• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಅ. 16ರಿಂದ 22ರವರೆಗೆ ಪವರ್ ಕಟ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಬೆಸ್ಕಾಂನ ಸಾಮಾಜಿಕ ಜಾಲತಾಣಗಳಲ್ಲಂತೂ ಪೂರ್ತಿಯಾಗಿ ದಿನನಿತ್ಯ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ಮಾಹಿತಿಯೇ ತುಂಬಿರುತ್ತದೆ. ಅಕ್ಟೋಬರ್ 16ರಿಂದ ಕೂಡಾ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಫೀಡರ್​ಗಳು ಹಾಳಾಗಿವೆ, ತುರ್ತು ನಿರ್ವಹಣೆ ಮಾಡಬೇಕಾಗಿರುವುದರಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಕ್ಸಾಂ ಮಾಹಿತಿ ನೀಡಿದೆ. ಬೆಸ್ಕಾಂ ನೀಡಿರುವ ಮಾಹಿತಿಯಂತೆ ಈ ಕೆಳಗಿನ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಅಕ್ಟೋಬರ್ 16ರಂದು ಎಚ್​ಎಸ್​ಆರ್​ ಲೇಔಟ್, ನಾಯಕ್ ಲೇಔಟ್, ಸುರಭಿನಗರ, ಹೊಂಗಸಂದ್ರ 10ರಿಂದ 16ನೇ ಮುಖ್ಯರಸ್ತೆ, ಮೈಕೋ ಲೇಔಟ್, ಬಿಟಿಎಂ ಲೇಔಟ್, ನಾಗನಾಥಪುರ, ಸಿಕೆ ನಗರ, ಹೊಸ ರೋಡ್, ದೊಡ್ಡ ತೋಗೂರು, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ,ಜಂಬೂಸವಾರಿ ದಿಣ್ಣೆ, ಮೀನಾಕ್ಷಿ ಲೇಔಟ್.

ಅಕ್ಟೋಬರ್ 18ರಂದು ಎಚ್​ಎಸ್​ಆರ್ ಲೇಔಟ್​, ನಾಗನಾಥಪುರ, ಸಿಬಿ ಗೇಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು ಮುಂತಾದೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಅಕ್ಟೋಬರ್ 19ರಂದು ಅಗರ ಕೆರೆ, ಜಕ್ಕಸಂದ್ರದಲ್ಲಿ ವಿದ್ಯುತ್ ಕಡಿತವಾಗಲಿದೆ.

ಅಕ್ಟೋಬರ್ 21ರಂದು ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ನಾಯಕ್ ಲೇಔಟ್, ಸುರಭಿನಗರ, ಕೆಂಬತಳ್ಳಿ, ಪವಮಾನಗರ, ಮೀನಾಕ್ಷಿ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಎಚ್​ಎಸ್​ಆರ್ ಲೇಔಟ್ ಮುಂತಾದೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಅಕ್ಟೋಬರ್ 22ರಂದು ನಾಗನಾಥಪುರ, ಬೊಮ್ಮನಹಳ್ಳಿ, ಎಚ್​ಎಸ್​ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಹೊಸಪಾಳ್ಯ, ಕೋರಮಂಗಲ, ನಾರಾಯಣನಗರ 1ನೇ ಬ್ಲಾಕ್, ಎಚ್​ಎಂ ವರ್ಲ್ಡ್ ಸಿಟಿ ಮುಂತಾದೆಡೆ ವಿದ್ಯುತ್ ಕಡಿತವಾಗಲಿದೆ.

ವಿದ್ಯುತ್ ವ್ಯತ್ಯಯಕ್ಕೆ ಏನು ಕಾರಣ?:
ವಿದ್ಯುತ್ ವಲಯದ ಸಂಶೋಧನಾ ವಿಜ್ಞಾನಿ ನೀಡಿರುವ ಮಾಹಿತಿ ಪ್ರಕಾರ, ಬೆಸ್ಕಾಂ ಸೇರಿದಂತೆ ಇತರೆ ವಿತರಣಾ ವಲಯದ ವ್ಯವಸ್ಥೆ ದುರ್ಬಲವಾಗಿದೆ. ಸರಿಯಾದ ವಿತರಣಾ ಮೂಲಸೌಕರ್ಯದ ಕೊರತೆ, ಅದರ ಅಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಈ ಪವರ್ ಕಟ್ ಮಾಡಲು ಮೂಲಕ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಕಳಪೆ ನೆಟ್‌ವರ್ಕ್, ಓವರ್‌ಲೋಡ್‌ನಿಂದಾಗಿ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಪದೇ ಪದೇ ಕೈಕೊಡುತ್ತಿವೆ ಎನ್ನಲಾಗುತ್ತಿದೆ.

   IPL ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು? RCBಗೆ ಎಷ್ಟು ಸಿಕ್ತು? | Oneindia Kannada

   ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿದ್ಯುತ್ ಸಮಸ್ಯೆ ಹೆಚ್ಚಿನ ತೊಂದರೆ ಮಾಡುತ್ತಿದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.

   ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಹೇಗಾದರೂ ಸಂಭಾಳಿಸಬಹುದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ವಾರಗಳಿಂದ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಸಹಿಸಿಕೊಳ್ಳುವುದು ಅಸಾಧ್ಯ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

   English summary
   Due to maintenance work no power supply in various areas of Bengaluru from between Oct 16 And 22 said Bangalore Electricity Supply Company Limited (BESCOM).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X