ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಇ-ವಾಹನಗಳನ್ನು ಇನ್ಮುಂದೆ ಬೆಸ್ಕಾಂ ಚಾರ್ಜ್ ಮಾಡುತ್ತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಮೊಬೈಲ್‌ಗಳಲ್ಲಿ ಚಾರ್ಜ್ ಕಡಿಮೆ ಆದರೆ ಚಾರ್ಜರ್ ಇರುತ್ತೆ, ಒಂದೊಮ್ಮೆ ಇ-ವಾಹನಗಳ ಬ್ಯಾಟರಿ ಲೋ ಆದರೆ, ಮಧ್ಯ ರಸ್ತೆಯಲ್ಲೇ ನಿಂತುಬಿಟ್ಟರೆ ಎಂಬ ಭಯ ಬೇಡ ಇನ್ನುಮುಂದೆ ಬೆಸ್ಕಾಂನಲ್ಲೂ ಕೂಡ ಇ-ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ.

ಮುಂದಿನ ಒಂದು ತಿಂಗಳೊಳಗಾಗಿ ಬೆಸ್ಕಾಂ 80 ಕಡೆಗಳಲ್ಲಿ ಒಟ್ಟು 100 ಇ-ವಾಹನ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡುತ್ತಿದೆ. ಈ ಚಾರ್ಜಿಂಗ್ ಕೇಂದ್ರಗಳು ಎಲ್ಲಿವೆ ಎಂದು ಅಪ್ಲಿಕೇಷನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಸರತಿಯನ್ನು ತಪ್ಪಿಸಲು ಮೊದಲೇ ಬುಕಿಂಗ್ ಮಾಡಿಕೊಳ್ಳಬೇಕಾಗಿದೆ.

ಇ-ವಾಹನ ರಿಚಾರ್ಜ್ ಸೆಂಟರ್: ಸಬ್ಸಿಡಿ ನೀಡುವಂತೆ ಕೆಇಆರ್ ಗೆ ಬೆಸ್ಕಾಂ ಪ್ರಸ್ತಾವ ಇ-ವಾಹನ ರಿಚಾರ್ಜ್ ಸೆಂಟರ್: ಸಬ್ಸಿಡಿ ನೀಡುವಂತೆ ಕೆಇಆರ್ ಗೆ ಬೆಸ್ಕಾಂ ಪ್ರಸ್ತಾವ

ಒಂದು ಯೂನಿಟ್‌ಗೆ 5 ರೂನಂತೆ ಹಣ ನೀಡಬೇಕಾಗುತ್ತದೆ. ಕೆಲವೊಂದು ಕಡೆ ಈಗಾಗಲೇ ಇ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಪ್ಲಿಕೇಷನ್ ಮೂಲಕ ಬಳಕೆ ಮಾಡಬಹುದು, ಸಾಫ್ಟ್‌ವೇರ್‌ಗಳನ್ನು ಅಳವಡಿಸಲಾಗುತ್ತಿದೆ.

Bescom To Set Up E-Vehicle Charging Stations In 80 Different Locations

ಇ-ವಾಹನ ಬಳಕೆದಾರರು ಪ್ಲೇಸ್ಟೋರ್‌ನಲ್ಲಿ ಬೆಸ್ಕಾಂ ಮಿತ್ರ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.ಸಧ್ಯಕ್ಕೆ ಒಟ್ಟು 12 ಕಡೆ ಅಂದರೆ ಇಂದಿರಾನಗರ, ಹಳೆ ಏರ್‌ಪೋರ್ಟ್ ರಸ್ತೆ, ಬಿಟಿಎಂ ಲೇಔಟ್, ಮೈಸೂರು ರಸ್ತೆ, ಆರ್‌ಆರ್‌ ನಗರ, ಬಾಣಸವಾಡಿ, ಕತ್ರಿಗುಪ್ಪೆ , ಪೀಣ್ಯ, ಯಲಹಂಕ ಬೆಸ್ಕಾಂ ಕಚೇರಿ ಬಳಿ ಕೇಂದ್ರ ಆರಂಭಿಸಲಾಗುತ್ತಿದೆ. ಮೂರು ವರ್ಷ ಗುತ್ತಿಗೆ ಆಧಾರದಲ್ಲಿ ಯೋಜನೆ ಸಿದ್ಧಗೊಂಡಿದೆ 2.30 ಕೋಟಿ ರೂ ವೆಚ್ಚ ತಗುಲಲಿದೆ.

English summary
Bescom Will Start 100 E-Vehicle Charging Stations In 80 Different Locations in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X