ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

500 ಕೋಟಿ ರು. ನೀಡುವಂತೆ ವಿಪ್ರೋಗೆ ಬೆದರಿಕೆ ಇ ಮೇಲ್

|
Google Oneindia Kannada News

ಬೆಂಗಳೂರು, ಮೇ 6: ಪ್ರತಿಷ್ಠಿತ ಐಟಿ ಕಂಪನಿಯಾದ ವಿಪ್ರೋಗೆ ಅಜ್ಞಾತರಿಂದ ಬೆದರಿಕೆ ಇ-ಮೇಲ್ ಒಂದು ಬಂದಿದ್ದು, ಅದರಲ್ಲಿ ತನಗೆ 500 ಕೋಟಿ ರು. ನೀಡಬೇಕೆಂದು ಒತ್ತಾಯಿಸಲಾಗಿದೆ.

ಈ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ (ಡಿಜಿಟಲ್ ವ್ಯವಹಾರಗಳಿಗಾಗಿ ಬಳಸುವ ಹಣದ ವ್ಯವಸ್ಥೆ) ತನಗೆ ನೀಡಬೇಕೆಂದು ಸೂಚಿಸಲಾಗಿದ್ದು, ಇದಕ್ಕೆ ತಪ್ಪಿದರೆ, ಮೇ 25ರೊಳಗೆ ಬೆಂಗಳೂರಿನಲ್ಲಿರುವ ಎಲ್ಲಾ ವಿಪ್ರೋ ಕಂಪನಿಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.

BENGALURU: WIPRO GETS EMAIL THREAT ‘PAY 500 CR IN BITCOINS

ಶುಕ್ರವಾರವೇ (ಮೇ 5) ಈ ಇ-ಮೇಲ್ ರವಾನೆಯಾಗಿದ್ದು, ಅದನ್ನು ಕಂಡ ತಕ್ಷಣ ಕಂಪನಿಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

ಅಂತರ್ಜಾಲ ಭಯೋತ್ಪಾದನೆ ಕಾಯ್ದಯಡಿ ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್ , ರೂಪಾಯಿ) ಪರ್ಯಾಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿಯಾಗಿದೆ.

ಬಿಟ್ ಕಾಯಿನ್ ಬಗ್ಗೆ ಮತ್ತಷ್ಟು...
ಇದರಲ್ಲಿ ಕಾಯಿನ್ ಎಂಬ ಪದ ಬಳಕೆಯಾಗಿದೆಯಾದರೂ ಇದನ್ನು ನಾಣ್ಯ (coin) ಎಂದು ಪರಿಗಣಿಸಬೇಕಿಲ್ಲ. ಇದು ಬೇರೆಯದ್ದೇ ಮಾದರಿಯ ವ್ಯವಹಾರ. ಈ ವ್ಯವಹಾರ ಇಂಟರ್ನೆಟ್'ನಲ್ಲೇ ನಡೆಯುತ್ತದೆ. ಬಿಟ್ ಕಾಯಿನ್ ಪೂರೈಸುವ ಕಂಪನಿಗೆ ಹಣ ನೀಡಿದರೆ ಆ ಕಂಪನಿಗಳು ಗ್ರಾಹಕನಿಗೆ ಅದರ ಮೌಲ್ಯದ ಕಾಯಿನ್ (ಡಿಜಿಟಲ್ ಮಾದರಿಯ) ನೀಡುತ್ತವೆ.

ಅದನ್ನು ಬೇಕಾದವರಿಗೆ ಪಾವತಿ ಮಾಡಬಹುದು. ಆದರೆ, ಈ ಮಾದರಿಯ ಪಾವತಿಗಳಲ್ಲಿ ಕಳ್ಳಾಟವಾಡಲೂ ಅವಕಾಶವಿದೆ. ಕೆಲವೊಮ್ಮೆ ಈ ಮಾದರಿಯ ಪಾವತಿಯು ತೆರಿಗೆ ಇಲಾಖೆ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ ತಿಳಿಯುವದಿಲ್ಲ. ಅಕ್ರಮ ವ್ಯವಹಾರಕ್ಕೆ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿಯಿದೆ.

English summary
Wipro received an anonymous email, threatening a massive attack on all its offices in Bengaluru if the IT firm did not pay up Rs 500 crore in digital currency of bitcoins through a certain link online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X