ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂನಿಂದ 317 ರುಪಾಯಿ ವಾಪಸ್ ಪಡೆಯಲು 16 ಸಾವಿರ ಕಳ್ಕೊಂಡ ಮಹಿಳೆ

|
Google Oneindia Kannada News

ಬೆಂಗಳೂರು, ಜುಲೈ 26 : ನಲವತ್ತು ವರ್ಷದ ಮಹಿಳೆಯೊಬ್ಬರು ಬೆಸ್ಕಾಂಗೆ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಹಿಂದಿನ ತಿಂಗಳ ಬಿಲ್ ಗೆ ಫೋನ್ ಅಪ್ಲಿಕೇಷನ್ ಮೂಲಕ 317 ರುಪಾಯಿ ಕಟ್ಟಿದ್ದರು. ಅದನ್ನು ವಾಪಸ್ ಪಡೆಯುವ ಪ್ರಯತ್ನದಲ್ಲಿ 16 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ.

ಆಕೆ ಹೆಸರು ವಿದಿತಾ ಚೌಧರಿ. ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದ ನಿವಾಸಿ. ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಇಪ್ಪತ್ತನೇ ತಾರೀಕು 'ಪೇ ಯು ಮನಿ' ಮೊಬೈಲ್ ಅಪ್ಲಿಕೇಷನ್ ಬಳಸಿ ಪಾವತಿಸಲು ಪ್ರಯತ್ನಿಸಿದ್ದಾರೆ. ಆದರೆ ಅದರಲ್ಲಿ ತಪ್ಪಾಗಿ ಜೂನ್ ತಿಂಗಳ ಬಿಲ್ ಗೆ 317 ರುಪಾಯಿ ಅಂತ ಪಾವತಿ ಆಗಿದೆ.

Cyber crime

ವಿದಿತಾ ಅವರು ತಕ್ಷಣವೇ ಬೆಸ್ಕಾಂಗೆ ಆನ್ ಲೈನ್ ದೂರು ದಾಖಲಿಸಿ, ಹೆಚ್ಚುವರಿಯಾಗಿ ಪಾವತಿಸಿದ ಹಣ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. [email protected] ಅವರಿಗೊಂದು ಇಮೇಲ್ ಬಂದಿದೆ. ಅದಾಗಿ ಎರಡು ನಿಮಿಷಕ್ಕೆ ತಾವು ಬೆಸ್ಕಾಂನಿದ ಕರೆ ಮಾಡುತ್ತಿದ್ದೇವೆ ಅಂತ ಹೇಳಿಕೊಂಡು, ವಿದಿತಾ ಅವರ ಐಸಿಐಸಿಐ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಿದ್ದಾರೆ.

ಸೈಬರ್ ಕ್ರೈಂನಲ್ಲಿ ಬೆಂಗಳೂರು ದೇಶಕ್ಕೇ ನಂಬರ್ ಒನ್ಸೈಬರ್ ಕ್ರೈಂನಲ್ಲಿ ಬೆಂಗಳೂರು ದೇಶಕ್ಕೇ ನಂಬರ್ ಒನ್

ಆ ತಕ್ಷಣವೇ ಅವರ ಖಾತೆಯಿಂದ ಹದಿನಾರು ಸಾವಿರ ರುಪಾಯಿ ವರ್ಗಾವಣೆ ಆಗಿದೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

English summary
A 40- year old woman, who paid Rs 317 by mistake to BESCOM, lost 16,000 to tech savvy criminals while trying to get back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X