ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ವಾರದಲ್ಲಿ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ 736 ದೂರು

|
Google Oneindia Kannada News

ಬೆಂಗಳೂರು, ಜೂನ್ 2: ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಸೇವೆ ಆರಂಭಿಸಿದ ಒಂದೇ ವಾರದಲ್ಲಿ 8 ಜಿಲ್ಲೆಗಳಿಂದ 736 ದೂರುಗಳು ಬಂದಿವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ವಾಟ್ಸಪ್ ಸಹಾಯವಾಣಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇಂಧನ ಸಚಿವ ವಿ.ಸುನೀಲ್ ಕುಮಾರ್ ಕಳೆದ ವಾರ ಬೆಸ್ಕಾಂ ವಾಟ್ಸಪ್ ಸಹಾಯವಾಣಿ ಸೇವೆಗೆ ಚಾಲನೆ ನೀಡಿದ್ದರು. ಸಾರ್ವಜನಿಕರು ಬೆಸ್ಕಾಂ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ವಾಟ್ಸಪ್ ಮೂಲಕ ದಾಖಲಿಸಬಹುದಾಗಿದೆ. ವಿದ್ಯುತ್ ಸರಬರಾಜು ಸಮಸ್ಯೆ ಕುರಿತಂತೆ ಚಿತ್ರಗಳು ಮತ್ತು ಸ್ಥಳದ ಮಾಹಿತಿಯನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದರು.

ಬೆಂಗಳೂರು: ಫ್ಲೈಓವರ್‌ಗಳ ಆಡಿಟ್‌ಗೆ ಬಿಬಿಎಂಪಿ ತೀರ್ಮಾನ ಬೆಂಗಳೂರು: ಫ್ಲೈಓವರ್‌ಗಳ ಆಡಿಟ್‌ಗೆ ಬಿಬಿಎಂಪಿ ತೀರ್ಮಾನ

ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, 736 ದೂರುಗಳು ದಾಖಲಾಗಿದ್ದು, 628 ದೂರುಗಳ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ವಿದ್ಯುತ್ ತಂತಿಗೆ ಮರಗಳ ಕೊಂಬೆಗಳು ತಾಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ, ಹಾಗೆ ಜನವಸತಿ ಪ್ರದೇಶಗಳಿಂದ ಮತ್ತು ಟ್ರಾನ್ಸ್‌ಫಾರ್ಮರ್ ವೈಫಲ್ಯದ ಬಗ್ಗೆ ದೂರುಗಳು ದಾಖಲಾಗಿವೆ.

Bescom Received over 700 complaints after Launched WhatsApp Helpline

ವೀಡಿಯೋ ಮತ್ತು ಫೋಟೊಗಳನ್ನು ಕಳುಹಿಸುತ್ತಿರುವುದರಿಂದ ಸಮಸ್ಯೆಗಳನ್ನು ಬಗೆ ಹರಿಸುವುದು ಈಗ ಸುಲಭವಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

"ಸಹಾಯವಾಣಿ ಸಂಖ್ಯೆಗೆ ಬಂದ ದೂರಿನ ಫೋಟೊ ಮತ್ತು ವೀಡಿಯೋಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಇದರಿಂದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತಿದೆ" ಎಂದು ಬೆಸ್ಕಾಂ ಗ್ರಾಹಕ ಸಂಬಂಧಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್‌.ಆರ್‍‌. ನಾಗರಾಜು ತಿಳಿಸಿದರು.

ವಾಟ್ಸಪ್ ಸಹಾಯವಾಣಿಗೆ ಬರುವ ದೂರುಗಳನ್ನು ನಿರ್ವಹಣೆ ಮಾಡಲು ಪ್ರತಿ ಜಿಲ್ಲೆಗೆ ಬೆಸ್ಕಾಂ ನೋಡಲ್ ಅಧಿಕಾರಿಯನ್ನು ನೇಮಿಸಿದೆ.

ವಾಟ್ಸಾಪ್ ಮೂಲಕವೂ ಬೆಸ್ಕಾಂಗೆ ದೂರು ನೀಡಬಹುದುವಾಟ್ಸಾಪ್ ಮೂಲಕವೂ ಬೆಸ್ಕಾಂಗೆ ದೂರು ನೀಡಬಹುದು

ಸಮಸ್ಯೆಗಳಿಗೆ ತುರ್ತಾಗಿ ಸ್ಪಂದನೆ; ತುರ್ತು ಸಂದರ್ಭಗಳಲ್ಲಿ ಸಮಸ್ಯೆಗಳ ಬಗ್ಗೆ ದೂರು ನೀಡಲು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಬೆಸ್ಕಾಂ 8 ಜಿಲ್ಲೆಗಳಲ್ಲಿ 11 ವಾಟ್ಸಪ್ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಒಂದು ವಾರದಿಂದ ದೂರುಗಳನ್ನು ಸ್ವೀಕರಿಸುತ್ತಿದೆ.

Bescom Received over 700 complaints after Launched WhatsApp Helpline

ಮಳೆಗಾಲದಲ್ಲಿ ಬೆಸ್ಕಾಂ ಸಹಾಯವಾಣಿ 1912 ಸಂಖ್ಯೆಗೆ ಅನಿಯಮಿತ ಕರೆಗಳು ಬರುತ್ತಿರುವುದರಿಂದ ಸಮಸ್ಯೆಗೆ ಸರಿಯಾಗಿ ಸ್ಪಂದಿಸಲು ಆಗದ ಕಾರಣ ಬೆಸ್ಕಾಂ ಗ್ರಾಹಕರ ಅನುಕೂಲಕ್ಕಾಗಿ ವಾಟ್ಸಪ್ ಸಹಾಯವಾಣಿ ಆರಂಭಿಸಿದೆ.

ಸಹಾಯವಾಣಿ ಸಂಖ್ಯೆಗಳು

ಬೆಸ್ಕಾಂ ಗ್ರಾಹಕರಿಗೆ 11 ವಾಟ್ಸಪ್ ಸಂಖ್ಯೆಗಳನ್ನು ಒದಗಿಸಿದೆ. ನಾಲ್ಕು ವೃತ್ತಗಳನ್ನು (ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಪೂರ್ವ) ಹೊಂದಿರುವ ಬೆಂಗಳೂರು ನಗರ ಜಿಲ್ಲೆಗೆ ನಾಲ್ಕು ಪ್ರತ್ಯೇಕ ವಾಟ್ಸಪ್ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

ಸಹಾಯವಾಣಿ ಸಂಖ್ಯೆಗಳು:

ಬೆಂಗಳೂರು ನಗರ ಜಿಲ್ಲೆ
ದಕ್ಷಿಣ ವೃತ್ತ: 8277884011
ಪಶ್ಚಿಮ ವೃತ್ತ: 8277884012
ಪೂರ್ವ ವೃತ್ತ:8277884013
ಉತ್ತರ ವೃತ್ತ:8277884014,
ಕೋಲಾರ: 8277884015
ಚಿಕ್ಕಬಳ್ಳಾಪುರ: 8277884016
ಬೆಂಗಳೂರು ಗ್ರಾಮಾಂತರ: 8277884017
ರಾಮನಗರ: 8277884018
ತುಮಕೂರು: 8277884019
ಚಿತ್ರದುರ್ಗ: 8277884020

Recommended Video

Kia Ev6 ಹೊಸ ಗಾಡಿಯ ಬಗ್ಗೆ ನೀವು ತಿಳಿಯಬೇಕಾದ ವಿಚಾರ | OneIndia Kannada

English summary
The Bangalore Electricity Supply Company Limited (BESCOM) has Received over 700 complaints within a week after Launched WhatsApp Helpline in 8 Districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X