ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್‌ಫೀಲ್ಡ್‌-ಬಾಣಸವಾಡಿ ಡೆಮು ರೈಲು ಖಾಲಿ ಖಾಲಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಸಾಕಷ್ಟು ಹೋರಾಟ, ಪ್ರಯತ್ನದ ಬಳಿಕ ಅಂತೂ ವೈಟ್‌ಫೀಲ್ಡ್ ಹಾಗೂ ಬಾಣಸವಾಡಿ ನಡುವೆ ಡೆಮು ರೈಲು ಓಡಾಟ ಆರಂಭವಾಗಿತ್ತು ಆದರೆ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದೆ.

ಪ್ರಯಾಣಿಕರಿಗೆ ಅಗತ್ಯವಿರುವ ಸಮಯದಲ್ಲಿ ರೈಲು ಒದಗಿಸದೇ ಇರುವುದು, ಬೇಡಿಕೆ ಇಲ್ಲದ ಸಮಯದಲ್ಲಿ ರೈಲು ಓಡಾಡುತ್ತಿರುವ ಕಾರಣ ಪ್ರಯಾಣಿಕರು ಬರುತ್ತಿಲ್ಲ ಎನ್ನುವುದು ಸತ್ಯಾಂಶವಾಗಿದೆ.

ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ

ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಥವಾ ಯಶವಂತಪುರವನ್ನು ವೈಟ್‌ಫೀಲ್ಡ್‌ಗೆ ಸಂಪರ್ಕಿಸುವ ರೈಲು ಸೇವೆ ಇದ್ದಲ್ಲಿ ಹೆಚ್ಚಿನ ಅನುಕೂಲವಾಗುತ್ತಿತ್ತು. ಇದರಿಂದ ಬೇರೆ ಬೇರೆ ಪ್ರದೇಶಕ್ಕೆ ತೆರಳಲೂ ಅನುಕೂಲವಾಗುತ್ತಿತ್ತು.

Bengaluru’s first local train? Derailed by an empty feeling

ಫೆಬ್ರವರಿ 3 ರಿಂದ ವೈಟ್‌ಫೀಲ್ಡ್, ಬಾಣಸವಾಡಿ ಡೆಮು ರೈಲು ಆರಂಭ ಫೆಬ್ರವರಿ 3 ರಿಂದ ವೈಟ್‌ಫೀಲ್ಡ್, ಬಾಣಸವಾಡಿ ಡೆಮು ರೈಲು ಆರಂಭ

ನಗರದ ಕೇಂದ್ರ ಭಾಗವನ್ನು ಸಂಪರ್ಕಿಸುವ ಬೈಯಪ್ಪನಹಳ್ಳಿ ಸೂಕ್ತ ಪ್ರದೇಶ ಅಲ್ಲ ಎಂಬುದು ಕೆಲವು ಪ್ರಯಾಣಿಕರ ಮಾತಾಗಿದೆ. ರೈಲುಗಳ ಸಂಚಾರದಿಂದ ಅತಿಯಾದ ಒತ್ತಡ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕಾಗಲಿ, ಯಶವಂತಪುರಕ್ಕಾಗಿ ರೈಲು ಸೇವೆಯನ್ನು ವಿಸ್ತರಿಸಲಾಗದು. ಬೈಯಪ್ಪನಹಳ್ಳಿ ಮೆಟ್ರೋ ಸಂಪರ್ಕವನ್ನು ಹೊಂದಿದೆ ಇದನ್ನು ಪ್ರಯಾಣಿಕರು ಉಪಯೋಗಿಸಿಕೊಳ್ಳಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

English summary
Demu train is going empty in whitefield banaswadi lane. Passenger are alleging that improper timings are the main reason for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X