ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರೀಕ್ಷಿಸಿ ! ಬೆಂಗಳೂರಲ್ಲಿ ಮಾಯದಂಥ ಮಳೆ ಬೀಳಲಿದೆ

By Mahesh
|
Google Oneindia Kannada News

ಬೆಂಗಳೂರು, ಮೇ 03: ದೇಶದ ಅತ್ಯಂತ ಬರಪೀಡಿತ ಪ್ರದೇಶಗಳಲ್ಲಿ ಒಂದೆನಿಸಿರುವ ಮಹಾರಾಷ್ಟ್ರದ ಲಾತೂರ್ ನಲ್ಲಿ ಮಳೆ ಆದ್ಮೇಲೆ ಬೆಂಗ್ಳೂರಲ್ಲಿ ಮಳೆ ಬೀಳ್ದೇ ಇರುತ್ತಾ! ಮಳೆ ಬಂದೇ ಬರುತ್ತದೆ ಎಂಬ ನಿರೀಕ್ಷೆ ಬೆಂಗಳೂರಿಗರಲ್ಲಿದೆ. ಮಾಯದಂಥ ಮಳೆ ಮೇ ತಿಂಗಳ ಮೊದಲ ವಾರದಲ್ಲೇ ಸುರಿಯುವ ಮುನ್ಸೂಚನೆ ಸಿಕ್ಕಿದೆ.

ಸ್ಕೈಮೆಟ್ ವರದಿಯಂತೆ ಮೇ 3 ರಿಂದ ಮೇ 7ರ ತನಕ ಬೆಂಗಳೂರಿನಲ್ಲಿ ಮಳೆ ಬೀಳುವ ಎಲ್ಲಾ ಲಕ್ಷಣಗಳಿವೆ. ಪಕ್ಕದ ರಾಜ್ಯ ತೆಲಂಗಾಣದಲ್ಲಿ ಈಗಾಗಲೇ ಕರಿಮೋಡಗಳು ಪರಸ್ಪರ ಹತ್ತಿರ ಸೇರುತ್ತಿವೆ. ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು ಭಾಗಕ್ಕೆ ಮೊದಲ ಮಳೆ ಸಿಂಚನ ಭಾಗ್ಯ ಸಿಗಲಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಿಂದ ಶೀತ ಮಾರುತಗಳು ಬೀಸಲು ಆರಂಭಿಸಿದೆ, ಮೋಡಗಳ ಘರ್ಷಣೆಯಾಗಿ ಮಿಂಚು ಗುಡುಗು ಸಹಿತ ಮಳೆ ಬರುವುದೊಂದೇ ಬಾಕಿ ಎಂದು ಹೇಳಲಾಗಿದೆ.[ಹೆಚ್ಚು ಸುರಿಯಲಿದೆ ಮುಂಗಾರು ಮಳೆ]

ಒಟ್ಟಾರೆ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗ ತಂಪು ತಂಪು ಕೂಲ್ ಎನಿಸಲಿದೆ ಎಂಬ ತಾಜಾ ಮಾಹಿತಿ ಬಂದಿದೆ.

Bengaluru Weather Forecast: Pre-monsoon showers predicted May 3 and May 7

ಆತಂಕದಲ್ಲಿ ಬೆಂಗಳೂರು: ಇತ್ತೀಚೆಗೆ 85 ವರ್ಷಗಳಲ್ಲೇ ಕಾಣದಂಥ ಬಿಸಿಲು ದಾಖಲಿಸಿದ(ಏಪ್ರಿಲ್ 24ರಂದು) ಒಂದು ಕಾಲದ ಉದ್ಯಾನ ನಗರಿ ಮೇ ತಿಂಗಳಿನಲ್ಲಿ ತನ್ನ ಹಿಂದಿನ ಸ್ಥಿತಿಗೆ ಮರಳಲಿದೆ. ಏಪ್ರಿಲ್ 25 ರಂದು 21 ಎಂಎಂ ಹಾಗೂ ಏಪ್ರಿಲ್ 5ರಂದು 5 ಎಂಎಂ ಮಳೆ ಬಿದ್ದ ಅಂಕಿ ಅಂಶ ಸಿಗುತ್ತದೆ. [ಮಳೆಗಾಗಿ ಎಚ್ಡಿ ಕೋಟೆಯಲ್ಲಿ ಕಪ್ಪೆ ಮೆರವಣಿಗೆ]

ಆದರೆ, ಇತ್ತೀಚೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ನೀಡಿದ ವರದಿಯಂತೆ, ಅಂತರ್ಜಲ ಬತ್ತಿ ಹೋಗಿರುವ, ಕೆರೆಗಳನ್ನು ನಾಶ ಮಾಡಿರುವ, ಗಿಡ ಮರಗಳ ಮಾರಣ ಹೋಮ ನಡೆಸಿರುವ ಮಾಲಿನ್ಯಯುಕ್ತ ನಗರಿ ಬೆಂಗಳೂರು ಇನ್ನು ಐದು ವರ್ಷಗಳಲ್ಲಿ ಬೆಂಗಾಡಾಗಿ ವಾಸಿಸಲು ಯೋಗ್ಯವಲ್ಲದ ಪ್ರದೇಶ ಎನಿಸಿಕೊಳ್ಳಲಿದೆಯಂತೆ.

ಸದ್ಯಕ್ಕೆ ಗೂಗಲ್ ನಲ್ಲಿ ಈ ದಿನದ ಟೆಂಪರೇಚರ್ 38 ಡಿಗ್ರಿ ಸೆಲ್ಸಿಯನ್ಸ್ ನಷ್ಟಿದೆ. 33 ರಿಂದ 39.2ರ ತನಕ ದಾಖಲಾದ ಉಷ್ಣಾಂಶ ಮೇ ತಿಂಗಳಲ್ಲಿ ಬದಲಾಗುವ ಲಕ್ಷಣಗಳಿವೆ. ಒಟ್ಟಾರೆ ಜೂನ್ ನಲ್ಲಿ ಮುಂಗಾರು ಮಳೆ ಬರುವ ಮೊದಲು ಮುಂಗಾರು ಪೂರ್ವ ಮಳೆ ಮೇ ತಿಂಗಳಿನಲ್ಲಿ ಬೀಳುವ ತಂಪು ಸುದ್ದಿ ಸಿಕ್ಕಿದೆ. ಕಾದು ನೋಡೋಣ..

English summary
Bengaluru: Pre-monsoon showers are likely to grace the city between May 3 and May 7 predicts Skymet report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X