ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಹಬ್ಬದ ಕೊಡುಗೆ : ಲೋಡ್ ಶೆಡ್ಡಿಂಗ್ ವಾಪಸ್ ಪಡೆದ ಬೆಸ್ಕಾಂ

|
Google Oneindia Kannada News

ಬೆಂಗಳೂರು, ಸೆ.16 : ಬೆಂಗಳೂರಿನ ಜನರಿಗೆ ಬೆಸ್ಕಾಂ ಗಣೇಶ ಹಬ್ಬದ ಉಡುಗೊರೆ ನೀಡಿದ್ದು ಬುಧವಾರದಿಂದಲೇ ನಗರದಲ್ಲಿ ಲೋಡ್ ಶೆಡ್ಡಿಂಗ್ ರದ್ದುಗೊಳಿಸಲಾಗಿದೆ. ಪ್ರತಿದಿನ ನಗರದಲ್ಲಿ ಮೂರು ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು.

ವಿದ್ಯುತ್ ಕೊರತೆಯ ಕಾರಣ ನಗರದಲ್ಲಿ ಮೊದಲು 4 ಗಂಟೆ ಲೋಡ್ ಶೆಡ್ಡಿಂಗ್ ಜಾರಿಗೆ ತರಲಾಗಿತ್ತು. ಕೆಲವು ದಿನಗಳಿಂದ ವಿದ್ಯುತ್‌ ಉತ್ಪಾದನೆಯ ಪ್ರಮಾಣ ಸುಧಾರಿಸಿದ ಕಾರಣ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಲೋಡ್ ಶೆಡ್ಡಿಂಗ್‌ ರದ್ದುಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

load shedding

ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರ, ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರದಿಂದ ಯಾವುದೇ ಲೋಡ್‌ ಶೆಡ್ಡಿಂಗ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ಈ ಆದೇಶ ಇತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅನ್ವಯವಾಗುವುದಿಲ್ಲ. [ವಿದ್ಯುತ್ ಸಮಸ್ಯೆ ಬಗೆಹರಿಸುವುದು ಹೇಗೆ?]

1 ಗಂಟೆ ಕಡಿತಗೊಂಡಿತ್ತು : ಕಳೆದ ವಾರ ನಗರದಲ್ಲಿ ವಸತಿ ಪ್ರದೇಶದಲ್ಲಿ 4 ತಾಸು, ವಾಣಿಜ್ಯ ಪ್ರದೇಶಗಳಲ್ಲಿ 3 ತಾಸು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ 2 ತಾಸು ಲೋಡ್‌ ಶೆಡ್ಡಿಂಗ್ ಜಾರಿಯಲ್ಲಿತ್ತು. ಮಂಗಳವಾರ ಇದನ್ನು 1 ಗಂಟೆ ಕಡಿತಗೊಳಿಲಾಗಿತ್ತು. ಮಂಗಳವಾರ ರಾತ್ರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಎಲ್ಲಿ ವಿದ್ಯುತ್ ಉತ್ಪಾದನೆ? : ಉಡುಪಿ ಉಷ್ಣ ವಿದ್ಯುತ್ ಸ್ಥಾವರ 1,100 ಮೆಗಾವಾಟ್‌ ಹಾಗೂ ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರದಿಂದ 430 ಮೆಗಾವಾಟ್‌ ವಿದ್ಯುತ್‌ ಪೂರೈಕೆ ಆರಂಭಗೊಂಡಿದೆ. ಪವನ ವಿದ್ಯುತ್‌ ಪೂರೈಕೆಯೂ ಸುಧಾರಿಸಿದೆ. ಆದ್ದರಿಂದ, ಲೋಡ್ ಶೆಡ್ಡಿಂಗ್ ಕಡಿತಗೊಂಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ. ಆದರೆ, ನಿರ್ವಹಣಾ ಕಾಮಗಾರಿ ಮುಂತಾದ ತುರ್ತು ಕಾರಣಗಳಿಗೆ ಅನಿಯಮಿತ ವಿದ್ಯುತ್‌ ಕಡಿತ ಇರಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

English summary
Load shedding completely withdrew in Bengaluru city, and towns/cities and villages under the Bangalore Electricity Supply Company (Bescom).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X