿಎಂಆರ್‌ಸಿಎಲ್ ನೇಮಕ ಮಾಡಿಲ್ಲ. ಕೋತಿ ಮೆಟ್ರೋ ಆವರಣಕ್ಕೆ ಆಗಮಿಸದಂತೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಮೆಟ್ರೋ ನಿಲ್ದಾಣ ಬಿಡಿ. ಒಂದು ವೇಳೆ ಮೆಟ್ರೋ ಒಳಗೆ ಕೋತಿಗಳು ಪ್ರವೇಶ ಮಾಡಿದರೆ ಅದನ್ನು ಯಾರು ತಡೆಯುತ್ತಾರೆ. ಅದರಿಂದಾಗುವ ಅನಾಹುತಗಳನ್ನು ತಡೆಯುವವರು ಯಾರು? ಇಂತಹ ಪ್ರಶ್ನೆಗಳನ್ನು ಪ್ರಯಾಣಿಕರು ಮಾಡಿದ್ದಾರೆ.

ಭಯಭೀತರಾದ ಪ್ರಯಾಣಿಕರು

ಭಯಭೀತರಾದ ಪ್ರಯಾಣಿಕರು

ಸೌತ್‌ ಅಂಡ್ ಸರ್ಕಲ್, ಮಾಗಡಿ ಮೆಟ್ರೋ ನಿಲ್ದಾಣಗಳಲ್ಲಿ ಕೋತಿಗಳು ಇರುವುದನ್ನು ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಹಲವಾರು ಬಾರಿ ನೋಡಿದ್ದಾರೆ. ಮೆಟ್ರೋ ನಿಲ್ದಾಣದ ಮೆಟ್ಟಿಲುಗಳ ಮೇಲೆ ಕೋತಿಗಳಿರುವುದನ್ನು ವೀಕ್ಷಿಸಿರುವುದಾಗಿ ಪ್ರಯಾಣಿಕರು ಹೇಳಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಹಲವೆಡೆ ಕೋತಿಗಳು ಕಾಣಿಸಿಕೊಂಡಿವೆಯಾದರೂ ಅವುಗಳು ಈವರೆಗೆ ಪ್ರಯಾಣಿಕರಿಗೆ ತೊಂದರೆ ಕೊಟ್ಟಿಲ್ಲ.

ಮೆಟ್ರೋ ಪ್ರಯಾಣಿಕ ರಾಮ್ ಪ್ರಕಾರ, "ನಾನು ಕೋತಿಗಳನ್ನು ನೋಡಿದ್ದೇನೆ. ಇದನ್ನು ಸೆಕ್ಯೂರಿಟಿಗೆ ಹೇಳೋಣ ಅಂದರೆ ಯಾರೂ ಕೂಡ ಇಲ್ಲಿ ಇರಲಿಲ್ಲ. ಹೀಗಾಗಿ ನಾನು ಸುಮ್ಮನಾದೆ. ಈವರೆಗೂ ಕೋತಿಗಳಿಂದ ತೊಂದರೆಯಾಗಿಲ್ಲ. ಆದರೆ ಏಕಾಏಕಿ ದಾಳಿ ಮಾಡಿದರೆ ಅನಾಹುತ ತಪ್ಪಿದ್ದಲ್ಲ'" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಎಂಆರ್‌ಸಿಎಲ್ ಹೇಳುವುದೇನು?

ಬಿಎಂಆರ್‌ಸಿಎಲ್ ಹೇಳುವುದೇನು?

ಮಾಗಡಿ ಮೆಟ್ರೋ ನಿಲ್ದಾಣದಲ್ಲಿ ಕೋತಿಗಳಿವೆ ಎಂಬ ಪೋಸ್ಟರ್ ಬಗ್ಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳ ಪ್ರತಿಕ್ರಿಯೆಗೆ ಕರೆ ಮಾಡಿದಾಗ ಮೀಟಿಂಗ್ ನೆಪ ಹೇಳಿ ಮಾಹಿತಿ ನೀಡಿಲ್ಲ. ಸುದ್ದಿ ಪ್ರಕಟವಾಗುವವರೆಗೂ ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಿಲ್ದಾಣದ ಸೆಕ್ಯೂರಿಟಿ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಅವರು ನುಣುಚಿಕೊಂಡಿದ್ದಾರೆ.

ಕೆಲವರು ಬಿಬಿಎಂಪಿಗೆ ಮಾಹಿತಿ ನೀಡಿದ್ದೇವೆ ಎನ್ನುವ ಮಾತನ್ನು ಹೇಳಿದರಾದರೂ ನಿಖರವಾದ ಮಾಹಿತಿ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ಇದಕ್ಕೆ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಇಂಥಹ ನಿರ್ಲಕ್ಷ್ಯಗಳು ನಾಳೆ ಯಾರದೋ ಜೀವಕ್ಕೆ ಆಪತ್ತು ತರಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಬಿಎಂಆರ್‌ಸಿಎಲ್ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ.

Recommended Video

GST Hike On Daily Needs: ಏಕಾಏಕಿ ಬೆಲೆ ಏರಿಕೆ ಮಾಡಿದ ಸರ್ಕಾರ | *India | OneIndia Kannada

English summary
A warning message about monkeys has been posted at the Magadi Road Namma Metro station in Bengaluru and passengers panic about monkey attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X