ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬಿಸಿಲ ಝಳ; ಇದು ಚಳಿಗಾಲವೋ, ಬೇಸಿಗೆಯೋ?

|
Google Oneindia Kannada News

ಬೆಂಗಳೂರು, ಫೆಬ್ರವರಿ 01 : ಎಲ್ಲರೂ ಬಾಯ್ತುಂಬ ಹೊಗಳುತ್ತಿದ್ದ ಬೆಂಗಳೂರಿನ ಹವಾಮಾನಕ್ಕೆ ಈಗ ಏನಾಗಿದೆ?. ಚಳಿಗಾಲದಲ್ಲಿ ಬೇಸಿಗೆಯ ಅನುಭವ ಕೊಡುವಂತಹ ಸುಡು ಬಿಸಿಲು ಇದೆ. ಉಷ್ಣಾಂಶ ದಾಖಲೆಯನ್ನು ಬರೆದಿದೆ.

ಈ ವಾರ ಬೆಂಗಳೂರಿನಲ್ಲಿ ಚಳಿ ಮಾಯವಾಗಿದೆ. 11 ಗಂಟೆ ಬಳಿಕ ಬಿಸಿಲಿನ ಝಳ ಜೋರಾಗಿದೆ. ಜನರು ಕಬ್ಬಿನ ಹಾಲು, ಎಳನೀರು, ಕಲ್ಲಂಗಡಿ ಅಂಗಡಿಗಳನ್ನು ಹುಡುಕುತ್ತಿದ್ದಾರೆ. ಜನವರಿ 31ರಂದು ನಗರದಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದೆ.

ಹವಾಮಾನ ವೈಪರಿತ್ಯ : ಭವಿಷ್ಯದಲ್ಲಿ ಹನಿ ನೀರಿಗೂ ಸಂಕಷ್ಟ ಹವಾಮಾನ ವೈಪರಿತ್ಯ : ಭವಿಷ್ಯದಲ್ಲಿ ಹನಿ ನೀರಿಗೂ ಸಂಕಷ್ಟ

ಭಾರತೀಯ ಹವಾಮಾನ ಇಲಾಖೆಯೇ ನೀಡುವ ಮಾಹಿತಿಯಂತೆ ಜನವರಿ ತಿಂಗಳಿನಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದ್ದು ಇದೇ ಮೊದಲು. 2000ನೇ ಇಸವಿಯಲ್ಲಿ ಜನವರಿ 24ರಂದು 32.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆ

Bengaluru Weather Highest Temperature Recorded In January

ಇದು ಚಳಿಗಾಳ, ಬೆಂಗಳೂರಲ್ಲಿ ರಾತ್ರಿ ಮತ್ತು ಮುಂಜಾನೆ ಭಾರಿ ಚಳಿ ಇರುತ್ತಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ರಾತ್ರಿ ಫ್ಯಾನಿಲ್ಲದೇ ನಿದ್ದೆ ಬರುತ್ತಿಲ್ಲ. ಮುಂಜಾನೆ ವಾಕಿಂಗ್ ಹೋಗಲು ಹೊರಟರೆ ಮಂಕಿ ಕ್ಯಾಪ್, ಜರ್ಕಿನ್ ಅಗತ್ಯವಿಲ್ಲ.

ಮೇಲೆ ಹಾರುತ್ತಿದೆ ಸಮುದ್ರದ ನೀರು!: ಪ್ರಕೃತಿ ವಿಸ್ಮಯದ ವೈರಲ್ ವಿಡಿಯೋಮೇಲೆ ಹಾರುತ್ತಿದೆ ಸಮುದ್ರದ ನೀರು!: ಪ್ರಕೃತಿ ವಿಸ್ಮಯದ ವೈರಲ್ ವಿಡಿಯೋ

ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರು ನಗರದ ಉಷ್ಣಾಂಶ 35 ಡಿಗ್ರಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಫೆಬ್ರವರಿಯಲ್ಲಿಯೂ ಉದ್ಯಾನ ನಗರಿಯ ಜನರು ಬಿಸಿಲಿನ ಝಳಕ್ಕೆ ಮೈಯೊಡ್ಡಬೇಕು.

English summary
Bengaluru city witness for the highest heat in the winter session. On January 31, 2020 33.4 degree temperature recorded at city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X