ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್ ಯೋಜನೆ: ಪ್ರತ್ಯೇಕ ಟೆಂಡರ್ ಗೆ ನಿರ್ಧಾರ

|
Google Oneindia Kannada News

ಬೆಂಗಳೂರು, ಮಾರ್ಚ್ 7: ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಟೆಂಡರ್ ಕರೆಯಲು ಕೆಆರ್‌ಸಿಡಿಎಲ್ ಒಲವು ತೋರಿದೆ.

ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ವ್ಯಾಪ್ತಿಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯಡಿ ಲೂಪ್ ಮಾದರಿಯಲ್ಲಿ ಮೇಲು ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು? ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

ಉತ್ತರ-ದಕ್ಷಿಣ ಕಾರಿಡಾರ್ ಮಾರ್ಗದಲ್ಲಿನ ಸಿಬಿಡಿ ಪ್ರದೇಶದಲ್ಲಿನ ವಾಣಿಜ್ಯ ಚಟುವಟಿಕೆಯಿಂದಾಗಿ ಸದಾ ಟ್ರಾಫಿಕ್ ಪ್ರಮಾಣ ಹೆಚ್ಚಿರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಸಂಚಾರ ದಟ್ಟಣೆಯಲ್ಲೇ ಕಾಲ ಕಳೆಯಬೇಕಿದೆ. ವಸತಿ ಸಮುಚ್ಚಯವಿರುವ ಪ್ರದೇಶವಾಗಿರುವ ಕಾರಣ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಂಚಾರ ದಟ್ಟಣೆಯಾಗುವುದನ್ನು ಗಮನಿಸಿ ಕೆಲ ಮುಖ್ಯ ರಸ್ತೆಗಳನ್ನು ಲೂಪ್ ಮಾದರಿಯ ಮೇಲು ರಸ್ತೆಗೆ ಸಂಪರ್ಕಿಸಲಾಗುತ್ತದೆ.

Bengaluru will get loop road in elevated corridor

ಈಗಾಗಲೇ ಮೊದಲ ಹಂತದ ಕಾರಿಡಾರ್ ಗೆ ಮೂರು ಪ್ಯಾಕೇಜ್‌ನಡಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಲೂಪ್ ಮಾದರಿಯ ಮೇಲು ರಸ್ತೆಯನ್ನು ಸೇರ್ಪಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರುವ ಕೆಆರ್‌ಡಿಸಿಎಲ್ ಹೊಂದಿದೆ.

 ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

ಈಗಿರುವ ಟೆಂಡರ್‌ ನ 2,3ನೇ ಪ್ಯಾಕೇಜ್ ಜಾರಿಯಾಗುವ ಮಾರ್ಗದಲ್ಲಿ ಲೂಪ್ ಮಾದರಿ ಮೇಲು ರಸ್ತೆ ಮೇಲೇಳಲಿದೆ. ಶಿವಾಜಿನಗರದ ವಾಣಿಜ್ಯ ಪ್ರದೇಶ ಹಾಗೂ ರಿಚ್ಮಂಡ್ ರಸ್ತೆ ಸುತ್ತಲಿನ ಪ್ರಮುಖ ಜಂಕ್ಷನ್‌ಗಳ ವ್ಯಾಪ್ತಿಗೆ ಒಳಪಟ್ಟ ಆರು ರಸ್ತೆಗಳಲ್ಲಿ ಲೂಪ್ ಅಳವಡಿಸಲಾಗುತ್ತದೆ.

ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ

ಹಡ್ಸನ್ ವೃತ್ತ-ರಿಚ್ಮಂಡ್ ರಸ್ತೆ, ಮಿನರ್ವ ವೃತ್ತ, ಕೆಎಚ್‌ ರಸ್ತೆ ಹಾಗೂ ದಂಡು ರೈಲು ನಿಲ್ದಾಣದಿಂದ ಶಿವಾಜಿನಗರದ ರಸಲ್ ಮಾರುಕಟ್ಟೆ ಕಡೆಗೆ ಸಾಗುವ ರೀತಿ ವಿನ್ಯಾಸ ಮಾಡಲಾಗಿದೆ.

English summary
To avoid huge traffic problems state government decided to built loop roads in elevated corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X