ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಶೀಘ್ರವೇ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಫಿಯಾಕ್ಕೆ ಕಡಿವಾಣ ಹಾಕಲು ಬಿಬಿಎಂಪಿಯು 85 ರಸ್ತೆಗಳಲ್ಲಿ ಸ್ಮಾರ್ಟ್ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರುತ್ತಿದೆ.

ಅದರ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ಗುರುತಿಸಲಾಗಿದೆ. ಶೀಘ್ರ ಕಾರ್ಯಾದೇಶ ನೀಡಲಾಗುತ್ತಿದ್ದು, ಮೂರು ತಿಂಗಳಿನಲ್ಲಿ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ನಗರದ ವಾಹನ ದಟ್ಟಣೆ, ಪರಿಸರ ಹಾನಿ ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ರಸ್ತೆ ಬದಿ ವಾಹನ ನಿಲುಗಡೆ ವ್ಯವಸ್ಥೆಗೆ ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಸರ್ಕಾರದ ನಿರ್ದೇಶನದಂತೆ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಜಾರಿಗೊಳಿಸುತ್ತಿದೆ.

ಬೆಂಗಳೂರಲ್ಲಿ ಮಹಿಳಾ ಕಾರು ಚಾಲಕಿಯರಿಗೆ ಪಾರ್ಕಿಂಗ್ ಮೀಸಲಾತಿಬೆಂಗಳೂರಲ್ಲಿ ಮಹಿಳಾ ಕಾರು ಚಾಲಕಿಯರಿಗೆ ಪಾರ್ಕಿಂಗ್ ಮೀಸಲಾತಿ

ವಾಹನ ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್ ಮೀಟರ್ಸ್ ಮೂಲಕ ಟಿಕೇಟ್ ಪಡೆದುಕೊಳ್ಳಬೇಕು. ನಂತರ ಅಲ್ಲಿಂದ ಹೊರಡುವಾಗ ಪಾರ್ಕಿಂಗ್ ಮೀಟರ್ಸ್ ನಲ್ಲಿ ಟಿಕೇಟ್ ನಲ್ಲಿ ಬಾರ್ ಕೋಡ್ ತೋರಿಸಿದರೆ ಎಷ್ಟು ಶುಲ್ಕವಾಗಿದೆ ಎಂಬುದನ್ನು ಅದು ತಿಳಿಸುತ್ತದೆ.

ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್

ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್

ಅಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ವಾಹನ ನಿಲುಗಡೆ ಶುಲ್ಕವನ್ನು ನಗದಿನ ಬದಲಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಶುಲ್ಕ ವಸೂಲಿ ಮತ್ತು ವಾಹನಗಳನ್ನು ನಿಲುಗಡೆ ಜಾಗದ ಒಳಗೆ ಮತ್ತು ಹೊರಗೆ ಬಿಡಲು ಯಾಂತ್ರಿಕ ವ್ಯವಸ್ಥೆ ಅಳವಡಿಸಲಾಗುತ್ತದೆ.

ಸ್ಮಾರ್ಟ್ ಪಾರ್ಕಿಂಗ್ ಜಾಗದಲ್ಲಿ ಬಿಗಿ ಭದ್ರತೆ

ಸ್ಮಾರ್ಟ್ ಪಾರ್ಕಿಂಗ್ ಜಾಗದಲ್ಲಿ ಬಿಗಿ ಭದ್ರತೆ

ವಾಹನ ನಿಲುಗಡೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಜತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಆ ಮೂಲಕ ವಾಹನ ನಿಲುಗಡೆ ಸ್ಥಳದಲ್ಲಿ ಯಾವುದೇ ವಾಹನ ಕಳವು ಸೇರಿ ಇನ್ನಿತರೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ.

ಸ್ಮಾರ್ಟ್ ಪಾರ್ಕಿಂಗ್ ನಿಂದ31.56 ಕೋಟಿ ರೂ ಆದಾಯ

ಸ್ಮಾರ್ಟ್ ಪಾರ್ಕಿಂಗ್ ನಿಂದ31.56 ಕೋಟಿ ರೂ ಆದಾಯ

ಯೋಜನೆ ಅನುಷ್ಠಾನ ಮತ್ತು10 ವರ್ಷದ ನಿರ್ವಹಣೆಯನ್ನು ಬಿಲ್ಡಿಂಗ್ ಕಂಟ್ರೋಲ್ ಸಲೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ. ಸಂಸ್ಥೆಯು 10 ವರ್ಷ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದು , ಪಾರ್ಕಿಂಗ್ ಶುಕಲ್ಕ ವಸೂಲಿ ಮಾಡಲಿದೆ. ಅದಕ್ಕೆ ಬದಲಾಗಿ ಬಿಬಿಎಂಪಿಗೆ ವಾರ್ಷಿಕ 31.56 ಕೋಟಿ ರೂಗಳಂತೆ 10 ವರ್ಷಗಳಿಗೆ 315.60 ಕೋಟಿ ರೂ.ಗಳನ್ನು ನೀಡಲಿದೆ.

ಪಾರ್ಕಿಂಗ್ ಮೀಟರ್ಸ್ ಯಂತ್ರ ಅಳವಡಿಕೆ

ಪಾರ್ಕಿಂಗ್ ಮೀಟರ್ಸ್ ಯಂತ್ರ ಅಳವಡಿಕೆ

ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ಸ್ ಸಂಸ್ಥೆಗೆ ಇನ್ನೊಂದು ತಿಂಗಳಲ್ಲಿ ಕಾರ್ಯಾದೇಶ ನೀಡಲಾಗುತ್ತಿದ್ದು, ಅದಾದ ಮೂರು ತಿಂಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.ಯೋಜನೆಯಂತೆ ಎಲ್ಲಾ 85 ರಸ್ತೆಗಳಲ್ಲಿ 3600 ಕಾರು ಹಾಗೂ10 ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ ಸುಲ್ಕ ವಸೂಲಿ ಮತ್ತು ಟಿಕೇಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ಸ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಯಾವ ವಾಹನವು ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್ ಮೀಟರ್ಸ್ ಮೂಲಕ ಟಿಕೇಟ್ ಪಡೆದುಕೊಳ್ಳಬಹುದು.

ಮೂರು ವಿಧದ ರಸ್ತೆಗಳು

ಮೂರು ವಿಧದ ರಸ್ತೆಗಳು

ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ದಟ್ಟಣೆ ಮತ್ತು ರಸ್ತೆ ಗುಣಮಟ್ಟವನ್ನಾಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ಎ(ಪ್ರೀಮಿಯಂ) , ಬಿ(ವಾಣಿಜ್ಯ), ಸಿ (ಸಾಮಾನ್ಯ) ಎಂದು ಮೂರು ವಿಭಾಗ ಮಾಡಲಾಗಿದೆ. ಎ ವರ್ಗದಲ್ಲಿ14, ಬಿ ವರ್ಗದಲ್ಲಿ 46 ಹಾಗೂ ಸಿ ವಿಭಾಗದಲ್ಲಿ25 ರಸ್ತೆಗಳು ಬರಲಿವೆ.

English summary
To control Parking Mafia BBMP will start smart parking system in Bengaluru. Shortly this system will start in 85 areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X