ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ-ವಾಹನ ರಿಚಾರ್ಜ್ ಸೆಂಟರ್: ಸಬ್ಸಿಡಿ ನೀಡುವಂತೆ ಕೆಇಆರ್ ಗೆ ಬೆಸ್ಕಾಂ ಪ್ರಸ್ತಾವ

|
Google Oneindia Kannada News

ಬೆಂಗಳೂರು, ಮಾರ್ಚ್ 15: ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಈಗಾಗಲೇ ನಗರದ ಅಲ್ಲಲ್ಲಿ ರೀಚಾರ್ಜ್ ಕೇಂದ್ರವನ್ನು ತೆರೆಯಲಾಗಿದೆ.

ಇದೀಗ ರೀಚಾರ್ಜ್ ಕೇಂದ್ರಕ್ಕೆ ವಿತರಿಸುವ ವಿದ್ಯುತ್ ಸಂಪರ್ಕಕ್ಕೆ ರಿಯಾಯಿತಿ ದರ ನಿಗದಿ ಕೋಡಿ ಬೆಸ್ಕಾಂ ನಿಂದ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿ ಎಲೆಕ್ಟ್ರಿಕ್ ವಾಹನಗಳಿಗೆ ರೀಚಾರ್ಜ್ ಕೇದ್ರವನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಇಂದು(ಫೆ.19) ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಕೇಂದ್ರಕ್ಕೆ ಚಾಲನೆಇಂದು(ಫೆ.19) ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಕೇಂದ್ರಕ್ಕೆ ಚಾಲನೆ

ಈ ಉದ್ದೇಶದಿಂದ ಬೆಸ್ಕಾಂ ಪ್ರತಿ ಯೂನಿಟ್ ಗೆ 5ರೂ. ದರ ನಿಗದಿಗೆ ಮನವಿ ಮಾಡಿದ್ದು, ಅಂತಿಮ ನಿರ್ಧಾರ ಕೆಇಆರ್ ಸಿಎಯಿಂದ ಇನ್ನಷ್ಟೇ ಬರಬೇಕಿದೆ. ಒಂದು ವೇಳೆ ರಿಯಾಯಿತಿ ಸಿಕ್ಕರೆ ಗ್ರಾಹಕರಿಗೆ ನೀಡುವ ಚಾರ್ಜಿಂಗ್ ದರದಲ್ಲಿ ಶೇ.10-15ರಷ್ಟು ಕಡಿಮೆ ಆಗಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

BESCOM seeks subsidy on E-vehicles recharge centres

ಸದಯ ಬಳಕೆದಾರರು ಪ್ರತಿ ಯೂನಿಟ್ ಗೆ 7.50 ರೂ ದರ ಪಾವತಿಸುತ್ತಿದ್ದಾರೆ. ಇದೇ ದರವನ್ನು ರೀಚಾರ್ಜ್ ಕೇಂದ್ರಕ್ಕೆ ಅನ್ವಯಿಸಿದರೆ ಎಲೆಕ್ಟ್ರಿಕ್ ವಾಹನ ಬಳಕೆ ದುಬಾರಿಯಾಗಲಿದೆ.

vಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸರ್ಕಾರಿ ಜಾಗದಲ್ಲಿ ರೀಚಾರ್ಜ್ ಕೇಂದ್ರ: ವಿದ್ಯುತ್ ರೀಚಾರ್ಜ್ ಕೇಂದ್ರಗಳ ಸ್ಥಾಪನೆಗೆ ಕನಿಷ್ಠ 15/15 ಅಡಿ ಅಗಲ ಜಾಗ ಬೇಕಿದೆ. ಹೆಚ್ಚಿನ ರೀಚಾರ್ಜ್ ಘಟಕಗಳನ್ನು ಅಳವಡಿಸಲು ಹೆಚ್ಚಿನ ಜಾಗ ಅಗತ್ಯವಿದೆ. ನಗರದಲ್ಲಿ ಜಾಗ ಪಡೆಯಲು ಕಷ್ಟವಾಗಿರುವ ಕಾರಣ ಆರಂಭಿಕ ಹಂತದಲ್ಲೇ ಸರ್ಕಾರಿ ಜಾಗದಲ್ಲೇ ಕೇಂದ್ರ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಆಯಾ ಇಲಾಖೆಗಳ ಸಹಕಾರ ಕೋರಲು ಬೆಸ್ಕಾಂ ಮುಂದಾಗಿದೆ.

English summary
Bengaluru Electricity supply company has sought subsidy on electric for electrical vehicles recharge centers which will come up in Bengaluru soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X