ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಮಾಮೂಲಿನಂತೆ ಈ ಚುನಾವಣೆಯಲ್ಲಿಯೂ ಸಹ ಬೆಂಗಳೂರು ಮತದಾರರು ತಮ್ಮ ಸೋಮಾರಿತನ, ಬೇಜವಾಬ್ದಾರಿತನ ಮುಂದುವರೆಸಿರುವಂತೆ ಕಾಣುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಂಜೆ ನಾಲ್ಕು ಗಂಟೆ ವೇಳೆಗೆ ಬೆಂಗಳೂರು ನಗರದಲ್ಲಿ ನಡೆದಿರುವ ಮತದಾನ ಪ್ರಮಾಣ ಕೇವಲ 38.72% ಮಾತ್ರ. ಮತದಾನ ಸಮಯ ಮುಕ್ತಾಯವಾಗಲು ಇನ್ನು ಕೇವಲ ಎರಡು ಗಂಟೆ ಬಾಕಿ ಇದ್ದು ಮತದಾನ ಪ್ರಮಾಣ 50% ಆದರೂ ದಾಟುವುದು ಅನುಮಾನವೇ ಆಗಿದೆ.

ವೋಟ್ ಮಾಡಲು ಅವಕಾಶ ಕೊಡದ ಅಧಿಕಾರಿಗಳಿಗೆ ಧಿಕ್ಕಾರ ವೋಟ್ ಮಾಡಲು ಅವಕಾಶ ಕೊಡದ ಅಧಿಕಾರಿಗಳಿಗೆ ಧಿಕ್ಕಾರ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಅಂದರೆ 40.58% ಮತವು ಸಂಜೆ 4 ಗಂಟೆ ವೇಳೆಗೆ ಚಲಾವಣೆ ಆಗಿದೆ. ಬೆಂಗಳೂರು ಉತ್ತರದಲ್ಲಿ 39.07% ಮತ ಚಲಾವಣೆ ಆಗಿದೆ. ಬೆಂಗಳೂರು ಕೇಂದ್ರದಲ್ಲಿ ಕೇವಲ 36.51% ಮತ ಚಲಾವಣೆ ಆಗಿದೆ.

Bengaluru urban voter voted less till 4 pm

ಬೆಂಗಳೂರು ನಗರ ಪ್ರದೇಶದ ಕೆಲವು ಭಾಗದ ಮತದಾರರು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಮತಚಲಾವಣೆ ಮಾಡುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿಯೂ ಸಹ ಅಷ್ಟೇನು ಉತ್ತಮವಾಗಿ ಮತದಾನವಾಗಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ 48.39% ಮತದಾನವಾಗಿದೆ.

3 ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ?3 ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ?

ವಿಶೇಷವೆಂದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಗ್ರಾಮಾಂತರ ಭಾಗಗಳಾದ ಮಾಗಡಿ, ಕನಕಪುರ, ಚೆನ್ನಪಟ್ಟಣ, ಮಾಗಡಿ, ರಾಮನಗರ, ಅನೆಕಲ್‌ಗಳಲ್ಲಿ ಶೇ 50ಕ್ಕೂ ಮತದಾನ ಈಗಾಗಲೇ ಆಗಿದೆ. ಇನ್ನುಳಿದ ಸಮಯದಲ್ಲಿ ಇನ್ನಷ್ಟು ಮತದಾನ ಅಲ್ಲಿ ಆಗಲಿದೆ. ಆದರೆ ಈ ಕ್ಷೇತ್ರದ ನಗರ ಭಾಗಗಳಾದ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಸರಿಯಾಗಿ ಮತಚಲಾವಣೆ ಆಗಿಲ್ಲ. ಇದೇ ತೋರಿಸುತ್ತದೆ ಬೆಂಗಳೂರು ನಗರ ಮತದಾರರು ಎಷ್ಟು ಆಲಸಿಗಳು ಮತ್ತು ಜವಾಬ್ದಾರಿ ಹೀನರೆಂದು.

English summary
Bengaluru urban voters voted very less till 4 pm. Bengaluru urban voting percentage till 4 pm is 38.72% only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X