ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯಲ್ಲಿ rank ಪಡೆದರೂ ಇಲ್ಲ ಚಿನ್ನದ ಪದಕ

By Manjunatha
|
Google Oneindia Kannada News

ಬೆಂಗಳೂರು, ಜನವರಿ 09: Rank ಪಡೆದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಈ ಬಾರಿ ಚಿನ್ನದ ಪದಕ ನೀಡಲಾಗುತ್ತಿಲ್ಲ.

ಠೇವಣಿ ಹಣಕ್ಕೆ ಕಡಿಮೆ ಬಿಡ್ಡಿ ಬರುತ್ತಿರುವ ಕಾರಣ ಈ ಬಾರಿ ಚಿನ್ನದ ಪದಕದ ಬದಲಿಗೆ 500 ರೂಪಾಯಿಯ ಚೆಕ್ ವಿತರಣೆ ಮಾಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭ

ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವ ಸಮಾರಂಭದಲ್ಲಿ ಚೆಕ್ ವಿತರಣೆ ಮಾಡಲಾಗುತ್ತಿದ್ದು, ಚಿನ್ನದ ಪದಕ ನೀಡದೇ ಇರುವ ನಿರ್ಣಯಕ್ಕೆ ವಿದ್ಯಾರ್ಥಿಗಳು ಆಕ್ಷೇಪವ್ಯಕ್ತಪಡಿಸಿದ್ದಾರೆ.

Bengaluru university giving rs.500 check instead of gold medal to rank students

ವಿಶ್ವವಿದ್ಯಾಲಯದ 79 ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಅಂಕ ಗಳಿಸಿ rank ಗಳಿಸಿದ್ದು, ಇವರೆಲ್ಲರೂ ಚಿನ್ನದ ಪದಕದಿಂದ ವಂಚಿತರಾಗಲಿದ್ದಾರೆ.

1.5 ಗ್ರಾಂ ಚಿನ್ನ ಲೇಪಿದ ಪದಕಗಳನ್ನು ಕೊಡಲು ವಿವಿ ಬಳಿ ಹಣ ಇಲ್ಲ ಎಂದರೆ ರಾಜ್ಯದಲ್ಲಿ ಅತ್ಯುತ್ತಮ ಎಂದು ಹೇಳಲಾಗುವ ಬೆಂಗಳೂರು ವಿವಿಗೆ ಎಂತಹಾ ದುರ್ಗತಿ ಬಂದಿದೆ ಎಂದು ವಿದ್ಯಾರ್ಥಿಗಳು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Bangaluru university administration decided to give rs.500 check instead of gold medal to rank students. administration told that there is not enough money to give gold medals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X