ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂದೆ ಅಂತ್ಯಕ್ರಿಯೆ ತೆರಳಲಾಗದೇ ಬಸ್ ನಿಲ್ದಾಣದಲ್ಲೇ ಮಹಿಳೆ ಕಣ್ಣೀರು!

|
Google Oneindia Kannada News

ಬೆಂಗಳೂರು, ಮೇ.19: ಕರ್ನಾಟಕದಲ್ಲಿ 55 ದಿನಗಳ ನಂತರ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಬಸ್ ಗಾಗಿ ಕಾದು ಕುಳಿತ ಮಹಿಳೆಯ ಬಸ್ ನಿಲ್ದಾಣದಲ್ಲೇ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಮಹಿಳೆಯು ತಂದೆ ಮೃತಪಟ್ಟಿದ್ದು, ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ತೆರಳಬೇಕು. ಆದರೆ ಗ್ರಾಮೀಣ ಭಾಗದ ಪ್ರದೇಶಗಳಿಗೆ ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರಕ್ಕೆ ಯಾವುದೇ ಅನುಮತಿ ಇರುವುದಿಲ್ಲ.

KSRTC ಮತ್ತು BMTC ಬಸ್ ಹತ್ತುವ ಮುನ್ನ ಪ್ರಯಾಣಿಕರೇ ಗಮನಿಸಿ!KSRTC ಮತ್ತು BMTC ಬಸ್ ಹತ್ತುವ ಮುನ್ನ ಪ್ರಯಾಣಿಕರೇ ಗಮನಿಸಿ!

ಜಿಲ್ಲಾ ಕೇಂದ್ರಗಳಲ್ಲಿಗೆ ಮಾತ್ರ ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಳ್ಳಾರಿಗೆ ತೆರಳಿದರೂ ಅಲ್ಲಿಂದ ಮುಂದೆ ಹೇಗೆ ಸ್ವಗ್ರಾಮವನ್ನು ಸೇರುವುದು ಎಂದು ನೆನೆದು ಪುಟ್ಟ ಮಕ್ಕಳ ಜೊತೆಗೆ ಬಸ್ ನಿಲ್ದಾಣದಲ್ಲಿ ಕುಳಿತು ಮಹಿಳೆಯು ಕಣ್ಣೀರು ಹಾಕಿದ್ದಾರೆ.

Bangalore: Woman Crying At Majestic Bus Stop For Not Going To Fathers Funeral

ಕೊನೆಯದಾಗಿ ತಂದೆ ಮುಖ ನೋಡಲು ಅವಕಾಶ ಕಲ್ಪಿಸಿ:

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಮೃತಪಟ್ಟ ತಂದೆಯ ಮುಖವನ್ನು ಕೊನೆಯದಾಗಿ ಒಮ್ಮೆ ನೋಡುತ್ತೇನೆ. ನನ್ನ ಮಕ್ಕಳು ಅಜ್ಜನ ಅಂತಿಮ ದರ್ಶನವನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡಿ. ದಯವಿಟ್ಟು ತಮ್ಮೂರಿಗೆ ತೆರಳುವುದಕ್ಕೆ ವಾಹನ ವ್ಯವಸ್ಥೆ ಕಲ್ಪಿಸಿ ಎಂದು ಮಹಿಳೆಯು ಅಳಲು ತೋಡಿಕೊಂಡಿದ್ದಾಳೆ.

English summary
The Woman Crying At The Bus Stop For Not Going To Father's Funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X