ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ISIS ಸೇರಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆ.14: ಸಿರಿಯಾಕ್ಕೆ ತೆರಳಿ ಇರಾಕ್ ಉಗ್ರ ಸಂಘಟನೆ ಸೇರಿದ್ದ ಬೆಂಗಳೂರು ಮೂಲದ ಮ್ಯಾನೇಜ್ಮೆಂಟ್ ಸ್ಟಡೀಸ್ ಪದವಿಧರನ ಸಾವಿನ ಸುದ್ದಿಯನ್ನು ವೈದ್ಯ ಅಬ್ದುರ್​ ರೆಹಮಾನ್ ಖಚಿತಪಡಿಸಿದ್ದಾನೆ.

ಇತ್ತೀಚೆಗೆ ಎಂಎಸ್ ರಾಮಯ್ಯದಲ್ಲಿ ಕಿರಿಯ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಸವನಗುಡಿ ನಿವಾಸಿ ಡಾ. ಅಬ್ದುರ್ ರೆಹಮಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಫೈಜ್​ ಮಸೂದ್ ಮೃತನಾಗಿದ್ದಾನೆ ಎಂದಿದ್ದಾನೆ.

ISIS ಜೊತೆ ಲಿಂಕ್, ಬೆಂಗಳೂರಿನ ವೈದ್ಯನನ್ನು ಬಂಧಿಸಿದ NIAISIS ಜೊತೆ ಲಿಂಕ್, ಬೆಂಗಳೂರಿನ ವೈದ್ಯನನ್ನು ಬಂಧಿಸಿದ NIA

ಸಿರಿಯಾ ಗಡಿಭಾಗದಲ್ಲಿರುವ ಅಟ್ಮೆ(atme) ಎಂಬ ಪಟ್ಟಣದಲ್ಲಿ ಮಸೂದ್ ನನ್ನು ಭೇಟಿ ಮಾಡಿದ್ದೆ. 2013ರಿಂದ ಟರ್ಕಿ ನಿರಾಶ್ರಿತ ಕ್ಯಾಂಪಿನಿಂದ ಹೊರಬಂದಿದ್ದೆವು ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

Bengaluru youth Faiz masood who joined ISIS suspected to have been killed in Syria

ಬೆಂಗಳೂರಿನ ಶ್ರೀಮಂತ ಕುಟುಂಬದವನಾಗಿದ್ದ ಫೈಜ್ ಮಸೂದ್ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಸಿರಿಯಾಕ್ಕೆ ತೆರಳಿದ್ದ. ಉಗ್ರರ ಸಂಪರ್ಕಕ್ಕೆ ಸೇರಿ ನಾಪತ್ತೆಯಾಗಿ ಏಳು ವರ್ಷಗಳು ಕಳೆದರೂ ಪೊಲೀಸರ ಬಳಿ ನಾಪತ್ತೆ ಪ್ರಕರಣದ ಒಂದು ದೂರು ದಾಖಲಾಗಿಲ್ಲ.

ಬಸವನಗುಡಿಯ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ 28 ವರ್ಷ ವಯಸ್ಸಿನ ಕಣ್ಣು ವೈದ್ಯ (ophthalmologist) ಅಬ್ದುಲ್ ರೆಹಮಾನ್ 2014ರಿಂದ ಇರಾಕಿನ ಉಗ್ರ ಸಂಘಟನೆ ಐಎಸ್ಐಎಸ್ ಜೊತೆ ಸಂಪರ್ಕ ಹೊಂದಿದ್ದ ಎಂದು ಈ ಮುಂಚೆ ತಿಳಿದು ಬಂದಿದೆ.

Bengaluru youth Faiz masood who joined ISIS suspected to have been killed in Syria

Recommended Video

ಗಡಿಯಲ್ಲಿ ಕೆಣಕಿದ್ದಕ್ಕೆ ತಕ್ಕ ಉತ್ತರಕೊಟ್ಟ ಭಾರತದ | Oneindia Kannada

ಜಹಾನ್ ಜೈಬ್ ವನಿ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದೆ. 2014ರಲ್ಲಿ ಸಿರಿಯಾಕ್ಕೂ ಭೇಟಿ ಮಾಡಿದ್ದೆ. ಭಾರತದಲ್ಲಿ ಹಲವು ಸಂಚು ರೂಪಿಸಲು ಯೋಜನೆ ಹಾಕಿಕೊಂಡಿದ್ದೆವು. ಸಿರಿಯಾದಲ್ಲಿ ಗಾಯಗೊಂಡ ಉಗ್ರರ ನೆರವಿಗೆ ಮೆಡಿಕಲ್ ಅಪ್ಲಿಕೇಷನ್ ರೂಪಿಸುತ್ತಿದ್ದೆ. ಐಸೀಸ್ ಯೋಧರಿಗೆ ತಾಂತ್ರಿಕ, ವೈದ್ಯಕೀಯ ನೆರವು ನೀಡಿದ್ದೆ ಎಂದು ಅಬ್ದುರ್ ರೆಹಮಾನ್ ಹೇಳಿದ್ದಾನೆ.

English summary
Bengaluru youth Faiz masood who joined ISIS suspected to have been killed in Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X