ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟರ್ಫ್ ಕ್ಲಬ್ ಕಾರ್ಮಿಕರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜನವರಿ 11: ವಾರಕ್ಕೆ ಕೇವಲ ಎರಡು ದಿನಗಳಷ್ಟೇ ಕೆಲಸ ನೀಡುವುದಾಗಿ ಹೇಳಿದ್ದ ಬೆಂಗಳೂರು ಟರ್ಫ್ ಕ್ಲಬ್ ಸಿಇಓ ವಿರುದ್ಧ ಟರ್ಫ್ ಕ್ಲಬ್ ಎದುರು ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ತಿಂಗಳಿಂದ ಬೆಂಗಳೂರು ಟರ್ಫ್ ಕ್ಲಬ್ ಮುಚ್ಚಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಟರ್ಫ್ ಕ್ಲಬ್ ತೆರೆಯಲಾಗಿತ್ತು. ಸಾವಿರಕ್ಕಿಂತ ಹೆಚ್ಚು ಕಾರ್ಮಿಕರ ಸ್ಥಿತಿ ಅತಂತ್ರವಾಗಿತ್ತು. ಸರ್ಕಾರವು ಪರವಾನಗಿಯನ್ನು ರದ್ದುಗೊಳಿಸಿದ್ದರು. ಕಳೆದ ನಾಲ್ಕು ತಿಂಗಳಿಂದ ಕಾರ್ಮಿಕರಿಗೆ ಸಂಬಳವಿಲ್ಲದೇ ಪರದಾಡಿದ್ದರು. ಇದೀಗ ವಾರಕ್ಕೆರಡು ದಿನ ಕೆಲಸ ಮಾಡಿ ಎಂದು ಸಿಇಓ ಶಿವಪ್ರಸಾದ್ ಹೇಳಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಕುದುರೆ ರೇಸ್:ಹೈಕೋರ್ಟ್ ಗ್ರೀನ್ ಸಿಗ್ನಲ್ಬೆಂಗಳೂರಿನಲ್ಲಿ ಕುದುರೆ ರೇಸ್:ಹೈಕೋರ್ಟ್ ಗ್ರೀನ್ ಸಿಗ್ನಲ್

ನ್ಯಾಯಾಲಯದ ಆದೇಶದಂತೆ ಸೆಪ್ಟೆಂಬರ್ 1ರಿಂದ ಸ್ಥಗಿತಗೊಂಡಿದ್ದ ಕ್ಲಬ್ ಜನವರಿ 5ರಂದು ಪ್ರಾರಂಭ ಆಗಿತ್ತು, ವಾರದಲ್ಲಿ ಒಂದು ದಿನ ಕೆಲಸ ನೀಡಿದರೆ ಮತ್ತೊಂದು ರಜೆ ನೀಡುತ್ತಿದ್ದರು. ಈ ರೀತಿಯ ಬ್ಯಾಚ್ ಕೆಲಸ ಬೇಡವೆಂದು ಬಿಟಿಪಿ ಬಳಿ ಕಾರ್ಮಿಕರ ಪ್ರತಿಭಟನೆ ನಡೆಸಿದರು. ಬಿಸಿಪಿ ಸಿಇಒ ಶಿವಪ್ರಸಾದ್ ಕ್ರಮದ ವಿರುದ್ಧ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸಿದರು.

Bengaluru Turf Club workers goes on protest

ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ನಲ್ಲಿ ರೇಸ್ ಡೇ ಇರುವ ದಿನಗಳಲ್ಲಿ ಸಂಚಾರ ದಟ್ಟಣೆಯಿಂದ ಭಾರಿ ತೊಂದರೆಯುಂಟಾಗುತ್ತದೆ. ಆದ್ದರಿಂದ ಟರ್ಫ್ ಕ್ಲಬ್ ಸ್ಥಳಾಂತರ ಸೂಕ್ತ ಎಂಬ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಇದಕ್ಕೆ ಹೈಕೋರ್ಟ್ ಕೂಡ ಹಸಿರು ನಿಶಾನೆ ತೋರಿಸಿತ್ತು. ದೊಡ್ಡಜಾಲದ ಅಮಾನಿಕೆರೆಗೆ ಸ್ಥಳಾಂತರಿಸಲು ಸೂಚಿಸಿತ್ತು.

ಬೆಂಗಳೂರಿನಲ್ಲಿ ಕುದುರೆ ರೇಸ್ ಇರುತ್ತಾ? ಇಲ್ವಾ? ಹೈಕೋರ್ಟಿನತ್ತ ಚಿತ್ತಬೆಂಗಳೂರಿನಲ್ಲಿ ಕುದುರೆ ರೇಸ್ ಇರುತ್ತಾ? ಇಲ್ವಾ? ಹೈಕೋರ್ಟಿನತ್ತ ಚಿತ್ತ

ಸರ್ಕಾರವು ಸಮಿತಿಯೊಂದು ರಚಿಸಿ ಅನುಮತಿ ನೀಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಸರ್ಕಾರ ಹಾಗೂ ಬೆಂಗಳೂರು ಟರ್ಫ್ ಕ್ಲಬ್ ಸಮಾಲೋಚಿಸಿ ಷರತ್ತು ವಿಧಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಪುನರಾರಂಭಿಸಲಾಗಿದೆ.

English summary
Bengaluru Turf club workers stagged protest against club CEO Shivaprasad that providing work twice in a week instead of regular base on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X