ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 500 ಕಡೆ ಸ್ವಯಂ ಚಾಲಿತ ಸಿಗ್ನಲ್‌ಗಳ ವ್ಯವಸ್ಥೆ, ಎಲ್ಲೆಲ್ಲಿ?

|
Google Oneindia Kannada News

ಬೆಂಗಳೂರು, ಜುಲೈ 13: ನಗರದಲ್ಲಿ ಸಂಚಾರ ವ್ಯವಸ್ಥೆ ತೀರಾ ಹದಗೆಟ್ಟಿದೆ. ಅನೇಕ ಸಿಗ್ನಲ್‌ಗಳು ಕೆಟ್ಟು ನಿಂತಿವೆ.

ಆಟೋಮ್ಯಾಟಿಕ್ ಸಿಗ್ನಲ್‌ಗಳ ಅಳವಡಿಕೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ನಗರದಲ್ಲಿ ಒಟ್ಟು 500 ಆಟೋಮ್ಯಾಟಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತದೆ.

ಈಗಿರುವ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಈಗ ನಗರದಲ್ಲಿ 450 ಆಟೋಮ್ಯಾಟಿಕ್ ಸಿಗ್ನಲ್‌ಗಳಿವೆ. ಮುಂದಿನ ವರ್ಷದೊಳಗೆ ಒಟ್ಟು 1 ಸಾವಿರ ಸಿಗ್ನಲ್‌ಗಳನ್ನು ಅಳವಡಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

Bengalurus Major junction will get 500 automatic Signals soon

ಮೊದಲ ಹಂತದಲ್ಲಿ 350 ಸಿಗ್ನಲ್‌ಗಳನ್ನು ಆಟೋಮ್ಯಾಟಿಕ್ ಸಿಗ್ನಲ್‌ಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅದರಲ್ಲಿ ಸೆನ್ಸರ್ ಹಾಗೂ ಕ್ಯಾಮರಾ, ಲೈಟ್‌ಗಳನ್ನು ಅಳವಡಿಸಲಾಗುತ್ತದೆ.

ಎರಡನೇ ಹಂತದಲ್ಲಿ ಇನ್ನೂ 200 ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಈ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತದೆ.ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ ಈಗಿರುವ ಸಿಗ್ನಲ್‌ಗಳನ್ನು ಆಟೋಮ್ಯಾಟಿಕ್‌ ಸಿಗ್ನಲ್‌ಗಳಾಗಿ ಪರಿವರ್ತನೆ ಮಾಡುತ್ತದೆ. ಒಟ್ಟು 76 ಕೋಟಿ ವೆಚ್ಚದಲ್ಲಿ ಇದು ಅಭಿವೃದ್ಧಿಗೊಳ್ಳಲಿದೆ. 2017ರಲ್ಲಿ 35 ಕಡೆಗಳಲ್ಲಿ ಅಳವಡಿಸಲಾಗಿತ್ತು.

ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಬಗ್ಗೆ ನಿಗಾ ಇಡಲು ಒಟ್ಟು 6 ಸಾವಿರ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

English summary
Bengalurus Major junction will get 500 automatic Signals soon, he city currently has over 450 automatic signals and traffic police are aiming to augment it to 1,000 over the next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X