ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನಿರ್ಮಾಣ ಹಂತದ 104 ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತ

|
Google Oneindia Kannada News

ಬೆಂಗಳೂರು, ಜೂನ್ 1: ಬೆಸ್ಕಾಂ, ಬಿಬಿಎಂಪಿ ಹಾಗೂ ಕೆಪಿಟಿಸಿಎಲ್ ಜಂಟಿ ಸರ್ವೇ ನಡೆಸಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ 104 ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಡಿದೆ.

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ : ಎಲ್ಲಿ, ಎಷ್ಟು ಏರಿಕೆ? ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ : ಎಲ್ಲಿ, ಎಷ್ಟು ಏರಿಕೆ?

ಈ ಕಟ್ಟಡಗಳಿಗೆ ಹೈಟೆನ್ಷನ್ ತಂತಿಯನ್ನು ಎಳೆಯಲಾಗಿತ್ತು. ಮಲ್ಲೇಶ್ವರ, ಜಾಲಹಳ್ಳಿ, ಹೆಬ್ಬಾಳ,ಪೀಣ್ಯ, ಜಯನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್‌, ರಾಜಾಜಿನಗರ, ಆರ್‌ಆರ್‌ ನಗರ, ಕೆಂಗೇರಿ, ಇಂದಿರಾನಗರ, ಶಿವಾಜಿನಗರ, ವೈಟ್‌ಫೀಲ್ಡ್, ವಿಧಾನಸೌಧ ಬಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

Bescom disconnected power supply 104 underconstruction properties

ಬೆಂಗಳೂರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 7 ಮಂದಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಸಮೀಕ್ಷೆ ಕುರಿತು ಮೇ 29ರಂದು ಸಭೆ ನಡೆದಿದೆ.ಮೇ 23ರಂದು 21ವರ್ಷದ ರಮೇಶ್ ಎನ್ನುವವನು ಆತ ಇದ್ದ ತಾರಸಿಯಲ್ಲೇ ವಿದ್ಯುತ್ ಶಾಖ್ ಹೊಡೆದು ಮೃತಪಟ್ಟಿದ್ದ.

ಈ ಸಲದಿಂದ ಭೂಮಿಯೊಳಗಿಂದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂ ವ್ಯಾಪ್ತಿಗಳಲ್ಲಿ ವಿದ್ಯುತ್ ಅಪಘಾತಗಳು ಅಪಾಯಕಾರಿ ಪ್ರಮಾಣದಲ್ಲಿ ಮುಂದುವರೆಯುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಜೂನ್ 3ರಂದು ಸೋಮವಾರ ಸಭೆ ನಡೆಯಲಿದೆ.

ದೋಷಪೂರಿತ ವಿದ್ಯುತ್ ಕಂಬ, ತುಂಡರಿಸಿದ ತಂತಿ ಮತ್ತಿತರೆ ಸಮಸ್ಯೆ ಕಂಡು ಬಂದಲ್ಲಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು, ಸುರಕ್ಷತೆಯ ದೂರುಗಳಿಗೆ 94483191212ಗೆ ಕರೆ ಮಾಡಬಹುದಾಗಿದೆ.

English summary
BESCOM, BBMP, KPTCL conducted a joint survey and disconnected power supply to as many as 104 properties under construction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X