ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂ ಸಮಸ್ಯೆ ಹೇಳಿಕೊಳ್ಳೋಕೆ ಇಲ್ಲಿವೆ ಹಲವು ಮಾರ್ಗ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಗ್ರಾಹಕರಿಗೆ ವಿದ್ಯುತ್ ಸೇವೆಗೆ ಸಂಬಂಧಿಸಿದಂತೆ ದೂರು ನೀಡುವುದು ಮತ್ತಷ್ಟೂ ಸುಲಭವಾಗಿದೆ. ಬೆಸ್ಕಾಂ ಸಮಸ್ಯೆ ಹೇಳಿಕೊಳ್ಳೋಕೆ ನಿಮಗೆ ಸಾಕಷ್ಟು ಮಾರ್ಗಗಳಿವೆ. ಆನ್‌ಲೈನ್‌ ಬಿಲ್ಲಿಂಗ್, ವಿದ್ಯುತ್ ಶುಲ್ಕ ಪಾವತಿ,ವಿದ್ಯುತ್ ಸಂಪರ್ಕ, ಪವರ್‌ಕಟ್ ಏನೇ ಸಮಸ್ಯೆಗಳಿದ್ದರೂ ಸುಲಭವಾಗಿ ದೂರು ಸಲ್ಲಿಸಬಹುದಾಗಿದೆ.

ವಿದ್ಯುತ್ ಸರಬರಾಜು ಸಂಬಂಧಿತ ಯಾವುದೇ ಸಮಸ್ಯೆ ಇದ್ದರೂ ಈ ಮೊದಲು ಬೆಸ್ಕಾಂ ಸಹಾಯವಾಣಿಯನ್ನೇ ಅವಲಿಂಬಿಸಬೇಕಿತ್ತು ಆದರೆ, ಈಗ ಹಲವು ಸಂಪರ್ಕಗಳಿವೆ, 27/7 ಸಹಾಯವಾಣಿ 1912ಗೆ ಕರೆ ಮಾಡಿ ದೂರು ನೀಡಬಹುದು. 58888 ನಂಬರ್‌ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ದೂರು ದಾಖಲಿಸಬಹುದು.

ಕರೆಂಟ್ ಹೋದರೆ ದೂರು ಬೇಕಿಲ್ಲ: ಬೆಸ್ಕಾಂಗೆ ಆಟೋಮೆಟಿಕ್ ಮಾಹಿತಿ ಕರೆಂಟ್ ಹೋದರೆ ದೂರು ಬೇಕಿಲ್ಲ: ಬೆಸ್ಕಾಂಗೆ ಆಟೋಮೆಟಿಕ್ ಮಾಹಿತಿ

9449844640ಗೆ ವಾಟ್ಸಪ್ ಮಾಡಬಹುದು, ಬೆಸ್ಕಾಂ ಫೇಸ್‌ಬುಕ್ ಪೇಜ್, @NammaBescom ಟ್ವಿಟ್ಟರ್, ಇಮೇಲ್‌[email protected] ಅಥವಾ [email protected]ಗೆ ಇಮೇಲ್ ಕಳುಹಿಸಬಹುದು. ಬೆಸ್ಕಾಂ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ನೀಡಬಹುದು, ಬೆಸ್ಕಾಂಗೆ ದೂರು ಸಲ್ಲಿಸಲು ಈ ಮಾರ್ಗಗಳನ್ನು ಅನುಸರಿಸಿದರೆ ಶೀಘ್ರವಾಗಿ ನಿಮ್ಮ ದೂರಿಗೆ ಸ್ಪಂದಿಸಿ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

BESCOM provides many forums to address queries

ಅಷ್ಟೇ ಅಲ್ಲದೆ ಬೆಂಗಳೂರಿನ ನಾಗರಿಕರು ಇನ್ನುಮುಂದೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಬೆಸ್ಕಾಂ ಸಹಾಯವಾಣಿ ಅಥವಾ ಎಸ್ಎಂಎಸ್ ಮೂಲಕ ಕಂಟ್ರೋಲ್ ರೂಂಗೆ ಕರೆ ಮಾಡಬೇಕಿಲ್ಲ.

ಬೆಸ್ಕಾಂ ವಿದ್ಯುತ್ ಖರೀದಿ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ವಿರೋಧಬೆಸ್ಕಾಂ ವಿದ್ಯುತ್ ಖರೀದಿ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ವಿರೋಧ

ಯಾವುದೇ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾದರೂ ರಿಮೋಟ್ ಸೆನ್ಸಾರ್ ತಂತ್ರಜ್ಞಾನದ ಮೂಲಕ 11 ಕೆವಿ ವಿದ್ಯುತ್ ಕೇಂದ್ರಕ್ಕೆ ಡಿಸ್ಟ್ರಿಬ್ಯೂಷನ್ ಆಟೊಮೇಟೆಡ್ ಸಿಸ್ಟಮ್ ನೇರ ಮಾಹಿತಿ ರವಾನಿಸುತ್ತದೆ. ಈ ನೂತನ ವ್ಯವಸ್ಥೆಯನ್ನು ಬೆಂಗಳೂರಿನ ಎಲ್ಲಾ 11 ಕೆವಿ ಕೇಂದ್ರಗಳಲ್ಲಿ ಅಳವಡಿಸಲು ಬೆಸ್ಕಾಂ ಮುಂದಾಗಿದೆ.

ಬೆಸ್ಕಾಂ ಆನ್‌ಲೈನ್ ಸೇವೆಗೆ 14 ಸಾವಿರ ಅರ್ಜಿ ಸಲ್ಲಿಕೆ ಬೆಸ್ಕಾಂ ಆನ್‌ಲೈನ್ ಸೇವೆಗೆ 14 ಸಾವಿರ ಅರ್ಜಿ ಸಲ್ಲಿಕೆ

ಈ ಹೊಸ ಯೋಜನೆಯಿಂದ 5 ರಿಂದ 10 ನಿಮಿಷದಲ್ಲಿ ಕರೆಂಟ್ ಪಡೆಯಬಹುದು, ಮೊದಲು ಸಾರ್ವಜನಿಕರು ಕರೆ ಮಾಡಿ ಎಲ್ಲಿ ತೊಂದರೆಯಾಗಿದೆ ಯಾವ ಭಾಗದಲ್ಲಿ ಕರೆಂಟ್ ಹೋಗಿದೆ ಎಂದು ಮಾಹಿತಿ ನೀಡಿ, ನಂತರ ಕಂಟ್ರೋಲ್ ರೂಮಿನಲ್ಲಿರುವ ಸಿಬ್ಬಂದಿಗಳು ಮಾಹಿತಿ ರವಾನೆ ಮಾಡಿ, ಕರೆಂಟ್ ಬರುವುದು40 ನಿಮಿಷದಿಂದ 1 ಗಂಟೆ ಕಾಲ ಬೇಕಿತ್ತು ಆದರೆ ಇದೀಗ 15 ನಿಮಿಷಗಳೊಳಗಾಗಿ ಕರೆಂಟ್ ಬರಲಿದೆ.

English summary
If you have any complaint related to bescom services then you have many forum to register your concerns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X