ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂ ಗ್ರಾಹಕ ಸ್ನೇಹಿ ಪವರ್ಡ್ ಚಾಟ್‌ಬೋಟ್ಸ್‌ನಲ್ಲಿ ಹಿಂದಿ ಏಕೆ?

|
Google Oneindia Kannada News

ಬೆಂಗಳೂರು, ಜನವರಿ 19: ಬೆಸ್ಕಾಂ ಗ್ರಾಹಕ ಸ್ನೇಹಿಯಾಗಲು ಆರಂಭಿಸುತ್ತಿರುವ 'ಪವರ್ಡ್ ಚಾಟ್‌ಬೋಟ್ಸ್' ಎನ್ನುವ ಹೊಸ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ, ಇಂಗ್ಲಿಷ್ ಭಾಷೆ ಓಕೆ ಆದರೆ ಹಿಂದೆ ಏಕೆ ಎಂದು ಕನ್ನಡ ಗ್ರಾಹಕ ಕೂಟದ ಅರುಣ್ ಜಾವಗಲ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿದರೆ ಸಾಕು ಹಿಂದಿಯ ಅಗತ್ಯವೇನಿದೆ ಎಂದು ಹೇಳಿದ್ದಾರೆ. ಹಾಗಾದರೆ ಪವರ್ಡ್ ಚಾಟ್‌ಬೋಟ್ಸ್ ಎಂದರೇನು ಎಂದು ನೋಡುವುದಾದರೆ ಪವರ್ ಕಟ್ ಇನ್ನಿತರೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಸ್ಕಾಂಗೆ ನಿತ್ಯ ಸಾವಿರಾರು ದೂರುಗಳು ಬರುತ್ತವೆ.

ಆದರೆ ಎಲ್ಲಾ ದೂರುಗಳನ್ನು ಒಂದೇ ಸಮಯದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಪವರ್ಡ್ ಚಾಟ್‌ಬೋಟ್ಸ್ ಎನ್ನುವ ಹೊಸ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

Bescom powered chatbots in multiple languages why?

ಇದು ಕೇವಲ ಕಂಪ್ಯೂಟರ್‌ನ ಒಂದು ಪ್ರೋಗ್ರಾಮ್ ಆಗಿದ್ದು ಮನುಷ್ಯರ ರೀತಿಯಲ್ಲಿಯೇ ವ್ಯವಹರಿಸುತ್ತದೆ, ಮೆಸೇಜ್‌ಗಳು, ಕಾಲ್‌ಗಳನ್ನು ರಿಸೀವ್ ಮಾಡುತ್ತದೆ ಜೊತೆಗೆ ಎಸ್‌ಎಂಎಸ್‌ಗಳು ಆಟೊಮೆಟಿಕ್‌ ಆಗಿ ಗ್ರಾಹಕರಿಗೆ ಕಳುಹಿಸುವಂತಹ ಒಂದು ಸಾಧನವಾಗಿದೆ.

ಅದರಲ್ಲಿ ಮೂರು ಭಾಷೆಗಳನ್ನು ಅಳವಡಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಗ್ರಾಹಕರಿಗೆ ಈ ಮೂರು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿ ಅಗತ್ಯವಿಲ್ಲ ಎನ್ನುವುದು ಅರುಣ್ ಜಾವಗಲ್ ಸೇರಿದಂತೆ ಇನ್ನಿತರೆ ಕನ್ನಡಪರ ಕಾರ್ಯಕರ್ತರ ವಾದವಾಗಿದೆ.

English summary
Grahakara koota's Arun Javgal questioned that Bescom preparing to put in place a new army — AI (artificial intelligence)-powered chatbots — to deal with the innumerable calls and messages that its multiple helplines receive. kannada, English ok but why out put in multiple languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X