ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಂಟ್ರಲ್‌ ಕಾಲೇಜು ಬಿಡದೇ ಬೆಂಗಳೂರು ವಿಶ್ವವಿದ್ಯಾಲಯ ಹಠ

By Nayana
|
Google Oneindia Kannada News

ಬೆಂಗಳೂರು, ಜು.4: ಸೆಂಟ್ರಲ್‌ ಕಾಲೇಜು ಆವರಣವನ್ನು ಬಿಡಲು ಬೆಂಗಳೂರು ವಿವಿಗೆ ಯಾಕೋ ಇಷ್ಟವಿದ್ದಂತಿಲ್ಲ, ಈ ಸಾಲಿನಿಂದ ಸ್ನಾತಕೋತ್ತರ ತರಗತಿಗಳನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮುಂದಾಗಿದ್ದು ಜಾಗದ ಕೊರತೆ ಎದುರಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಕಟ್ಟಡಗಳನ್ನು ಸಂಪೂರ್ಣವಾಗಿ ಬಿಟ್ಟುಕೊಡದ ಕಾರಣ ಕೊಠಡಿಗಳ ಸಮಸ್ಯೆ ಎದುರಾಗಿದೆ.

ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ 2018-19ನೇ ಸಾಲಿನಿಂದ ಸ್ನಾತಕೋತತ್ರ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದ್ದು ಅರ್ಜಿಗಳನ್ನು ಆಹ್ವಾನಿಸಿದೆ. ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಮುಖ್ಯ ಕಟ್ಟಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಕಟ್ಟಡಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಸ್ನಾತಕೋತ್ತರ ತರಗತಿಗಳು ನಡೆಯುತ್ತಿದೆ. ಇದರಿಂದಾಗಿ ಹೊಸ ಸ್ನಾತಕೋತ್ತರ ವಿಭಾಗಗಳ ಪ್ರಾರಂಭಕ್ಕೆ ಕೊಠಡಿಗಳ ಕೊರತೆ ಉಂಟಾಗಿದೆ.

ನಿಜವಾದ ಸಮಸ್ಯೆ ಏನು?

ನಿಜವಾದ ಸಮಸ್ಯೆ ಏನು?

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಈ ಸಾಲಿನಿಂದ ಒಟ್ಟು 16 ಸ್ನಾತಕೋತ್ತರ ವಿಭಾಗಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈಗಾಗಲೇ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ವಿಶ್ವವಿದಯಾಲಯದ 8 ಸ್ನಾತಕೋತ್ತರ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಗಣಿತ, ರಸಾಯನಶಾಸ್ತ್ರ, ಜೀವ ಶಾಸ್ತ್ರ, ಅಪೆರೆಲ್‌ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ ತರಗತಿಗಳು ನಡೆಯುತ್ತಿದೆ.

ಸರ್ಕಾರದ ಆದೇಶದಲ್ಲೇನಿದೆ

ಸರ್ಕಾರದ ಆದೇಶದಲ್ಲೇನಿದೆ

ಸರ್ಕಾರದ ಆದೇಶದ ಪ್ರಕಾರ, ಸೆಂಟ್ರಲ್‌ ಕಾಲೇಜು ಆವರಣ ಸಂಪೂರ್ಣವಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಬೇಕು. ವಿಶ್ವವಿದ್ಯಾಲಯವು ತ್ರಿಭಜನೆಗೊಂಡ ನಂತರ ಬೆಂಗಳೂರು ವಿಶ್ವವಿದ್ಯಾಲಯ ಎಲ್ಲ ವಿಭಾಗಗಳನ್ನು ಜ್ಞಾನಭಾರತಿ ಆವರಣಕ್ಕೆ ವರ್ಗಾವೆ ಮಾಡಿಲ್ಲ, ಜತೆಗೆ ಬೆಂಗಳೂರು ಕೇಂದ್ರ ವಿವಿ ವ್ಯಾಪ್ತಿಗೆ ಸೇರಿದ ಹಲವು ಕಟ್ಟಡಗಳನ್ನು ಐಸಿಎಚ್‌ಆರ್‌. ಯುಜಿಸಿ, ಇತರೆ ಸಂಸ್ಥೆಗಳಿಗೆ ನೀಡಲಾಗಿದೆ.

ಜೂನ್‌ 15ರ ಗಡುವು ಅಂತ್ಯಗೊಂಡಿದೆ

ಜೂನ್‌ 15ರ ಗಡುವು ಅಂತ್ಯಗೊಂಡಿದೆ

ತರಗತಿಗಳನ್ನು ಸ್ಥಳಾಂತರ ಮಾಡುವಂತೆ ಹಲವು ಸಭೆಗಳನ್ನು ನಡೆಸಲಾಗಿದೆ. ಜೂ.15ರ ಒಳಗೆ ತರಗತಿಗಳನ್ನು ಸ್ಥಳಾಂತರ ಮಾಡುವುದಾಗಿ ಬೆಂಗಳೂರು ವಿಶ್ವವಿದ್ಯಾಲಯ ತಿಳಿಸಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.

ಕೇಂದ್ರ ವಿವಿಗೆ ಸ್ನಾತಕೋತ್ತರ ತರಗತಿ ಆರಂಭಿಸಲು ಜಾಗವೇ ಇಲ್ಲ

ಕೇಂದ್ರ ವಿವಿಗೆ ಸ್ನಾತಕೋತ್ತರ ತರಗತಿ ಆರಂಭಿಸಲು ಜಾಗವೇ ಇಲ್ಲ

ಇದೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಕಲಾ ವಿಭಾಗದ 8 ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಯೋಚಿಸಿತ್ತು, ಇವುಗಳಿಗೆ ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಜ್ಞಾನ ಭಾರತಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಬೆಂಗಳೂರು ವಿವಿ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಕೇಂದ್ರವನ್ನು ಸ್ಥಳಾಂತರ ಮಾಡುತ್ತಿಲ್ಲ ಎಂದು ದೂರಿದ್ದಾರೆ.

English summary
After the bifurcation of bengaluru university jnanabharati university should leave central college campus. But it's dragging the process for over the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X