• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು, ಚೆನ್ನೈ, ಮೈಸೂರು ಮಾರ್ಗದಲ್ಲಿ ಬುಲೆಟ್ ರೈಲು

|
Google Oneindia Kannada News

ಬೆಂಗಳೂರು, ಜನವರಿ 30: ರೈಲ್ವೆ ಇಲಾಖೆಯು ಬೆಂಗಳೂರು, ಚೆನ್ನೈ, ಮೈಸೂರು ಮಾರ್ಗದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ನ್ನು ನಿರ್ಮಿಸಲು ಚಿಂತನೆ ನಡೆದಿದೆ.

ರೈಲ್ವೆ ಇಲಾಖೆಯು 6 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಗುರುತಿಸಿದ್ದು, ಇನ್ನು ಒಂದು ವರ್ಷದಲ್ಲಿ ಈ ಮಾರ್ಗಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಿದೆ. ಇದರಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವೂ ಇರುವುದು ವಿಶೇಷವಾಗಿದೆ.

ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ರೈಲಿಗೆ ಅಡ್ಡ ನಿಂತರು ಜನ, ಯಾಕೆ ಗೊತ್ತಾ?ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ರೈಲಿಗೆ ಅಡ್ಡ ನಿಂತರು ಜನ, ಯಾಕೆ ಗೊತ್ತಾ?

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಪ್ರಗತಿಯಲ್ಲಿದೆ. ಇದಕ್ಕೆ ಈ ಆರು ಮಾರ್ಗಗಳು ಕೂಡ ಸೇರ್ಪಡೆಯಾಗಲಿವೆ. ಹೈಸ್ಪೀಡ್ ರೈಲು ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಬಲ್ಲವು. ಸೆಮಿ ಹೈಸ್ಪೀಡ್ ರೈಲು ಮಾರ್ಗದಲ್ಲಿ ಗರಿಷ್ಠ 160 ಕಿ.ಮೀ ವರೆಗೆ ರೈಲುಗಳು ಸಂಚರಿಸಬಲ್ಲವು.

ದೆಹಲಿ-ನೊಯ್ಡಾ-ಆಗ್ರಾ-ಲಕ್ನೋ-ಕಾಶಿ, ದೆಹಲಿ-ಜೈಪುರ-ಉದಯಪುರ-ಅಹಮದಾಬಾದ್, ಮುಂಬೈ-ನಾಸಿಕ್-ನಾಗಪುರ, ಮುಂಬೈ-ಪುಣೆ-ಹೈದರಾಬಾದ್, ಚೆನ್ನೈ-ಬೆಂಗಳೂರು-ಮೈಸೂರು, ದೆಹಲಿ-ಚಂಡೀಗಢ-ಲುಧಿಯಾನಾ-ಜಲಂಧರ್-ಅಮೃತಸರದಲ್ಲಿ ಹೈಸ್ಪೀಡ್ ಅಥವಾ ಸೆಮಿ ಹೈಸ್ಪೀಡ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ದೇಶದ ಇತರೆ ಪ್ರಮುಖ ರೈಲು ನಿಲ್ದಾಣಗಳಲ್ಲೂ ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

English summary
Indian Railway is considering a bullet train service connecting Chennai, Mysuru Via Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X