ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡಿಶಾದಲ್ಲಿ ಚಂಡಮಾರುತ, ಬೆಸ್ಕಾಂ ತಂಡದ ಕಾರ್ಯಕ್ಕೆ ಶ್ಲಾಘನೆ

|
Google Oneindia Kannada News

ಬೆಂಗಳೂರು, ಮೇ 29 : ಒಡಿಶಾ ರಾಜ್ಯದಲ್ಲಿ ಫೋನಿ ಚಂಡಮಾರುತದ ಅಬ್ಬರದಿಂದಾಗಿ ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿತ್ತು. ಕರ್ನಾಟಕದಿಂದ ಬೆಸ್ಕಾಂ 300 ಜನರ ತಂಡವನ್ನು ಕಟಕ್‌ಗೆ ಕಳಿಸಿತ್ತು. ಬೆಸ್ಕಾಂ ತಂಡದ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಒಡಿಶಾ ರಾಜ್ಯದ ಕಟಕ್‌ ಜಿಲ್ಲೆಯಲ್ಲಿ ಫೋನಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಮರುಸ್ಥಾಪಿಸಲು ಬೆಸ್ಕಾಂನಿಂದ ಇಂಜಿನಿಯರ್‌ಗಳನ್ನು ಸೇರಿಸಿ 300 ಜನರ ತಂಡವನ್ನು ಕಳಿಸಲಾಗಿತ್ತು.

ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?

ಬೆಸ್ಕಾಂ ತಂಡ ಕಾರ್ಯ ಮುಗಿದಿದ್ದು ಅವರು ಬುಧವಾರ ಬೆಳಗ್ಗೆ ಭುವನೇಶ್ವರದಿಂದ ಹೊರಟಿದ್ದಾರೆ. ಮೇ 30ರಂದು ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?

Bescom team to return Bengaluru after restoration work at Odisha

ಕರ್ನಾಟಕದಿಂದ ತೆರಳಿದ್ದ ತಂಡ 66 ವಿತರಣಾ ಪರಿವರ್ತಕ ಕೇಂದ್ರ, 26 ಕಿ.ಮೀ. 11 ಕೆವಿ ಲೈನ್, 47 ಕಿ.ಮೀ. ಎಲ್‌.ಟಿ ಲೈನ್‌ ಅನ್ನು ಸರಿಪಡಿಸಿ ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಿದೆ.

ಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋ

42 ಮತ್ತು 43 ಡಿಗ್ರಿ ತಾಪಮಾನದ ವಾತಾವರಣದಲ್ಲಿ ಬೆಸ್ಕಾಂ ಸಿಬ್ಬಂದಿ ಕೆಲಸ ಮಾಡಿದ್ದಾರೆ. ವಿವಿಧ ಗ್ರಾಮಗಳ ಸುಮಾರು 14000 ಗ್ರಾಹಕರಿಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ.

ಕೆಲವೊಂದು ಹಳ್ಳಿಗಳಿಗೆ ರಸ್ತೆಯ ಮೂಲಕ ಸಾಗಲು ಸಹ ಕಷ್ಟದ ಪರಿಸ್ಥಿತಿ ಇತ್ತು. ಆದರೆ, ಬೆಸ್ಕಾಂನ ತಂಡ ಕಂಬ ಮುಂತಾದ ಸಾಮಾಗ್ರಿಗಳನ್ನು ಖುದ್ದಾಗಿ ತೆಗೆದುಕೊಂಡು ಹೋಗಿ ವಿದ್ಯುತ್ ವ್ಯವಸ್ಥೆ ಸರಿಪಡಿಸಿದ್ದಾರೆ.
ಬೆಸ್ಕಾಂ ತಂಡದ ಕಾರ್ಯವನ್ನು ಒಡಿಶಾದ ಕೇಂದ್ರ ವಿದ್ಯುತ್ ಸರಬರಾಜು ಯುಟಿಲಿಟಿಯವರು ಶ್ಲಾಘಿಸಿದ್ದಾರೆ.

English summary
300 people team of Bangalore Electricity Supply Company (Bescom) will come to Bengaluru after complete restoration work at Katak Odisha. Team sent to Katak after Fani cyclone hit the state and electricity supply disturbed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X