ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್‌ನಿಂದಾಗಿ ಬೆಂಗಳೂರಲ್ಲಿ ಶೇ.60ರಷ್ಟು ತಗ್ಗಿದ ವಾಯು ಮಾಲಿನ್ಯ

|
Google Oneindia Kannada News

ಬೆಂಗಳೂರು, ಮೇ 29:ನಗರದಲ್ಲಿ ಲಾಕ್‌ಡೌನ್‌ನಿಂದಾಗಿ ವಾಯು ಮಾಲಿನ್ಯ ಪ್ರಮಾಣ ಶೇ.60ರಷ್ಟು ತಗ್ಗಿದೆ. ಒಂದೆಡೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ, ಇನ್ನೊಂದೆಡೆ ಕಟ್ಟಡ ಕಾಮಗಾರಿಯೂ ಕೂಡ ನಿಂತಿರುವ ಕಾರಣ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.

ನಗರದಲ್ಲಿ ವಾಯುಮಾಲಿನ್ಯ ಇಳಿಮುಖವಾಗಿದ್ದು, ಬಿಟಿಎಂ ಲೇಔಟ್‌ನಲ್ಲಿ ಮೇ ತಿಂಗಳಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ (ಎಕ್ಯೂಐ) 59ಕ್ಕೆ ಇಳಿಕೆಯಾಗಿದೆ. ಹಾಗಾಗಿ, ಇಲ್ಲಿ ವಾಯು ಗುಣಮಟ್ಟ ತೃಪ್ತಿದಾಯಕವಾಗಿದೆ. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಬಳಿ ಮಾರ್ಚ್‌ನಲ್ಲಿ 92 ಇದ್ದ ಏಕ್ಯೂಐ, ಮೇನಲ್ಲಿ 27ಕ್ಕೆ ಇಳಿಕೆಯಾಗಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ರೈಲ್ವೆ ನಿಲ್ದಾಣದಲ್ಲಿ ಮಾರ್ಚ್‌ನಲ್ಲಿ 87 ಇದ್ದ ಎಕ್ಯೂಐ, ಮೇನಲ್ಲಿ 49ಕ್ಕೆ ಇಳಿಕೆ ಕಂಡಿದೆ.

ಚೀನಾ ನಂ. 1, ಅಮೆರಿಕ ನಂ. 2, ಭಾರತ ನಂ. 8..!: ಫೋರ್ಬ್ಸ್’ ವರದಿ ಚೀನಾ ನಂ. 1, ಅಮೆರಿಕ ನಂ. 2, ಭಾರತ ನಂ. 8..!: ಫೋರ್ಬ್ಸ್’ ವರದಿ

ಮೇ ಮೊದಲ ವಾರ ಜನತಾ ಕರ್ಫ್ಯೂ ಹಾಗೂ ಬಳಿಕ ಲಾಕ್‌ಡೌನ್‌ ಜಾರಿ ಹಾಗೂ ವಿಸ್ತರಣೆಗೊಳಿಸಿದ ಪರಿಣಾಮ, ಬಹುತೇಕ ವಾಹನ ಸಂಚಾರ ಸ್ಥಗಿತಗೊಂಡಿವೆ. ಅಗತ್ಯ ಕಾರ್ಖಾನೆಗಳ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಸ್ಥಗಿತಗೊಂಡಿವೆ.

Bengalurus Pollution Drops By 60 Percent During Lockdown

ಪರಿಣಾಮ ನಗರದಲ್ಲಿ ಮೇ ಮೊದಲ ವಾರದಿಂದ ಇಂದಿನವರೆಗೆ ಶೇ.60ರಷ್ಟು ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಮಾರ್ಚ್‌ನಲ್ಲಿ 99 ಇದ್ದ ಎಕ್ಯೂಐ ಮೇನಲ್ಲಿ 31ಕ್ಕೆ ಇಳಿಕೆ ಕಂಡಿದೆ. ಹೊಂಬೇಗೌಡ ನಗರದ ರಾಜೀವ್‌ಗಾಂಧಿ ಇನ್ಸ್‌ಟಿಟ್ಯೂಟ್‌ ಬಳಿ ಮಾರ್ಚ್‌ನಲ್ಲಿ 84 ಇದ್ದ ಎಕ್ಯೂಐ 43ಕ್ಕೆ ಕಡಿಮೆಯಾಗಿದೆ.

ಎಚ್‌ಎಸ್‌ ಆರ್‌ ಲೇಔಟ್‌ನ ಸಿಲ್ಕ್‌ ಬೋರ್ಡ್‌ ಬಳಿ ಮಾರ್ಚ್‌ನಲ್ಲಿ 89 ಇದ್ದ ಎಕ್ಯೂಐ, ಮೇನಲ್ಲಿ 37ಕ್ಕೆ ಇಳಿದಿದೆ, ಸಾಣೆಗೊರವನಹಳ್ಳಿ ನಿಸರ್ಗ ಭವನದ ಬಳಿ 62 ಇದ್ದ ಏಕ್ಯೂಐ, ಮೇನಲ್ಲಿ 36ಕ್ಕೆ ಇಳಿದಿದೆ, ಪೀಣ್ಯದಲ್ಲೂ ಮೇನಲ್ಲಿ 23ಕ್ಕೆ ಎಕ್ಯೂಐ ಇಳಿದಿದ್ದು, ಉತ್ತಮ ವಾಯುಗುಣ ಮಟ್ಟವಿದೆ.

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಪೂರ್ವದಲ್ಲಿ ವಾಯುಮಾಲಿನ್ಯ ಏರಿಕೆ ಕಂಡಿತ್ತು. ವಾಹನ ಸಂಚಾರ, ಕಾರ್ಖಾನೆಗಳ ವಿಷಕಾರಕ ಹೊಗೆ, ಕಟ್ಟಡ, ರಸ್ತೆ ಕಾಮಗಾರಿಗಳ ಧೂಳಿನಿಂದ ವಾಯು ಗುಣಮಟ್ಟ ತೀರ ಕೆಳಮಟ್ಟದಲ್ಲಿತ್ತು.

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

ಹೀಗಾಗಿ, ಅಸ್ತಮಾ ರೋಗಿಗಳು, ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ತೊಂದರೆ ಉಂಟಾಗಿತ್ತು. ಇದೀಗ ಮಾಲಿನ್ಯ ಪ್ರಮಾಣ ತಗ್ಗಿದ್ದು, ವಾಯು ಗುಣಮಟ್ಟ ಉತ್ತಮವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ (ವಾಯು ಗುಣಮಟ್ಟ ಸೂಚ್ಯಂಕ) 80ರಿಂದ 110 ರವರೆಗಿದ್ದ ವಾಯು ಗುಣಮಟ್ಟ, ಮೇ ತಿಂಗಳಲ್ಲಿ 30ರಿಂದ 60ರ ಆಸುಪಾಸಿಗೆ ಇಳಿಕೆ ಕಂಡಿದೆ.

English summary
It seems like a cruel stroke of fate that we can’t breathe the air of Bengaluru, without a mask, when it’s at its cleanest in a while.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X