{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/best-construction-project-2014-award-nice-project-082413.html" }, "headline": "ಅಶೋಕ್ ಖೇಣಿ 'ನೈಸ್' ಸಂಸ್ಥೆಗೆ ಶ್ರೇಷ್ಠ ನಿರ್ಮಾಣ ಪ್ರಶಸ್ತಿ", "url":"https://kannada.oneindia.com/news/bengaluru/best-construction-project-2014-award-nice-project-082413.html", "image": { "@type": "ImageObject", "url": "http://kannada.oneindia.com/img/1200x60x675/2014/03/12-nice1.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/03/12-nice1.jpg", "datePublished": "2014-03-12 17:08:47", "dateModified": "2014-03-12T17:08:47+05:30", "author": { "@type": "Person", "name": "Rajendra" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Construction Industry Development Council (CIDC), established by The Planning Commission and the Construction Industry has awarded Nandi Infrastructure Corridor Enterprise (NICE) project for “Construction of Rigid Pavement” as Best Construction Project-2014 in the country.", "keywords": "Best Construction Project-2014, award for NICE project, Nandi Infrastructure Corridor Enterprise, Construction of Rigid Pavement, ಶ್ರೇಷ್ಠ ನಿರ್ಮಾಣ ಪ್ರಾಜೆಕ್ಟ್ 2014, ನೈಸ್ ಸಂಸ್ಥೆ, ಅಶೋಕ್ ಖೇಣಿ ", "articleBody":"ಬೆಂಗಳೂರು, ಮಾ.12: ಕೇಂದ್ರ ಸರ್ಕಾರದ ಯೋಜನಾ ಆಯೋಗದ ಸಿಐಡಿಸಿ ಹಾಗೂ ಕನ್ ಸ್ಟ್ರಕ್ಷನ್ ಇಂಡಸ್ಟ್ರಿ ನೀಡುವ ಬೆಸ್ಟ್ ಕನ್ ಸ್ಟ್ರಕ್ಷನ್ ಪ್ರಶಸ್ತಿಯನ್ನು ನೈಸ್ ಸಂಸ್ಥೆ (ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್) ಪಡೆದುಕೊಂಡಿದೆ. ಅತ್ಯುತ್ತಮ ಕಾಮಗಾರಿಗಾಗಿ ಈ ಪ್ರಶಸ್ತಿ ನೈಸ್ ಸಂಸ್ಥೆಗೆ ಲಭ್ಯವಾಗಿದೆ.ನವದೆಹಲಿಯ ಲೋಧಿ ರಸ್ತೆಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನ ಸ್ಟೀನ್ ಸಭಾಂಗಣದಲ್ಲಿ ಮಾರ್ಚ್ 7ರಂದು ನಡೆದ 18ನೇ ಸಿಐಡಿಸಿ ವಾರ್ಷಿಕ ದಿನಾಚರಣೆ ಹಾಗೂ 6ನೇ ಸಿಐಡಿಸಿ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ ನೈಸ್ ಸಂಸ್ಥೆಗೆ ಪ್ರಶಸ್ತಿನೀಡಿ ಗೌರವಿಸಲಾಯಿತು. ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಪ್ರಶಸ್ತಿ ಸ್ವೀಕರಿಸಿದರು.ಇದೇ ವೇಳೆ ಈ ಯೋಜನೆಯ ವಿನ್ಯಾಸ ಹಾಗೂ ಮೇಲುಸ್ತುವಾರಿ ನೋಡಿಕೊಂಡಿದ್ದ ಮೆಸರ್ಸ್. ಇಂಡಿಯಾ ಇಂಟರ್ ನ್ಯಾಷನಲ್ ಇನ್ ಫ್ರಾಸ್ಟ್ರಕ್ಚರ್ ಎಂಜಿನಿಯರ್ಸ್ ಲಿಮಿಟೆಡ್ ಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಯೋಜನೆಯಲ್ಲಿ ಭಾಗಿಯಾಗಲು ಅವಕಾಶ ಕೊಟ್ಟಿದ್ದಕ್ಕೆ ಅಶೋಕ್ ಖೇಣಿಗೆ ಐಐಐಇ ತಂಡ ಅಭಿನಂದನೆ ಸಲ್ಲಿಸಿತು.ಇದೇ ಯೋಜನೆಗೆ 2013ರ ಸೆಪ್ಟೆಂಬರ್ ತಿಂಗಳಲ್ಲಿ ಇಂಡಿಯನ್ ಕಾಂಕ್ರೀಟ್ ಇನ್ ಸ್ಟಿಟ್ಯೂಟ್-ಕರ್ನಾಟಕ ಬೆಂಗಳೂರು ಸೆಂಟರ್ ನೀಡುವ ಕರ್ನಾಟಕ ಅತ್ಯುತ್ತಮ ಕಾಂಕ್ರೀಟ್ ಯೋಜನೆ - 2013 ಪ್ರಶಸ್ತಿ ಲಭಿಸಿತ್ತು.ಯೋಜನೆಯು ಯಾವುದೇ ಅಡ್ಡ ಪರಿಣಾಮ ಬೀರಲ್ಲ ಎಂದ ಪ್ರಶಸ್ತಿ ಆಯ್ಕೆ ಸಮಿತಿ ಉತ್ತಮ ಗುಣಮಟ್ಟಕ್ಕೆ ಶ್ಲಾಘನೆ ವ್ಯಕ್ತಪಡಿಸಿತು. 60 ವರ್ಷ ಈ ರಸ್ತೆ ಏನೂ ಆಗಲ್ಲ ಎಂದು ಐಐಐಇ ಹೇಳಿಕೊಂಡಿದೆ. ಭಾರಿ ವಾಹನಗಳ ಇಂಧನ ಬಳಕೆ ಈ ರಸ್ತೆಯಲ್ಲಿ ಕಡಿಮೆಯಾಗಲಿದೆ.ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅತಿ ಕಡಿಮೆ ಕಾರ್ಬನ್ ಅಂಶವನ್ನು ಬಿಡುಗಡೆ ಮಾಡುತ್ತದೆ. ಜಾಗತಿಕ ತಾಪಮಾನ ಇಳಿಕೆಗೆ ಇದು ಸಹಕಾರಿಯಾಗಲಿದೆ. ಇಂಧನ ಉಳಿತಾಯ, ಉಷ್ಣತೆಯಲ್ಲಿ ಇಳಿಕೆ ಸೇರಿದಂತೆ ಹಲಾವರು ಧನಾತ್ಮಕ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. (ಒನ್ಇಂಡಿಯಾ ಕನ್ನಡ)" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶೋಕ್ ಖೇಣಿ 'ನೈಸ್' ಸಂಸ್ಥೆಗೆ ಶ್ರೇಷ್ಠ ನಿರ್ಮಾಣ ಪ್ರಶಸ್ತಿ

By Rajendra
|
Google Oneindia Kannada News

ಬೆಂಗಳೂರು, ಮಾ.12: ಕೇಂದ್ರ ಸರ್ಕಾರದ ಯೋಜನಾ ಆಯೋಗದ ಸಿಐಡಿಸಿ ಹಾಗೂ ಕನ್ ಸ್ಟ್ರಕ್ಷನ್ ಇಂಡಸ್ಟ್ರಿ ನೀಡುವ ಬೆಸ್ಟ್ ಕನ್ ಸ್ಟ್ರಕ್ಷನ್ ಪ್ರಶಸ್ತಿಯನ್ನು ನೈಸ್ ಸಂಸ್ಥೆ (ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್) ಪಡೆದುಕೊಂಡಿದೆ. ಅತ್ಯುತ್ತಮ ಕಾಮಗಾರಿಗಾಗಿ ಈ ಪ್ರಶಸ್ತಿ ನೈಸ್ ಸಂಸ್ಥೆಗೆ ಲಭ್ಯವಾಗಿದೆ.

ನವದೆಹಲಿಯ ಲೋಧಿ ರಸ್ತೆಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನ ಸ್ಟೀನ್ ಸಭಾಂಗಣದಲ್ಲಿ ಮಾರ್ಚ್ 7ರಂದು ನಡೆದ 18ನೇ ಸಿಐಡಿಸಿ ವಾರ್ಷಿಕ ದಿನಾಚರಣೆ ಹಾಗೂ 6ನೇ ಸಿಐಡಿಸಿ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ ನೈಸ್ ಸಂಸ್ಥೆಗೆ ಪ್ರಶಸ್ತಿನೀಡಿ ಗೌರವಿಸಲಾಯಿತು. ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಪ್ರಶಸ್ತಿ ಸ್ವೀಕರಿಸಿದರು.

ಇದೇ ವೇಳೆ ಈ ಯೋಜನೆಯ ವಿನ್ಯಾಸ ಹಾಗೂ ಮೇಲುಸ್ತುವಾರಿ ನೋಡಿಕೊಂಡಿದ್ದ ಮೆಸರ್ಸ್. ಇಂಡಿಯಾ ಇಂಟರ್ ನ್ಯಾಷನಲ್ ಇನ್ ಫ್ರಾಸ್ಟ್ರಕ್ಚರ್ ಎಂಜಿನಿಯರ್ಸ್ ಲಿಮಿಟೆಡ್ ಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಯೋಜನೆಯಲ್ಲಿ ಭಾಗಿಯಾಗಲು ಅವಕಾಶ ಕೊಟ್ಟಿದ್ದಕ್ಕೆ ಅಶೋಕ್ ಖೇಣಿಗೆ ಐಐಐಇ ತಂಡ ಅಭಿನಂದನೆ ಸಲ್ಲಿಸಿತು.

ಇದೇ ಯೋಜನೆಗೆ 2013ರ ಸೆಪ್ಟೆಂಬರ್ ತಿಂಗಳಲ್ಲಿ ಇಂಡಿಯನ್ ಕಾಂಕ್ರೀಟ್ ಇನ್ ಸ್ಟಿಟ್ಯೂಟ್-ಕರ್ನಾಟಕ ಬೆಂಗಳೂರು ಸೆಂಟರ್ ನೀಡುವ 'ಕರ್ನಾಟಕ ಅತ್ಯುತ್ತಮ ಕಾಂಕ್ರೀಟ್ ಯೋಜನೆ - 2013' ಪ್ರಶಸ್ತಿ ಲಭಿಸಿತ್ತು.

NICE road gets award
ಯೋಜನೆಯು ಯಾವುದೇ ಅಡ್ಡ ಪರಿಣಾಮ ಬೀರಲ್ಲ ಎಂದ ಪ್ರಶಸ್ತಿ ಆಯ್ಕೆ ಸಮಿತಿ ಉತ್ತಮ ಗುಣಮಟ್ಟಕ್ಕೆ ಶ್ಲಾಘನೆ ವ್ಯಕ್ತಪಡಿಸಿತು. 60 ವರ್ಷ ಈ ರಸ್ತೆ ಏನೂ ಆಗಲ್ಲ ಎಂದು ಐಐಐಇ ಹೇಳಿಕೊಂಡಿದೆ. ಭಾರಿ ವಾಹನಗಳ ಇಂಧನ ಬಳಕೆ ಈ ರಸ್ತೆಯಲ್ಲಿ ಕಡಿಮೆಯಾಗಲಿದೆ.

ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅತಿ ಕಡಿಮೆ ಕಾರ್ಬನ್ ಅಂಶವನ್ನು ಬಿಡುಗಡೆ ಮಾಡುತ್ತದೆ. ಜಾಗತಿಕ ತಾಪಮಾನ ಇಳಿಕೆಗೆ ಇದು ಸಹಕಾರಿಯಾಗಲಿದೆ. ಇಂಧನ ಉಳಿತಾಯ, ಉಷ್ಣತೆಯಲ್ಲಿ ಇಳಿಕೆ ಸೇರಿದಂತೆ ಹಲಾವರು ಧನಾತ್ಮಕ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. (ಒನ್ಇಂಡಿಯಾ ಕನ್ನಡ)

English summary
Construction Industry Development Council (CIDC), established by The Planning Commission and the Construction Industry has awarded Nandi Infrastructure Corridor Enterprise (NICE) project for “Construction of Rigid Pavement” as Best Construction Project-2014 in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X