ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರೇ ನಂಬರ್ 1: ಇದು ವಾಯು ಮಾಲಿನ್ಯ, ಟ್ರಾಫಿಕ್ ಜಾಮ್ ವಿಚಾರ!

|
Google Oneindia Kannada News

ಬೆಂಗಳೂರು, ಜನವರಿ 27: ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರುತ್ತಿದೆ. ನಗರದ ಎಲ್ಲಾ 10 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ (ಡಬ್ಲ್ಯುಎಚ್‌ಒ) ಮಾನದಂಡಗಳಿಗಿಂತ ಹೆಚ್ಚಿನ ಮಾಲಿನ್ಯ ದಾಖಲಿಸಿವೆ. ಈ ಕುರಿತು ಪರಿಸರ ವಕೀಲರ ಗುಂಪು ಗ್ರೀನ್‌ಪೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಯು ಮಾಲಿನ್ಯ ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಪ್ರಮುಖ ನಗರಗಳಲ್ಲಿ ಜನರು ವಿಷಯುಕ್ತ ಗಾಳಿ ಸೇವಿಸುವಂತಾ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರೀನ್ ಪೀಸ್ ವರದಿಯಲ್ಲಿ ತಿಳಿಸಲಾಗಿದೆ.

"ಭಾರತದ ವರದಿ ಏರ್ಪೋಕ್ಯಾಲಿಪ್ಸ್ IV ಶೇ. 80ಕ್ಕಿಂತ ಹೆಚ್ಚು ನಗರಗಳು/ಪಟ್ಟಣಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮೂಲಕ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳ (NAAQS) ಅಡಿಯಲ್ಲಿ ಸೂಚಿಸಲಾದ 60µg/m3 ಮಿತಿಯನ್ನು ಮೀರಿದ ಬಗ್ಗೆ ವರದಿ ತಿಳಿಸುತ್ತದೆ.

ಸಿಲಿಕಾನ್ ಸಿಟಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ ಪ್ರಮಾಣ

ಸಿಲಿಕಾನ್ ಸಿಟಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ ಪ್ರಮಾಣ

ಬೆಂಗಳೂರಿನ ಎಲ್ಲಾ ಸ್ಥಳಗಳಲ್ಲಿ PM 2.5 ಮತ್ತು ವಾರ್ಷಿಕರ ಸರಾಸರಿ ಮೌಲ್ಯ PM 10 ಅನ್ನು ಉಲ್ಲೇಖಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪರಿಷ್ಕೃತ ಮಾನದಂಡಗಳಿಗಿಂತ ಹೆಚ್ಚಿನದಾಗಿದೆ. ಇದಲ್ಲದೆ, ಎಲ್ಲಾ ಕೇಂದ್ರಗಳು PM 2.5 ಮೌಲ್ಯಗಳು NAAQS ಮಾನದಂಡಗಳಲ್ಲಿವೆ. ಎಂಟು ಕೇಂದ್ರಗಳಲ್ಲಿ PM 10 ಮೌಲ್ಯಗಳು NAAQS ಮಾನದಂಡಗಳಿಗಿಂತ ಹೆಚ್ಚಿವೆ," ಎಂದು "ದಕ್ಷಿಣ ಭಾರತದ ನಗರಗಳು ಸುರಕ್ಷಿತ ಗಾಳಿಯನ್ನು ಉಸಿರಾಡುತ್ತಿವೆಯೇ?" ಎಂಬ ಶೀರ್ಷಿಕೆಯ ವರದಿಯಲ್ಲಿ ಹೇಳಲಾಗಿದೆ.

ಸ್ವಂತ ವಾಹನಗಳ ಬಳಕೆ ಮೇಲೆ ಹೆಚ್ಚು ಅವಲಂಬನೆ

ಸ್ವಂತ ವಾಹನಗಳ ಬಳಕೆ ಮೇಲೆ ಹೆಚ್ಚು ಅವಲಂಬನೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕಾಗಿ ಸಾರ್ವಜನಿಕ ಸಾರಿಗೆ ಬದಲಿಗೆ ಜನರು ಸ್ವಂತ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆ ವಾಹನಗಳ ಸಂಚಾರ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆ ದಕ್ಷಣ ಭಾರತದ ರಾಜ್ಯಗಳಲ್ಲೂ WHO ನಿಗದಿಪಡಿಸಿರುವ PM 2.5 ಮತ್ತು ವಾರ್ಷಿಕ ಸರಾಸರಿ PM 10 ಅನ್ನು ಮೀರಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ 10 ದಶಲಕ್ಷ ವಾಹನ

ಸಿಲಿಕಾನ್ ಸಿಟಿಯಲ್ಲಿ 10 ದಶಲಕ್ಷ ವಾಹನ

ಬೆಂಗಳೂರಿನಲ್ಲಿ ಸುಮಾರು 12 ದಶಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದು, ನಗರದ 800 ಚದರ ಕಿಮೀ ಪ್ರದೇಶದಲ್ಲಿ ಸುಮಾರು 10 ದಶಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಕೆಟ್ಟ ರಸ್ತೆಗಳು, ಕಳಪೆ ಯೋಜನೆ ಮತ್ತು ಹೆಚ್ಚುತ್ತಿರುವ ಖಾಸಗಿ ವಾಹನಗಳಿಂದಾಗಿ ಒಂದು ಕಾಲದಲ್ಲಿ ಭಾರತದ ಉದ್ಯಾನನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಈಗ ಜೀವನದ ಗುಣಮಟ್ಟದಲ್ಲಿ ತ್ವರಿತ ಅವನತಿ ಕಾಣುತ್ತಿದೆ. ನೆದರ್ಲ್ಯಾಂಡ್ಸ್ ಮೂಲದ ಟಾಮ್‌ಟಾಮ್ ಸೂಚ್ಯಂಕದ ವರದಿಯ ಪ್ರಕಾರ, ಜಗತ್ತಿನಲ್ಲಿ ಅತಿಹೆಚ್ಚು ಟ್ರಾಫಿಕ್ ಜಾನ್ ಅನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸಹ ಗುರುತಿಸಿಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಶೇ.71ರಷ್ಟು ಟ್ರಾಫಿಕ್ ಸಮಸ್ಯೆ

ಸಿಲಿಕಾನ್ ಸಿಟಿಯಲ್ಲಿ ಶೇ.71ರಷ್ಟು ಟ್ರಾಫಿಕ್ ಸಮಸ್ಯೆ

ಈ ನ್ಯಾವಿಗೇಷನ್, ಟ್ರಾಫಿಕ್ ಮತ್ತು ಮ್ಯಾಪ್ ಉತ್ಪನ್ನಗಳ ಜಾಗತಿಕ ಪೂರೈಕೆದಾರರಾದ ಟಾಮ್‌ಟಾಮ್‌ನ ವಾರ್ಷಿಕ ಸಂಚಾರ ಸೂಚ್ಯಂಕದ ಒಂಬತ್ತನೇ ಆವೃತ್ತಿಯ ಪ್ರಕಾರ, ಬೆಂಗಳೂರು 2019 ರಲ್ಲಿ 57 ದೇಶಗಳಲ್ಲಿ 415 ಇತರ ನಗರಗಳನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. "ದಕ್ಷಿಣ ಭಾರತದ ನಗರಗಳಲ್ಲಿ ಚಾಲಕರು ಸರಾಸರಿ ಶೇ.71ರಷ್ಟು ಹೆಚ್ಚುವರಿ ಪ್ರಯಾಣದ ಸಮಯವನ್ನು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ನಿರೀಕ್ಷೆಯೊಂದಿಗೆ ಬೆಂಗಳೂರು ಈ ವರ್ಷ ಅಗ್ರಸ್ಥಾನವನ್ನು ಪಡೆದುಕೊಂಡಿದೆ," ಎಂದು ಟಾಮ್‌ಟಾಮ್ ವರದಿ ಹೇಳಿದೆ.

Recommended Video

Sachin ಪ್ರಕಾರ Rohit Sharma ಮತ್ತು Dravid ಮಾಡ್ಬೇಕಾಗಿರೋದೇನು? | Oneindia Kannada

English summary
All 10 air quality monitoring stations in Bengaluru have recorded pollution higher than World Health Organisation (WHO) standards, environmental advocacy group Greenpeace has said in a report. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X