ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ಎರಡು ವಾರ ಬಿಸಿಲಲ್ಲಿ ಬೇಯಲಿದೆ ಬೆಂಗಳೂರು

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಜನವರಿ ಮುಗಿಯುತ್ತಿದ್ದಂತೆ ಭರ್ಜರಿ ರಣ ಬಿಸಿಲು ಬೆಂಗಳೂರಿಗೆ ಕಾಲಿಟ್ಟಿದೆ. ಫೆಬ್ರವರಿ 25 ದಶಕದಲ್ಲೇ ಬೆಂಗಳೂರು ಕಂಡ ಅತ್ಯಂತ ಬಿಸಿಲು ಕಂಡ ದಿನವೆಂದು ಹವಾಮಾನ ಇಲಾಖೆ ಹೇಳಿದೆ.

ಫೆಬ್ರವರಿಯಲ್ಲಿಯೇ ಹೀಗಾದರೆ ಮಾರ್ಚ್‌ ಏಪ್ರಿಲ್ ಕತೆ ಹೇಗೆಂದು ರಾಜ್ಯದ ಜನ ಈಗಾಗಲೇ ಚಿಂತೆ ಮಾಡುತ್ತಿದ್ದಾರೆ. ಚಿಂತೆಯ ಗೆರೆಗಳು ಹೆಚ್ಚುವಂತಾ ವರದಿಯನ್ನೇ ಹವಾಮಾನ ಇಲಾಖೆ ನೀಡುತ್ತಿದೆ.

ಭಾರತ-ಆಸ್ಟ್ರೇಲಿಯಾ 2ನೇ ಟಿ20, ಸಂಚಾರ ಮಾರ್ಗ ಬದಲಾವಣೆ ಭಾರತ-ಆಸ್ಟ್ರೇಲಿಯಾ 2ನೇ ಟಿ20, ಸಂಚಾರ ಮಾರ್ಗ ಬದಲಾವಣೆ

ರಾಜ್ಯದಾದ್ಯಂತ ಬಿಸಿಲು ರಣವಾಗಿ ಸುರಿಯುತ್ತಿದೆ. ಬೆಂಗಳೂರಿನಲ್ಲಂತೂ ಬಿಸಿಲಿನ ಝಳ ತುಸು ಅಧಿಕವಾಗಿಯೇ ಇದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ವಾರಗಳು ಅತ್ಯಂತ ಬಿಸಿಲಿನ ದಿನಗಳನ್ನು ಬೆಂಗಳೂರು ನೋಡಲಿದೆಯಂತೆ.

Bengaluru will see more hot days in next two weeks

ಹತ್ತಿರದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ, ಆದರೆ ಎರಡು ವಾರಗಳ ಬಳಿಕ ಹನಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮನೆ ಬಾಗಿಲಿಗೆ ದಾಖಲೆ ತಲುಪಿಸಲಿದೆ ಕರ್ನಾಟಕ ಸರ್ಕಾರಮನೆ ಬಾಗಿಲಿಗೆ ದಾಖಲೆ ತಲುಪಿಸಲಿದೆ ಕರ್ನಾಟಕ ಸರ್ಕಾರ

ಮಂಗಳವಾರ ನಗರದಲ್ಲಿ 35 ಡಿಗ್ರಿ ಉಷ್ಣಾಂಶ ಇತ್ತು. ದಶಕದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಫೆಬ್ರವರಿ ತಿಂಗಳ ದಿನ ಇದಾಗಿ ದಾಖಲೆಗೆ ಸೇರಿತು. ಸಾಮಾನ್ಯವಾಗಿ ಶಿವರಾತ್ರಿಯ ನಂತರ ಬಿಸಿಲು ಹೆಚ್ಚಾಗುವುದು ವಾಡಿಕೆ ಆದರೆ ಈ ಬಾರಿ ಬಿಸಿಲು ಸ್ವಲ್ಪ ಬೇಗವೇ ಹೆಚ್ಚಾಗಿದೆ.

ಮೆಟ್ರೋ 2ನೇ ಹಂತ: 216 ಬೋಗಿಗಳ ಖರೀದಿಗೆ ಮುಂದಾದ ಬಿಎಂಆರ್‌ಸಿಎಲ್ ಮೆಟ್ರೋ 2ನೇ ಹಂತ: 216 ಬೋಗಿಗಳ ಖರೀದಿಗೆ ಮುಂದಾದ ಬಿಎಂಆರ್‌ಸಿಎಲ್

ಅತಿಯಾದ ಬಿಸಿಲಿನಿಂದ ಸನ್ ಸ್ಟ್ರೋಕ್ ಆಗುವ ಸಂಭವ, ನಿರ್ಜಲೀಕರಣ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

English summary
Meteorological department says Bengaluru will see more hot days in next two weeks. Bengaluru experienced the hottest February day it has seen in a decade on February 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X