• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

|

ಬೆಂಗಳೂರು, ಸೆಪ್ಟೆಂಬರ್ 10: ಬಿಬಿಎಂಪಿಯು ಬೆಂಗಳೂರಲ್ಲಿ ವೈಟ್ ಟಾಪಿಂಗ್ ಯೋಜನೆಗೆ ಮಾಡಿದ್ದ ವೆಚ್ಚದಲ್ಲಿಇನ್ನೊಂದು ಚಂದ್ರಯಾನವನ್ನೇ ಇಸ್ರೊ ಮಾಡಬಹುದಿತ್ತು ಎಂಬ ಟೀಕೆ ವ್ಯಕ್ತವಾಗಿದೆ.

ಬೆಂಗಳೂರಲ್ಲೀಗ ಸಂಚಾರ ವ್ಯವಸ್ಥೆಯ ದಿಕ್ಕನ್ನೇ ತಪ್ಪಿಸಿ ನಡೆಸಲಾಗುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆ ಕೆದಕುತ್ತಾ ಹೋದರೆ ಈ ಬಿಳಿ ಹೊದಿಕೆ ಯೋಜನೆ ಕುರಿತು ಬರಿ ಕಪ್ಪು ಕಥೆಗಳೇ ಗೋಚರಿಸುತ್ತಿವೆ.

ಎಂಜಿ ರಸ್ತೆಯಲ್ಲಿ ವೈಟ್‌ ಟಾಪಿಂಗ್: ಭಾರಿ ಟ್ರಾಫಿಕ್ ಜಾಮ್ ಆತಂಕ

ಹೌದು ಚಂದ್ರಯಾನ 2ಕ್ಕೆ ತಗುಲಿದ ವೆಚ್ಚಕ್ಕಿಂತಲೂ ಬೆಂಗಳೂರಿನ ರಸ್ತೆಗೆ ಬಿಬಿಎಂಪಿ ಮಾಡಿದ ವೆಚ್ಚದವೇ ಹೆಚ್ಚಿದೆ. ಆದರೆ ಎದರಿಂದ ಎಷ್ಟು ಉಪಯೋಗವಾಗಿದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

ನಾಸಾವು ಚಂದ್ರಯಾನಕ್ಕೆ 2ರಲ್ಲಿ 3,84,400 ಕಿ.ಮೀ ಉಪಗ್ರಹ ಉಡಾವಣೆ ಮಾಡಲು 978 ಕೋಟಿ ರೂ ವೆಚ್ಚ ಮಾಡಿದ್ದರೆ ಬಿಬಿಎಂಪಿಯು ಕೇವಲ 94 ಕಿ.ಮೀ ರಸ್ತೆಗೆ 986 ಕೋಟಿ ರೂ ವೆಚ್ಚ ಮಾಡಿದೆ.

ಇಡೀ ಮೈಸೂರು ರಸ್ತೆಯ 4.8 ಕಿಮೀ ಭಾಗವನ್ನು ಪೂರ್ತಿಯಾಗಿ ಪರಿಶೀಲಿಸಿದರೆ, ಎಲ್ಲಾ ಕಡೆಗಳಲ್ಲೂ ಕಾಬ್ಲರ್ ಸ್ಟೋನ್ ಅಳವಡಿಸಿಲ್ಲದಿರುವುದು ಕಂಡುಬಂದಿದೆ. ರಸ್ತೆಯ ಒಂದು ಬದಿ ಕಂಪ್ಲೀಟ್ ಆಗಿದೆ ಅಂತ ಪಾಲಿಕೆ ಅಧಿಕಾರಿಗಳು ಹೇಳಿದ್ರೂ ರಸ್ತೆ ಮಧ್ಯೆ ಮಧ್ಯೆ ಡಾಂಬರ್ ಹಾಕಿದ ರಸ್ತೆಗಳನ್ನು ತೆಗೆದು ವೈಟ್ ಟಾಪಿಂಗ್ ಹಾಕಿಲ್ಲ.

10 ತಿಂಗಳು ವೈಟ್ ಟಾಪಿಂಗ್, ಟ್ರಾಫಿಕ್ ಜಾಮ್‌ ಎದುರಿಸಲು ಸಿದ್ಧರಾಗಿ

ರಸ್ತೆಯ ಮತ್ತೊಂದು ಬದಿ ಒಂದೂವರೆ ತಿಂಗಳ ಹಿಂದೆಯೇ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿದ್ರೂ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಳಿ 400 ರಿಂದ 500 ಅಡಿ ಉದ್ದ ವೈಟ್ ಟಾಪಿಂಗ್ ಹಾಕಿ ಕೈಬಿಡಲಾಗಿದೆ. ಇದ್ರಿಂದ ಬೆಳಗ್ಗೆಯಿಂದ ರಾತ್ರಿ ತನಕ ಟ್ರಾಫಿಕ್ ಜಾಮ್.

ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು

ಈ ರೂಟ್​ನಲ್ಲಿ ಓಡಾಡೋರು ಬಿಬಿಎಂಪಿಗೆ ಹಿಡಿಶಾಪ ಹಾಕ್ತಿದ್ದಾರೆ. ಪ್ರತಿ ಕಿಮೀಗೆ 8 ಕೋಟಿ ರೂಪಾಯಿ ಖರ್ಚು ಮಾಡಿದರೂ ಪಾಲಿಕೆಯಿಂದ ಗುಣಮಟ್ಟ ಕೆಲಸ ಆಗದೇ ಇರೋದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಕಾಂಟ್ರಾಕ್ಟರ್​ಗಳ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ.

ಹೊಸದಾಗಿ ವೈಟ್ ಟಾಪಿಂಗ್ ಮಾಡದಂತೆ ಮುಖ್ಯಮಂತ್ರಿ ಸೂಚನೆ

ಹೊಸದಾಗಿ ವೈಟ್ ಟಾಪಿಂಗ್ ಮಾಡದಂತೆ ಮುಖ್ಯಮಂತ್ರಿ ಸೂಚನೆ

ವೈಟ್ ಟಾಪಿಂಗ್ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವುದರ ಜೊತೆಗೆ ಹೊಸದಾಗಿ ವೈಟ್ ಟಾಪಿಂಗ್ ಮಾಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ಅವರ ಜೊತೆ ಖುದ್ದಾಗಿ ಮಾತನಾಡಿ ಸೂಚನೆ ನೀಡಿದ್ದಾರೆ.

25 ವರ್ಷ ಬಾಳಿಕೆ ಬರಬೇಕಾಗಿದ್ದ ರಸ್ತೆ ಏನಾಗಿದೆ

25 ವರ್ಷ ಬಾಳಿಕೆ ಬರಬೇಕಾಗಿದ್ದ ರಸ್ತೆ ಏನಾಗಿದೆ

25 ವರ್ಷ ಬಾಳಿಕೆ ಬರಬೇಕಿದ್ದ ವೈಟ್ ಟಾಪಿಂಗ್ ವರ್ಷದಲ್ಲೇ ಕಿತ್ತು ಹೋಗುತ್ತಿದೆ. ಹೆಚ್ಚೂಕಡಿಮೆ ಸಾವಿರ ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಮೊದಲಿಂದಲೂ ಅಪಸ್ವರಗಳು ಕೇಳಿಬರುತ್ತಲೇ ಇವೆ.

ಸುಕಾಸುಮ್ಮನೆ ಯೋಜನೆಯನ್ನು ದೊಡ್ಡದಾಗಿ ಮಾಡುವ ಸ್ಕೀಮ್ ಎಂಬ ಆರೋಪಗಳಿವೆ. ವರ್ಷದ ಹಿಂದಷ್ಟೇ ವೈಟ್ ಟಾಪಿಂಗ್ ಕಂಡಿದ್ದ ಮೈಸೂರು ರಸ್ತೆಯಲ್ಲಿ 8 ಅಡಿಯಷ್ಟು ಭಾಗವು 4 ಇಂಚು ಕುಸಿದಿದೆ. ಇದರೊಂದಿಗೆ, ವೈಟ್ ಟಾಪಿಂಗ್​ನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನುವ ಆರೋಪಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

ಕೆಆರ್‌ ಮಾರ್ಕೆಟ್ ಬಳಿ ಕುಸಿದ ರಸ್ತೆ

ಕೆಆರ್‌ ಮಾರ್ಕೆಟ್ ಬಳಿ ಕುಸಿದ ರಸ್ತೆ

ಕೆ.ಆರ್. ಮಾರ್ಕೆಟ್​ನಿಂದ ಬಿಎಚ್​ಇಎಲ್ ಸರ್ಕಲ್ ತನಕದ ಮೈಸೂರು ರಸ್ತೆಯ 4.8 ಕಿಲೋ ಮೀಟರ್ ಉದ್ದದ ಒಂದು ಬದಿಗೆ ವೈಟ್ ಟಾಪಿಂಗ್ ಕಾಮಗಾರಿ 2018ರ ಏಪ್ರಿಲ್​ನಲ್ಲಿ ಮುಗಿದಿತ್ತು. ಸುಮಾರು 25 ರಿಂದ 30 ವರ್ಷ ಬಾಳಿಕೆ ಬರಬೇಕಿದ್ದ ಈ ರಸ್ತೆಯ ಒಂದು ಭಾಗವು ಒಂದೇ ವರ್ಷಕ್ಕೆ ಕುಸಿದಿದೆ.

ಬಾಪೂಜಿನಗರ ಪ್ರವೇಶದ್ವಾರದ ಬಳಿ ರಸ್ತೆ ಕುಸಿದು, ವೈಟ್ ಟಾಪಿಂಗ್ ಮೇಲ್ಭಾಗದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ. ಇದು ನಗರದಲ್ಲಿ ನಡೆಯುತ್ತಿರುವ 972 ಕೋಟಿ ರೂಪಾಯಿ ವೆಚ್ಚದ ವೈಟ್ ಟಾಪಿಂಗ್ ಕಾಮಗಾರಿ ಗುಣಮಟ್ಟದ ಮೇಲೆಯೇ ಸಂಶಯ ಮೂಡುವಂತೆ ಮಾಡಿದೆ.

 2017ರಲ್ಲಿ ಎಷ್ಟು ಕಾಮಗಾರಿ?

2017ರಲ್ಲಿ ಎಷ್ಟು ಕಾಮಗಾರಿ?

ನಗರದ ಒಟ್ಟು 30 ರಸ್ತೆಗಳಲ್ಲಿ 93.5 ಕಿಲೋ ಮೀಟರ್ ಉದ್ದದ ವೈಟ್ ಟಾಪಿಂಗ್ ಹಾಕುವ ರಸ್ತೆ ಕಾಮಗಾರಿ 2017ರಿಂದ ಬೇರೆ ಬೇರೆ ಅವಧಿಯಲ್ಲಿ ಪ್ರಾರಂಭವಾಗಿದೆ. 2 ಪ್ಯಾಕೇಜ್​ಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಈತನಕ ಒಟ್ಟು 28 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕಾಗಿ 230 ರಿಂದ 240 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ ಅಂತ ಹೇಳುತ್ತಾರೆ ಮೇಯರ್ ಗಂಗಾಂಬಿಕೆ. ಮೈಸೂರು ರೋಡ್ ವೈಟ್ ಟಾಪಿಂಗ್ ರಸ್ತೆ ಕುಸಿತದ ಬಗ್ಗೆ ಕೇಳಿದ್ರೆ, ಈ ಬಗ್ಗೆ ಎಂಜಿನಿಯರ್ ಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tt has been criticized that NASA could have done one more Chandrayaan at the expense of the BBMP's white-topping project in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more