ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಿಗಾಗಿ ಹಾಲಿನ ಬ್ಯಾಂಕ್ ಆರಂಭಿಸಲಿದೆ ವಾಣಿ ವಿಲಾಸ್ ಆಸ್ಪತ್ರೆ

|
Google Oneindia Kannada News

ಬೆಂಗಳೂರು, ಜನವರಿ 18: ಮನುಷ್ಯರ ಹಾಲಿನ ಬ್ಯಾಂಕ್ ಇರುವ ಮೊದಲ ಸರಕಾರಿ ಆಸ್ಪತ್ರೆ ಎಂಬ ಅಗ್ಗಳಿಕೆಗೆ ವಾಣಿ ವಿಲಾಸ್ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಪಾತ್ರವಾಗಲಿದೆ. ಬೆಂಗಳೂರು ಮೆಡಿಕಲ್ ಕಾಲೇಜ್ ಅಂಡ್ ರೀಸರ್ಚ್ ಇನ್ಸ್ ಟಿಟ್ಯೂಟ್ (ಬಿಎಂಸಿಆರ್ ಐ) ಅಡಿಯಲ್ಲಿ ವಾಣಿ ವಿಲಾಸ್ ಆಸ್ಪತ್ರೆ ಬರುತ್ತದೆ.

ಒಂದು ಕೋಟಿ ರುಪಾಯಿಯ ಮನುಷ್ಯರ ಹಾಲಿನ ಬ್ಯಾಂಕ್ ಸದ್ಯದಲ್ಲೇ ಆರಂಭವಾಗಲಿದ್ದು, ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಅವಧಿಗೆ ಮುನ್ನ ಜನಿಸಿದ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಹಾಲಿನ ಅಗತ್ಯವಿದೆ. ಅದನ್ನು ಪರಿಗಣಿಸಿ, ಹಾಲಿನ ಬ್ಯಾಂಕ್ ಆರಂಭಿಸುವ ಬಗ್ಗೆ ತಂಡವು ತೀರ್ಮಾನಿಸಿದೆ.

ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್

ಈ ಹಾಲು ಬ್ಯಾಂಕ್ ನಿಂದ ವಾಣಿ ವಿಲಾಸ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ ಮತ್ತಿತರ ಆಸ್ಪತ್ರೆಗಳಿಗೆ ಸಹಾಯ ಆಗಲಿದೆ. ಒಂದು ತಿಂಗಳಿಗೆ ಕನಿಷ್ಠ ನೂರೈವತ್ತು ಮಕ್ಕಳಿಗೆ ಹೆಚ್ಚುವರಿ ಹಾಲಿನ ಅಗತ್ಯ ಬರುತ್ತದೆ. ಪ್ರತಿ ತಿಂಗಳು ಸಾವಿರದೈನೂರರಷ್ಟು ಮಕ್ಕಳು ಜನಿಸುತ್ತವೆ. ಕರ್ನಾಟಕದ ಇತರ ಭಾಗದಲ್ಲಿ ಹಾಲಿನ ಅಗತ್ಯ ಕಂಡುಬಂದಾಗ ಈ ಆಸ್ಪತ್ರೆಯನ್ನು ಸೂಚಿಸುತ್ತಾರೆ.

Bengaluru Vani Vilas first government hospital to start human milk bank

2018ರಲ್ಲಿ 17,000ದಷ್ಟು ಮಕ್ಕಳು ಆಸ್ಪತ್ರೆಯಲ್ಲಿ ಜನಿಸಿವೆ. ಅವುಗಳ ಪೈಕಿ 35ರಿಂದ 40%ರಷ್ಟು ಮಕ್ಕಳಿಗೆ ಹೆಚ್ಚುವರಿಯಾಗಿ ಹಾಲಿನ ಅಗತ್ಯವಿತ್ತು. ಅಗತ್ಯ ಸಲಕರಣೆಗಳು ಹಾಗೂ ಸಿಬ್ಬಂದಿ ನೇಮಕಾತಿ ಸದ್ಯಕ್ಕೆ ನಡೆಯುತ್ತಿದೆ. ಎಲ್ಲರೂ ಹಾಲನ್ನು ನೀಡಲು ಸಾಧ್ಯವಿಲ್ಲ. ಹಾಲಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಆ ನಂತರ ನಿರ್ದಿಷ್ಟ ರೀತಿಯಲ್ಲಿ ಸಂಗ್ರಹ ಮಾಡಿದಬೇಕಾಗುತ್ತದೆ.

ಹಾಸನದಲ್ಲಿ ಶಿಶುಗಳಿಗಾಗಿ ಅತಿ ದೊಡ್ಡ ಐಸಿಯು : ರೋಹಿಣಿಹಾಸನದಲ್ಲಿ ಶಿಶುಗಳಿಗಾಗಿ ಅತಿ ದೊಡ್ಡ ಐಸಿಯು : ರೋಹಿಣಿ

ಹಾಲಿನ ಬ್ಯಾಂಕ್ ಯೋಜನಾ ವೆಚ್ಚ ಅಂದಾಜು 1 ಕೋಟಿ ಆಗಿದ್ದು, ಸರಕಾರ ಈಗಾಗಲೇ 35 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಅಗತ್ಯ ಸಲಕರಣೆಗಳ ಖರೀದಿ ಮಾಡುವ ಸಲುವಾಗಿ ಹೆಚ್ಚಿನ ಮೊತ್ತದ ನಿರೀಕ್ಷೆಯಲ್ಲಿದ್ದೇವೆ ವಾಣಿ ವಿಲಾಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

English summary
Bengaluru Vani Vilas women and child hospital is the first government hospital to start human milk bank with approximate project of 1 crore. Government already sanctioned 35 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X