ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪನ್ ಪೋಲ್ ಅಳವಡಿಕೆಯನ್ನು ಸ್ಥಗಿತಗೊಳಿಸಿದ ಬೆಸ್ಕಾಂ

|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಬೆಸ್ಕಾಂ ಸ್ಪನ್ ಪೋಲ್ ಅಳವಡಿಕೆಯನ್ನು ಸ್ಥಗಿತಗೊಳಿಸಿದೆ. ಭಾರಿ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಕಡ್ಡಾಯವಾಗಿರುವ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಬೆಸ್ಕಾಂ ವಿಫಲವಾಗಿದೆ. ಇದರಿಂದ ಸಾವಿರಾರು ಕುಟುಂಬಗಳು ಸೂರು ಖರೀದಿಸಿದ್ದರೂ ಅಲ್ಲಿ ಆಶ್ರಯ ಪಡೆಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಸ್ಕಾಂ ನಿಯಮಗಳ ಪ್ರಕಾರ 5 ಸಾವಿರ ಚದರಡಿಯಿಂದ 8 ಸಾವಿರ ಚದರಡಿ ವಿಸ್ತೀರ್ಣದ ವಸತಿ ಸಮುಚ್ಛಯ, ವಾಣಿಜ್ಯ ಹಾಗೂ ಕಾರ್ಖಾನೆಗಳಿಗೆ ಕಡ್ಡಾಯವಾಗಿ ವಿದ್ಯುತ್ ಪರಿವರ್ತಕ ಅಳವಡಿಲು ಮಾಲೀಕರು 40 ಚದರಡಿ ಜಾಗ ನೀಡಬೇಕು ಈ ಜಾಗದಲ್ಲಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಹಾಗೂ ಸ್ಪನ್ ಪೋಲ್ ಅಳವಡಿಕೆ ಮಾಡಿ ವಿದ್ಯುತ್ ಸಂಪರ್ಕ ನೀಡಬೇಕು.

bescom customers facing spun pole shortage

2018ರ ಆಗಸ್ಟ್‌ನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ ಸೇರಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಪನ್ ಪೋಲ್ ಪೂರೈಕೆ ಆಗುತ್ತಿಲ್ಲ ಇದರಿಂದ ವಿದ್ಯುತ್ ಪರಿವರ್ತಕ ಅಳವಡಿಕೆ ಮಾಡಿ ವಿದ್ಯುತ್ ಪಡೆಯಲು ಕಟ್ಟಡ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ.

English summary
Bescom has stopped to purchase and supply of tpun pole. So new suctomers are facing the problem to get connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X