ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರಬಿದ್ದ ಲಸಿಕೆ ಅಭಿಯಾನ ಅಂಕಿಅಂಶ: ಯಾರು ಏನೇ ಹೇಳಲಿ ಬೆಂಗಳೂರು ದೇಶದಲ್ಲೇ ಟಾಪ್

|
Google Oneindia Kannada News

ಪ್ರಮುಖವಾಗಿ ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಲಸಿಕೆ ಅಭಿಯಾನವನ್ನು ಒಂದೇ ಉಸಿರಿನಲ್ಲಿ ವಿರೋಧಿಸುತ್ತಲೇ ಬರುತ್ತಿದೆ. ಇದಕ್ಕೆ ಸರಿಯಾಗಿ, ಲಸಿಕೆ ಅಭಾವದ ಸಮಸ್ಯೆಯೂ ಇನ್ನೂ ಸರಿದಾರಿಗೆ ಬರುತ್ತಿಲ್ಲ.

Recommended Video

Mumbai, Chennai ನಗರಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಬಂತು Bengaluru | Oneindia Kannada

ಇದರ ಜೊತೆಗೆ, ಲಸಿಕೆ ವಿತರಣೆಯಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪವನ್ನೂ ಕಾಂಗ್ರೆಸ್ ಮಾಡುತ್ತಿದೆ. ನೂರು ಕೋಟಿ ಕೊಡುತ್ತೇವೆ, ಲಸಿಕೆ ಖರೀದಿಸಲು ಅನುಮತಿ ನೀಡಿ ಎನ್ನುವ ಹೋರಾಟವನ್ನೂ ಕಾಂಗ್ರೆಸ್ ಮಾಡಿತ್ತು.

ಕೊವಿಡ್ 19: ಜೂನ್ 03ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ? ಕೊವಿಡ್ 19: ಜೂನ್ 03ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?

ಈಗ ಕೇಂದ್ರ ಆರೋಗ್ಯ ಇಲಾಖೆ ಜೂನ್ ಎರಡಕ್ಕೆ ಅನ್ವಯವಾಗುವಂತೆ ದೇಶದ ಪ್ರಮುಖ ನಗರಗಳಲ್ಲಿ ಎಲ್ಲೆಲ್ಲಿ ಎಷ್ಟು ಲಸಿಕೆಯನ್ನು ನೀಡಲಾಗಿದೆ ಎನ್ನುವ ಅಂಕಿಅಂಶವನ್ನು ಬಿಡುಗಡೆ ಮಾಡಿದೆ.

ಅದರಲ್ಲಿ 21 ನಗರಗಳ ಅಂಕಿಅಂಶವೂ ಇದೆ ಮತ್ತು ದಕ್ಷಿಣ ಭಾರತದ ನಾಲ್ಕು ನಗರಗಳಿವೆ. ಈ ಪಟ್ಟಿಯ ಪ್ರಕಾರ, ಕರ್ನಾಟಕದ ರಾಜಧಾನಿ ಬೆಂಗಳೂರು ಅತಿಹೆಚ್ಚು ಲಸಿಕೆ ನೀಡಿದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿರುವುದು ಗಮನಿಸಬೇಕಾದ ಅಂಶ.

ಅಲ್ಲಿ ಗಂಗೆಯಲ್ಲಿ ತೇಲಿ ಬರುವ ಅನಾಥ ಶವ, ಇಲ್ಲಿ ಸರಕಾರದಿಂದಲೇ ಗೌರವದ ವಿದಾಯಅಲ್ಲಿ ಗಂಗೆಯಲ್ಲಿ ತೇಲಿ ಬರುವ ಅನಾಥ ಶವ, ಇಲ್ಲಿ ಸರಕಾರದಿಂದಲೇ ಗೌರವದ ವಿದಾಯ

 ವ್ಯಾಕ್ಸಿನ್ ನೀಡಿದ ಸಂಖ್ಯೆಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ವ್ಯಾಕ್ಸಿನ್ ನೀಡಿದ ಸಂಖ್ಯೆಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ತಿರುವನಂತಪುರಂ ನಗರಗಳನ್ನೂ ಮೀರಿಸಿ ಬೆಂಗಳೂರು ನಗರ (ವ್ಯಾಕ್ಸಿನ್ ನೀಡಿದ ಸಂಖ್ಯೆಯಲ್ಲಿ) ಮೊದಲ ಸ್ಥಾನದಲ್ಲಿದೆ. ದೇಶದ ಇತರ ನಗರಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾವಾರು ಲಸಿಕೆ ನೀಡಿದ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ ಮತ್ತು ಈ ಪಟ್ಟಿಯಲ್ಲಿ ಹರ್ಯಾಣದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ.

ಇದುವರೆಗೆ ಒಟ್ಟು 28,34,212 ಲಕ್ಷ ಜನ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ

ಬೆಂಗಳೂರು ನಗರದಲ್ಲಿ ಇದುವರೆಗೆ ಒಟ್ಟು 28,34,212 ಲಕ್ಷ ಜನ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಅಂದರೆ, ನಗರದ ಒಟ್ಟು ಜನಸಂಖ್ಯೆಯ ಶೇ. 28.6 ವ್ಯಾಕ್ಸಿನ್ ಹಾಕಿಸಿಕೊಂಡಾಗಿದೆ. ಈ ಪಟ್ಟಿಯ ಪ್ರಕಾರ ಬೆಂಗಳೂರು ನಗರದ ಜನಸಂಖ್ಯೆ ಒಂದು ಕೋಟಿಗೆ ಒಂದು ಲಕ್ಷ ಕಮ್ಮಿ. ಇನ್ನು, ಮುಂಬೈ ಎರಡನೇ ಸ್ಥಾನದಲ್ಲಿದ್ದು 27,09,297 ಲಕ್ಷ ಜನ ಅಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.

 ಚೆನ್ನೈ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 33.1 ಜನ ಲಸಿಕೆ

ಚೆನ್ನೈ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 33.1 ಜನ ಲಸಿಕೆ

ಬೆಂಗಳೂರು, ಮುಂಬೈ ನಂತರ ಪುಣೆ, ಅಹ್ಮದಾಬಾದ್, ಜೈಪುರ, ಚೆನ್ನೈ ನಗರಗಳಿವೆ. ಚೆನ್ನೈ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 33.1 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಲ್ಲಿ ಇದುವರೆಗೆ 15,27,752 ಲಕ್ಷ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.

 ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶ

ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶ

ಇನ್ನು ದಕ್ಷಿಣ ಭಾರತದ ತಿರುವನಂತಪುರಂನಲ್ಲಿ 8,88,250 ಮತ್ತು ಕೊಯಂಬತ್ತೂರ್ ನಲ್ಲಿ 4,88,790 ಲಕ್ಷ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಕ್ರಮವಾಗಿ ಶೇ, 32.2, ಶೇ. 22.8 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.

English summary
Bengaluru Urban District Tops in Vaccine Coverage in Key Urban Districts in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X