ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರಾಂತ್ಯಕ್ಕೆ ಮುದ ನೀಡಲು ಬೇಂದ್ರೆ, ಕೆಎಸ್ ನ ಸಂಗೀತ ಘಮಲು

By Mahesh
|
Google Oneindia Kannada News

ಬೆಂಗಳೂರು, ಏ.4: ಈ ವಾರಾಂತ್ಯದಲ್ಲಿ ಪ್ರೇಮ ಕವಿ ಕೆಎಸ್ ನರಸಿಂಹ ಸ್ವಾಮಿ ಹಾಗೂ ವರಕವಿ ದ.ರಾ. ಬೇಂದ್ರೆ ಅವರ ಕವನಗಳ ಗಾನಸುಧೆಯಲ್ಲಿ ಬೆಂಗಳೂರಿಗರು ಮುಳುಗೇಳಬಹುದು. ಎರಡು ಕಾರ್ಯಕ್ರಮಗಳಲ್ಲೂ ಹಾಡುಗಾರಿಕೆ ಜೊತೆಗೆ ಕಾವ್ಯ, ಕವನಗಳ ವಿಶ್ಲೇಷಣೆ, ಚರ್ಚೆ ಎಲ್ಲವೂ ಇರುತ್ತದೆ.

ಮೊದಲಿಗೆ ಕೆಎಸ್ ನರಸಿಂಹ ಸ್ವಾಮಿ ಅವರ ಜನ್ಮ ಶತಾಬ್ದಿಯ ಅಂಗವಾಗಿ ಸುನಾದ ಬಳಗ ಆಯೋಜಿಸಿರುವ ಕಾರ್ಯಕ್ರಮದ ವಿವರ ಹೀಗಿದೆ ನೋಡಿ:

ಕಾರ್ಯಕ್ರಮದ ಹೆಸರು: ಕೆಎಸ್ ನ ನೆನಪು.. ನರಸಿಂಹ ಸ್ವಾಮಿ ಅವರ ಆಯ್ದ ಕವಿತೆಗಳ ವಿಶ್ಲೇಷಣೆ ಮತ್ತು ಗಾಯನ.
ಗಾಯನ: ಸಂಗೀತಾ ಕಟ್ಟಿ ಕುಲಕರ್ಣಿ ಮತ್ತು ರವಿ ಮುರೂರು.
ವಿಶ್ಲೇಷಣೆ: ಶತವಧಾನಿ ಡಾ. ಆರ್ ಗಣೇಶ್, ಪ್ರವೀಣ್ ಡಿ.ರಾವ್ ಮತ್ತು ಮಹೇಶ್.

ದಿನಾಂಕ/ದಿನ: ಏ.4, ಶನಿವಾರ
ಸಮಯ: 5.30ಗಂಟೆಗೆ
ಸ್ಥಳ: ಜೆಎಸ್ಎಸ್ ಸಭಾಂಗಣ, 38ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಬೆಂಗಳೂರು-70
ಪ್ರವೇಶ ಉಚಿತ, ಮನರಂಜನೆ ಖಚಿತ
ಆಯೋಜಕರು: ಸುನಾದ ಬಳಗ, ಬೆಂಗಳೂರು

Bengaluru Weekend Musical Events Da Ra Bendre and KS Narasimha Swamy

ಕಾರ್ಯಕ್ರಮದ ಹೆಸರು: ಬೇಂದ್ರೆ ಬೆಳಗು...ಬೇಂದ್ರೆ ಕಾವ್ಯದ ನಾದ ಲೀಲೆ

ಗಾಯನ: ರಾಮಚಂದ್ರ ಹಡಪದ ಮತ್ತು ತಂಡ, ಕುಮಾರಿ ಎ.ಎಸ್ ಶೃತಿ, ಶ್ರೀಮತಿ ಗಾರ್ಗಿ ಪಂಚಾಂಗಂ, ಶ್ರೀಮತಿ ನಯನತಾರ ಹರಿಶಂಕರ್
ವಿಶ್ಲೇಷಣೆ: ಎಚ್.ಎ‌ಸ್ ವೆಂಕಟೇಶ್ ಮೂರ್ತಿ, ಕೆ.ವೈ ನಾರಾಯಣ ಸ್ವಾಮಿ

ದಿನಾಂಕ/ದಿನ: ಏ.5, ಭಾನುವಾರ
ಸಮಯ: ಸಂಜೆ 4 ರಿಂದ 8 ಗಂಟೆ
ಸ್ಥಳ: ಕೆ.ಎಚ್ ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ, ಬೆಂಗಳೂರು.
ಟಿಕೆಟ್ ದರ: 150 ರು
ಆಯೋಜಕರು: ಅವಿರತ ಪ್ರತಿಷ್ಠಾನ, ಬೆಂಗಳೂರು
ಸಂಪರ್ಕಿಸಿ: 98800 86300/98808 02642
ಗಮನಿಸಿ: ಭಾನುವಾರ, ಏ.12ರಂದು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬೆಳಗ್ಗೆ 9 ರಿಂದ 5.30ರವರೆಗೆ ಆಪ್ತ ವಾತಾವರಣದಲ್ಲಿ ಹಿರಿಯ ಸಾಹಿತಿಗಳೊಡನೆ ಬೇಂದ್ರೆಯವರ ಆಯ್ದ ಕವನಗಳ ಕುರಿತು ವಿಶೇಷ ಕಾರ್ಯಾಗಾರ ಮತ್ತು ಸಂವಾದ ಇರುತ್ತದೆ.

English summary
Bengaluru this Weekend Musical Events includes Da Ra Bendre poem recital and discussion organised by Aviratha Trust at KH Kala Soudha and KS Narasimha Swamy poem recital Program by Sunada Balaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X