ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ಕ್ಲಬ್‌ ಗೆ 14ಲಕ್ಷ ದಂಡ ವಿಧಿಸಿದ ಬೆಸ್ಕಾಂ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಬೆಸ್ಕಾಂ ನಗರದ ಪ್ರತಿಷ್ಠಿತ ಕ್ಲಬ್‌ ಗಳಲ್ಲಿ ಒಂದಾದ ಜನಗರ ಕ್ಲಬ್ ಗೆ 14 ಲಕ್ಷ ರೂ. ದಂಡ ವಿಧಿಸಿದೆ. ಹೆಚ್ಚುವರಿ ವಿದ್ಯುತ್‌ ಸಂಪರ್ಕವನ್ನು ಅನಧಿಕೃತವಾಗಿ ಪಡೆದಿರುವ ಕಾರಣಕ್ಕೆ ದಂಡ ವಿಧಿಸಿದೆ.

ಬೆಸ್ಕಾಂ ವಿಚಕ್ಷಣ ದಳವು ಸ್ಥಳ ಪರಿಶೀಲನೆ ನಡೆಸಿದಾಗ ಕಟ್ಟಡದಲ್ಲಿ ನಡಯುವ ಚಟುವಟಿಕೆಗೆ ನಿಗದಿಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ಬಳಸಿಕೊಂಡಿರುವುದು ದೃಢಪಟ್ಟಿದೆ. ಇದನ್ನು ವರದಿ ರೂಪದಲ್ಲಿ ವಿಚಕ್ಷಣಾ ಅಧಿಕಾರಿಗಳು ಮೇಲಧಿಕಾರಿಗಳಿಗೆ ರವಾನಿಸಿದ್ದರು.

ಪವರ್‌ ಕಟ್‌ ಕುರಿತು ಮೊಬೈಲ್‌ನಲ್ಲಿ ದೊರೆಯಲಿದೆ ಮಾಹಿತಿ ಪವರ್‌ ಕಟ್‌ ಕುರಿತು ಮೊಬೈಲ್‌ನಲ್ಲಿ ದೊರೆಯಲಿದೆ ಮಾಹಿತಿ

ಜತೆಗೆ ನಿಯಮದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅನಧಿಕೃತವಾಗಿ ಹೆಚ್ಚುವರಿ ಸಂಪರ್ಕ ಪಡೆದಿರುವುದಕ್ಕೆ 14ಲಕ್ಷ ರೂ. ದಂಡವನ್ನಯ ಪಾವತಿಸುವಂತೆ ಕ್ಲಬ್ ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

BESCOM imposes Rs.14 lakhs penalty on Jayanagara club

ಜತೆಎ ಹೆಚ್ಚುವರಿಯಾಗಿ ಪಡೆದ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳುವಂತೆ ಕ್ಲಬ್ ಗೆ ಸೂಚಿಸಲಾಗಿದೆ.

ಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರು ಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರು

ಜಯನಗರ ಕ್ಲಬ್‌ನಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸಿಕೊಳ್ಳಲಾಗುತ್ತಿದೆ ಎಂದು ಬೆಸ್ಕಾಂಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಸ್ಕಾಂ ಅಧಿಕಾರಿಗಳು ಕ್ಲಬ್ ಗೆ ಭೇಟಿ ನೀಡಿದ್ದರು, ಪರಿಶೀಲನೆ ವೇಳೆ ಈ ಸತ್ಯ ಬಹಿರಂಗಗೊಂಡಿದೆ. ಅಧಿಕಾರಿಗಳು ಈ ಕುರಿತು ಪಶ್ನೆ ಮಾಡಿದ್ದು ಜತೆಗೆ 14 ಲಕ್ಷ ರೂ ದಂಡ ವಿಧಿಸಿದ್ದಾರೆ.

English summary
Alleging excess usage of electricity, vigilance team of BESCOM has imposed ₹14 lakhs penalty on prestigious Jayanagara recreation club in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X