• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಫೆಬ್ರವರಿ 9 ರಂದು ವರ್ಷದಲ್ಲಿಯೇ ಅಧಿಕ ಚಳಿ ದಾಖಲು

|
Google Oneindia Kannada News

ಬೆಂಗಳೂರು,ಫೆಬ್ರವರಿ 11: ಬೆಂಗಳೂರಿಲ್ಲಿ ಫೆಬ್ರವರಿ 9 ರಂದು ವರ್ಷದ ಅತ್ಯಧಿಕ ಚಳಿ ದಾಖಲಾಗಿತ್ತು.

ರಾಜ್ಯದಲ್ಲಿ ಈ ಬಾರಿ ಮಳೆಗಾಲದ ತಿಂಗಳು ಮುಗಿದ ಮೇಲೂ ಸಾಕಷ್ಟು ಮಳೆಯಾಗಿದೆ. ಹಾಗೆಯೇ ಚಳಿಗಾಲ ಮುಗಿಯುತ್ತಾ ಬರುವ ಹೊತ್ತಿನಲ್ಲಿ ಚಳಿ ಹೆಚ್ಚಾಗುತ್ತಿದೆ. ಹಾಗೆಯೇ ರಾಜ್ಯಾದ್ಯಂತ ಚಳಿ ಮುಂದುವರೆದಿದೆ.

ಕರ್ನಾಟಕದಲ್ಲಿ ಫೆಬ್ರವರಿ 13ರ ಬಳಿಕ ಚಳಿ ಪ್ರಮಾಣ ಇಳಿಕೆಕರ್ನಾಟಕದಲ್ಲಿ ಫೆಬ್ರವರಿ 13ರ ಬಳಿಕ ಚಳಿ ಪ್ರಮಾಣ ಇಳಿಕೆ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು,ಈ ವರ್ಷದಲ್ಲಿ ಇಲ್ಲಿಯವರೆಗೂ ಫೆಬ್ರವರಿ 9 ರ ರಾತ್ರಿ ಅತ್ಯಧಿಕ ಚಳಿ ದಾಖಲಾಗಿದೆ.

ಗಾಳಿಯಲ್ಲಿ ತೇವಾಂಶ ಕಡಿಮೆ

ಗಾಳಿಯಲ್ಲಿ ತೇವಾಂಶ ಕಡಿಮೆ

ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಸಂಪೂರ್ಣವಾಗಿ ತೇವಾಂಶವಿಲ್ಲ, ತಾಪಮಾನ ಕುಸಿತಕ್ಕೆ ಕಾರಣವಾಗುವ ಎಲ್ಲಾ ಅಂಶಗಳು ಇರುವುದರಿಂದ ತಾಪಮಾನ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಜನವರಿಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು

ಜನವರಿಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು

ಜನವರಿ ಹಾಗೂ ಈ ತಿಂಗಳ ಮೊದಲ ವಾರದಲ್ಲಿ 15ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಸುಳಿದಾಡುತ್ತಿದೆ. ಬೀದರ್ ನಲ್ಲಿ 9, ವಿಜಯಪುರದಲ್ಲಿ 11. 5, ಹಾಸನ 10-5 ಮತ್ತು ಮೈಸೂರಿನಲ್ಲಿ 12-4 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ.

ಜನವರಿ 26 ರಂದು 15.4 ಡಿಗ್ರಿ ಸೆಲ್ಸಿಯಸ್ ತಾಪಮಾನ

ಜನವರಿ 26 ರಂದು 15.4 ಡಿಗ್ರಿ ಸೆಲ್ಸಿಯಸ್ ತಾಪಮಾನ

ಜನವರಿ 26 ರಂದು 15.4 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದೆ. ಆದಾಗ್ಯೂ, ಅದನ್ನು ಅತ್ಯಂತ ಕಡಿಮೆ ತಾಪಮಾನ ಎನ್ನಲಾಗದು, ಫೆಬ್ರವರಿ 6, 1884ರಲ್ಲಿ ಬೆಂಗಳೂರಿನಲ್ಲಿ 9.4 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿತ್ತು. ಈ ವರ್ಷದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ.

  ಇಂದು ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ- ಕೋಟೆ ಮಾರಮ್ಮ ದೇವಿಗೆ ವಿಶೇಷಾಲಂಕಾರ | Oneindia Kannada
  ಬೆಂಗಳೂರಿನಲ್ಲಿ ಫೆ.9 ರಂದು 14.4 ಡಿಗ್ರಿ ಸೆಲ್ಸಿಯಸ್ ತಾಪಮಾನ

  ಬೆಂಗಳೂರಿನಲ್ಲಿ ಫೆ.9 ರಂದು 14.4 ಡಿಗ್ರಿ ಸೆಲ್ಸಿಯಸ್ ತಾಪಮಾನ

  ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬೆಂಗಳೂರಿನಲ್ಲಿ ಫೆಬ್ರವರಿ 9 ಬೆಳ್ಳಗೆ 8-30ರಿಂದ ಫೆಬ್ರವರಿ 10ರವರೆಗೂ 14.4 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ ತಾಪಮಾನ ದಾಖಲಾಗಿದೆ.. ಇದು ಸಾಮಾನ್ಯ ತಾಪಮಾನಕ್ಕಿಂತಲೂ ಮೂರು ಡಿಗ್ರಿ ಕೆಳಗೆ ಇಳಿದಿದೆ. ಇಷ್ಟೇ ಅಲ್ಲದೇ, ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ 12.2 ಡಿಗ್ರಿ ಸೆಲ್ಸಿಯನ್ , ಜಿಕೆವಿಕೆಯಲ್ಲಿ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ವರ್ಷದ ಕಡಿಮೆ ತಾಪಮಾನ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

  English summary
  The night of February 9 would be recorded as the coldest night so far this year in most parts of Karnataka as many districts reported a drastic dip in the mercury levels.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X