• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಧಾನಿ ಬೆಂಗಳೂರು ಅನ್ ಲಾಕ್ -1: ಕಾದಿದೆಯಾ ಮತ್ತದೇ ಬಹುದೊಡ್ಡ ಆಪತ್ತು?

|
Google Oneindia Kannada News

ರಾಜಧಾನಿ ಬೆಂಗಳೂರು (ಗ್ರಾಮಾಂತರ ಹೊರತು ಪಡಿಸಿ) ಸೇರಿದಂತೆ, ಹತ್ತೊಂಬತ್ತು ಜಿಲ್ಲೆಗಳಿಗೆ, ಜೂನ್ ಹದಿನಾಲ್ಕರಿಂದ ಹೊಸ ಜೀವನ. ಒಂದಷ್ಟು ಸಡಿಲಿಕೆಯನ್ನು ಮಾತ್ರ ಮಾಡಲಾಗಿದ್ದರೂ, ನಾವೆಲ್ಲಾ ಇನ್ನು ಫ್ರೀ ಎನ್ನುವ ಮನೋಭಾವ ಬೆಂಗಳೂರಿಗರಲ್ಲಿ ಎರಡು ದಿನದ ಹಿಂದೆಯಿಂದಲೇ ಆರಂಭವಾಗಿದೆ.

ಎಷ್ಟು ದಿನಾಂತ ಮನೇಲಿ ಕೂತು ಕೊಳ್ಳಲು ಸಾಧ್ಯ, ಹೊಟ್ಟೆಪಾಡಿನ ಗತಿ, ಮನೇಲಿ ಕೂತುಕೂತು ಖಿನ್ನತೆಗೆ ಒಳಗಾಗುತ್ತೇವೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಆದರೂ, ಸರಕಾರ ಎಲ್ಲಾ ನಿರ್ಬಂಧವನ್ನು ತೆಗೆದಿಲ್ಲ ಎನ್ನುವುದು ಗೊತ್ತಿರಬೇಕಾದ ವಿಚಾರ.

ಕೊವಿಡ್ 19: ಜೂನ್ 13ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?ಕೊವಿಡ್ 19: ಜೂನ್ 13ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?

ಪ್ರಮುಖವಾಗಿ ಸರಕಾರ, ಫ್ಯಾಕ್ಟರಿ ಮತ್ತು ಗಾರ್ಮೆಂಟ್ಸ್ ಗಳಿಗೆ ಷರತ್ತು ಬದ್ದ ಅನುಮತಿಯನ್ನು ನೀಡಿದೆ. ಹೊಸ ನಿಯಮದ ಪ್ರಕಾರ, ಫ್ಯಾಕ್ಟರಿಗಳಿಗೆ ಶೇ. 50 ಮತ್ತು ಗಾರ್ಮೆಂಟ್ಸ್ ಗಳಿಗೆ ಶೇ.30 ಹಾಜರಾತಿಯೊಂದಿಗೆ ಕಾರ್ಯ ಆರಂಭಿಸಲು ಓಕೆ ಅಂದಿದೆ.

ಅನ್‌ಲಾಕ್ ಆದರೂ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲು ಒತ್ತಾಯಅನ್‌ಲಾಕ್ ಆದರೂ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲು ಒತ್ತಾಯ

ಆದರೆ, ಬೆಂಗಳೂರಿನಲ್ಲಿ ಹೊಟ್ಟೆಪಾಡು ಕಟ್ಟುಕೊಂಡವರು ಕಳೆದ ಕೆಲವು ದಿನಗಳಿಂದ ರಾಜಧಾನಿಗೆ ಒಂದೇ ಸಮನೆ ದಾಂಗುಡಿ ಇಡುತ್ತಿದ್ದಾರೆ. ಬೆಂಗಳೂರಿಗೆ ಎಂಟ್ರಿ ಕೊಡುವ ಟೋಲ್ ಗೇಟ್ ಗಳಲ್ಲಿ ವಾಹನಗಳ ಕ್ಯೂಗಳದ್ದೇ ಭರಾಟೆ.

 ಬೆಂಗಳೂರು ಬಿಟ್ಟು ಹೋದವರು ವಾಪಸ್ ಬರುತ್ತಿದ್ದಾರೆ.

ಬೆಂಗಳೂರು ಬಿಟ್ಟು ಹೋದವರು ವಾಪಸ್ ಬರುತ್ತಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ, ಲಾಕ್ ಡೌನ್ ಕಾರಣಕ್ಕಾಗಿ ಬೆಂಗಳೂರು ಬಿಟ್ಟು ಹೋದವರು ವಾಪಸ್ ಬರುತ್ತಿದ್ದಾರೆ. ಸಾರ್ವಜನಿಕ ಬಸ್ ಸೇವೆ ಇಲ್ಲದಿದ್ದರೂ, ಟ್ರೈನ್, ಟೆಂಪೋ ಮತ್ತು ಇತರ ಖಾಸಗಿ ವಾಹನಗಳ ಮೂಲಕ ರಾಜಧಾನಿಗೆ ಜನರು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

 ಅಂತರ್ ಜಿಲ್ಲಾ ಪ್ರವಾಸಕ್ಕೆ ಇದ್ದ ನಿರ್ಬಂಧ ವಾಪಸ್

ಅಂತರ್ ಜಿಲ್ಲಾ ಪ್ರವಾಸಕ್ಕೆ ಇದ್ದ ನಿರ್ಬಂಧ ವಾಪಸ್

ಅಂತರ್ ಜಿಲ್ಲಾ ಪ್ರವಾಸಕ್ಕೆ ಇದ್ದ ನಿರ್ಬಂಧ ವಾಪಸ್ ಪಡೆದಿದ್ದರಿಂದ ಚೆಕ್ ಪೋಸ್ಟ್/ ಟೋಲ್ ಗೇಟ್ ನಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಆರ್ಥಿಕ ಚಟುವಟಿಕೆ ಮುಂದುವರಿಸಲು ಸರಕಾರ ತೀರ್ಮಾನಿಸಿರುವುದರಿಂದ ಬೆಂಗಳೂರಿಗೆ ಬರಲು ಯಾವುದೇ ಅಡೆತಡೆಗಳಿಲ್ಲ. ಲಕ್ಷಾಂತರ ಜನರಿಗೆ ಅನ್ನದ ಮೂಲವಾಗಿರುವ ಬೆಂಗಳೂರು ಅನ್ ಲಾಕ್ -1ರಲ್ಲೇ ಸಹಜ ಸ್ಥಿತಿಗೆ ಬರುವತ್ತ ಸಾಗುತ್ತಿದೆ.

 ಬೆಂಗಳೂರಿನಲ್ಲಿ, ಜೂನ್ ಹದಿಮೂರರಂದು ವರದಿಯಾದ ಹೊಸ ಪ್ರಕರಣಗಳು 1,348

ಬೆಂಗಳೂರಿನಲ್ಲಿ, ಜೂನ್ ಹದಿಮೂರರಂದು ವರದಿಯಾದ ಹೊಸ ಪ್ರಕರಣಗಳು 1,348

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನಂದರೆ, ಸೋಂಕು ಪ್ರಕರಣ ಹೆಚ್ಚಿರುವ ರಾಜ್ಯದ ಇತರ ಹನ್ನೊಂದು ಜಿಲ್ಲೆಗಳಿಂದಲೂ ಜನರು ಬೆಂಗಳೂರಿಗೆ ಆಗಮಿಸುತ್ತಿರುವುದು. ಸುಮಾರು, 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ, ಜೂನ್ ಹದಿಮೂರರಂದು ವರದಿಯಾದ ಹೊಸ ಪ್ರಕರಣಗಳು 1,348. ಆದರೆ, ಈ ಸಂಖ್ಯೆ, ಜಾಸ್ತಿಯಾಗುವತ್ತ ಬೆಂಗಳೂರು ಸಾಗುತ್ತ ಮುಂದಿನ ದಿನಗಳಲ್ಲಿ?

  ಮುಂಬೈನಲ್ಲಿ ಪಾರ್ಕ್ ಮಾಡಿದ ಜಾಗದಲ್ಲೇ ಮುಳುಗಿದ ಕಾರ್! | Oneindia Kannada
   ರಾಜಧಾನಿ ಬೆಂಗಳೂರು ಅನ್ ಲಾಕ್ -1: ಕಾದಿದೆಯಾ ಬಹುದೊಡ್ಡ ಆಪತ್ತು?

  ರಾಜಧಾನಿ ಬೆಂಗಳೂರು ಅನ್ ಲಾಕ್ -1: ಕಾದಿದೆಯಾ ಬಹುದೊಡ್ಡ ಆಪತ್ತು?

  ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಅನ್ ಲಾಕ್ ಪ್ರಕ್ರಿಯೆ ಮತ್ತೆ ಬೆಂಗಳೂರನ್ನು ಹಳೇ ಸ್ಥಿತಿಗೆ ತಳ್ಳುತ್ತಾ ಎನ್ನುವುದು ಮುಂದಿನ ಕೆಲವು ದಿನಗಳಲ್ಲಿ ಗೊತ್ತಾಗಲಿದೆ. ಯಾಕೆಂದರೆ, ಇಲ್ಲಿಗೆ ಹೋಗಿ ಬರುವವರ ಸಂಖ್ಯೆ ವಿಪರೀತಮಿತ ಆಗಿರುವ ಕಾರಣಕ್ಕಾಗಿ..

  English summary
  Bengaluru Unlock Process Started, Chances Of New Covid Cases May Increase Steeply
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X