ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಲು ಮುಂದಾದ ಬೆಸ್ಕಾಂ

|
Google Oneindia Kannada News

ಬೆಂಗಳೂರು, ಜನವರಿ 25: ರಾಜ್ಯದಲ್ಲಿ ದೊಡ್ಡ ವಿದ್ಯುತ್ ಸರಬರಾಜು ಕಂಪೆನಿಯಾಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (BESCOM) ಬರುವ ಆರ್ಥಿಕ ವರ್ಷದಲ್ಲಿ (2020-21) ತನ್ನ ಗ್ರಾಹಕರಿಗೆ ಶಾಕ್ ಕೊಡಲು ಸಿದ್ಧವಾಗಿದೆ.

ಪ್ರತಿ ಯುನಿಟ್ ವಿದ್ಯುತ್ ದರವನ್ನು 1.96 ರುಪಾಯಿಯಷ್ಟು ಹೆಚ್ಚಳ ಮಾಡಬೇಕು ಎಂದು ಬೆಸ್ಕಾಂ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KREC) ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷವೂ ಬೆಸ್ಕಾಂ 1.67 ರುಪಾಯಿ ಹೆಚ್ಚಳಕ್ಕೆ ಪ್ರಸ್ತಾನವೆ ಕೊಟ್ಟಿತ್ತು. ಆದರೆ, ವಿದ್ಯುತ್ ನಿಯಂತ್ರಣ ಆಯೋಗ 33 ಪೈಸೆ ಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಿತ್ತು.

ನಮ್ಮ ಬೆಂಗಳೂರು; ಒಂದೇ App ನಲ್ಲಿ ಎಲ್ಲಾ ಮಾಹಿತಿನಮ್ಮ ಬೆಂಗಳೂರು; ಒಂದೇ App ನಲ್ಲಿ ಎಲ್ಲಾ ಮಾಹಿತಿ

ಬೆಸ್ಕಾಂ ಕೊರತೆ ಬಜೆಟ್ ಅನುಭವಿಸುತ್ತಿದ್ದು, ವಿದ್ಯುತ್ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ. 1.96 ರುಪಾಯಿ ಹೆಚ್ಚಳ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಬೆಸ್ಕಾಂ ಹೇಳಿದೆ. ಸರ್ಕಾರ ನೀರಾವರಿ ಜಮೀನಿನ ಪಂಪ್‌ಸೆಟ್‌ಗಳಿಗೆ ನೀಡುವ ಸಬ್ಸಿಡಿಯನ್ನು ಶೇ 3 ರಷ್ಟು ಹೆಚ್ಚಿಸಿದರೆ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ತಿಳಿಸಿದೆ.

BESCOM Likely Price Hike Of Per Unit Current

ಸದ್ಯ ಬೆಸ್ಕಾಂ ತನ್ನ ಸಾಮಾನ್ಯ ಗ್ರಾಹಕರಿಗೆ ಪ್ರತಿ ಯುನಿಟ್‌ ವಿದ್ಯುತ್‌ಗೆ 5.35 ರುಪಾಯಿ ತೆಗೆದುಕೊಳ್ಳುತ್ತದೆ. ಕೈಗಾರಿಕಾ ಚಟುವಟಿಕೆಗಳ ಬಳಕೆಯ ಪ್ರತಿ ಯುನಿಟ್‌ಗೆ 6.60 ರುಪಾಯಿ ತೆಗೆದುಕೊಳ್ಳುತ್ತದೆ. ದರ ಹೆಚ್ಚಳದ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

English summary
Bangalore Electricity Supply Company (BESCOM) Likely Price Hike Of Per Unit Current. it will be 1.96 rupees for 1 unit current. bescom submit the proposal to Karnataka Electricity Regulatory Commission (KREC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X