ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಳು ಗುಡಿಸುವ ಜಾಲಹಳ್ಳಿ ಪೊಲೀಸ್ ಗೊಂದು ಸಲಾಂ

|
Google Oneindia Kannada News

ಬೆಂಗಳೂರು, ಜು. 21: ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಪೊಲೀಸ್ ಪೇದೆಗೆ ಇಲಾಖೆ ಸನ್ಮಾನ ಮಾಡಿದೆ. ಈಗ ಜಾಲಹಳ್ಳಿ ಪೊಲೀಸ್ ಪೇದೆಯೊಬ್ಬರು ರಸ್ತೆ ಗುಡಿಸುತ್ತಿರುವ ಚಿತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

ಜಾಲಹಳ್ಳಿಯ ಎಂಇಎಸ್ ರಸ್ತೆ ಮೇಲೆ ಬಿದ್ದಿರುವ ಮರಳನ್ನು ಗುಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಮಂಜುನಾಥ್ ಕಂಯ್ಯಾಡಿ ಎಂಬುವರು ಟ್ವಿಟ್ಟರ್ ನಲ್ಲಿ ಮಂಗಳವಾರ ಸಂಜೆ ಫೋಟೋ ಅಪ್ ಲೋಡ್ ಮಾಡಿದ್ದಾರೆ. ಜತೆಗೆ ಪೊಲೀಸ್ ಪೇದೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.[ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ]

police

ವೈಟ್‌ ಫೀಲ್ಡ್‌ನ ಸಂಚಾರಿ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಸತ್ಯನಾರಾಯಣ್‌. ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚುವ ಕೆಲಸ ಮಾಡಿದ್ದರು. ಇವರ ಸೇವೆಯನ್ನುಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೇಲೆ ಪ್ರಶಂಸೆಗಳ ಸುರಿಮಳೆಯಾಗಿತ್ತು. ಇದೀಗ ಮರಳೂ ಗುಡಿಸುವ ಕಾಯಕದಲ್ಲಿ ನಿರತರಾಗಿರುವ ಪೊಲೀಸಪ್ಪನಿಗೊಂದು ಸಲಾಂ ಹೇಳಬೇಕಿದೆ.

ಪೊಲೀಸ್ ಇಲಾಖೆ ಇಂಥವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಬೇಕು. ಜತೆಗೆ ನಾಗರಿಕರು ಸಹ ಪೊಲೀಸರಿಗೆ ಸಹಕಾರ ನೀಡಿದರೆ ಸ್ವಸ್ಥ ಸಮಾಜ ನಿರ್ಮಾಣ ದೂರದ ಮಾತೆನಲ್ಲ.

English summary
Bengaluru: One more traffic police constable doing good job for people in Jalahalli junction. Head Constable from Jalahalli traffic station cleaning sand on the MES Road. The picture was uploaded by Manjunath Kanyadi on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X