ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಜನವರಿ 20 : ಬೆಂಗಳೂರು-ತುಮಕೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ. ಉಭಯ ನಗರಗಳ ನಡುವಿನ ರೈಲು ಸಂಚಾರದ ಅವಧಿ ಶೀಘ್ರದಲ್ಲಿಯೇ 1 ಗಂಟೆಗೆ ಇಳಿಕೆಯಾಗಲಿದೆ.

ನೈಋತ್ಯ ರೈಲ್ವೆ ಬೆಂಗಳೂರು- ತುಮಕೂರು ನಡುವಿನ 70 ಕಿ. ಮೀ. ಮಾರ್ಗದಲ್ಲಿ ವಿದ್ಯುತೀಕರಣ ಕಾಮಗಾರಿಯನ್ನು ಕೈಗೊಂಡಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಪ್ರಯಾಣದ ಅವಧಿ 1 ಗಂಟೆ 30 ನಿಮಿಷದಿಂದ 1 ಗಂಟೆಗೆ ಕಡಿಮೆಯಾಗಲಿದೆ.

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧ

ಬೆಂಗಳೂರು-ತುಮಕೂರು ನಡುವೆ ಜೋಡಿ ಹಳಿಯಲ್ಲಿ ಬೆಂಗಳೂರು-ಚಿಕ್ಕಬಣಾವರ ನಡುವಿನ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮಾರ್ಗದ ಕಾಮಗಾರಿ 6 ರಿಂದ 8 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭ ಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭ

ರಾಜಧಾನಿ ಬೆಂಗಳೂರು ಮತ್ತು ತುಮಕೂರು ನಡುವೆ ಸುಮಾರು 40 ರೈಲುಗಳು ಸಂಚಾರ ನಡೆಸುತ್ತವೆ. ಪ್ರತಿದಿನ 25 ಸಾವಿರಕ್ಕೂ ಅಧಿಕ ಜನರು ಸಂಚಾರ ನಡೆಸುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರಯಾಣದ ಅವಧಿ ಕಡಿತವಾದರೆ ಜನರಿಗೆ ಸಹಾಯಕವಾಗಲಿದೆ.

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ಟೆಂಡರ್ ಕರೆದ ರೈಲ್ವೆ

ಟೆಂಡರ್ ಕರೆದ ರೈಲ್ವೆ

ಬೆಂಗಳೂರು-ತುಮಕೂರು ಜೋಡಿ ಹಳಿಯಲ್ಲಿ ಬೆಂಗಳೂರು-ಚಿಕ್ಕಬಣಾವರ ನಡುವಿನ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮಾರ್ಗದ ಕಾಮಗಾರಿಯನ್ನು ಕೈಗೊಳ್ಳಲು ನೈಋತ್ಯ ರೈಲ್ವೆ ಟೆಂಡರ್ ಕರೆದಿದೆ. ಅಕ್ಟೋಬರ್ ಅಥವ ನವೆಂಬರ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗುತ್ತದೆ.

ಸಂಚಾರದ ಅವಧಿ ಎಷ್ಟು?

ಸಂಚಾರದ ಅವಧಿ ಎಷ್ಟು?

ಬೆಂಗಳೂರು-ತುಮಕೂರು ನಡುವಿನ (70 ಕಿ.ಮೀ) ರೈಲು ಮಾರ್ಗದಲ್ಲಿ ಸಂಚಾರ ನಡೆಸಲು ಎಕ್ಸ್‌ಪ್ರೆಸ್ ರೈಲು 1.30 ನಿಮಿಷ, ಪ್ಯಾಸೆಂಜರ್ ರೈಲು 1 ಗಂಟೆ 40 ನಿಮಿಷ, ಕೆಲವು ದಿನಗಳ ಹಿಂದೆ ಆರಂಭವಾಗಿರುವ ಡೆಮು ರೈಲು 1 ಗಂಟೆ 10 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡರೆ ಪ್ರಯಾಣದ ಅವಧಿ ಕಡಿತವಾಗಲಿದೆ.

25 ಸಾವಿರ ಜನರ ಪ್ರಯಾಣ

25 ಸಾವಿರ ಜನರ ಪ್ರಯಾಣ

ಬೆಂಗಳೂರು-ತುಮಕೂರು ನಡುವೆ ನೈಋತ್ಯ ರೈಲ್ವೆ ಎಕ್ಸ್‌ಪ್ರೆಸ್, ಸೂಪರ್ ಫಾಸ್ಟ್, ಪ್ಯಾಸೆಂಜರ್, ಡೆಮು ಸೇರಿಸಿ ಸುಮಾರು 40 ರೈಲುಗಳನ್ನು ಓಡಿಸುತ್ತದೆ. ಬೆಂಗಳೂರಿನ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು ಸೇರಿ ಸುಮಾರು 25 ಸಾವಿರ ಜನರು ನಿತ್ಯ ಪ್ರಯಾಣ ಮಾಡುತ್ತಾರೆ. ರೈಲ್ವೆ ಪ್ರಯಾಣ ದರವೂ ಕಡಿಮೆ ಇದ್ದು, ಮಾಸಿಕ ಪಾಸುಗಳ ಬೆಲೆ ಸಹ 270 ರೂ. ಇದೆ.

ರೈಲು ಸೇವೆಗೆ ಒತ್ತಾಯ

ರೈಲು ಸೇವೆಗೆ ಒತ್ತಾಯ

ಬೆಂಗಳೂರು-ತುಮಕೂರು ಪ್ರಯಾಣಿಕರ ವೇದಿಕೆ ಬೆಳಗ್ಗೆ 10.30 ಮತ್ತು ಸಂಜೆ 4.30ರ ನಡುವೆ ಪ್ಯಾಸೆಂಜರ್ ರೈಲು ಓಡಿಸಬೇಕು ಎಂದು ನೈಋತ್ಯ ರೈಲ್ವೆಗೆ ಪತ್ರದ ಮೂಲಕ ಮನವಿ ಮಾಡಿದೆ. ಯಶವಂತಪುರ ರೈಲು ನಿಲ್ದಾಣದ ಸಮೀಪ ಪೀಣ್ಯ, ದಾಬಸ್‌ಪೇಟೆ, ಹಿರೇಹಳ್ಳಿ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶವಿದ್ದು, ಪ್ರತಿನಿತ್ಯ ಇಲ್ಲಿಗೆ ನೂರಾರು ಜನರು ಆಗಮಿಸುತ್ತಾರೆ. ಬಸ್ಸಿನಲ್ಲಿ ದರ ಹೆಚ್ಚು ಎಂಬ ಕಾರಣಕ್ಕೆ ರೈಲಿನಲ್ಲಿ ಸಂಚಾರ ನಡೆಸುತ್ತಾರೆ.

ಸಬ್ ಅರ್ಬನ್ ರೈಲು ಬರಲಿದೆ

ಸಬ್ ಅರ್ಬನ್ ರೈಲು ಬರಲಿದೆ

148 ಕಿ. ಮೀ. ಉಪನಗರ ರೈಲು ಯೋಜನೆ (ಸಬ್ ಅರ್ಬನ್) ಈಗಾಗಲೇ ಸಿದ್ಧವಾಗಿದೆ. ಯಶವಂತಪುರ ಮತ್ತು ಚಿಕ್ಕಬಣಾವರ ನಡುವೆ ಒಂದು ಲೈನ್ ನಿರ್ಮಾಣವಾಗಲಿದೆ. ಆದರೆ, ಈ ಯೋಜನೆಗೆ ಇನ್ನೂ ಕೇಂದ್ರ ಆರ್ಥಿಕ ಇಲಾಖೆಯ ಒಪ್ಪಿಗೆ ಸಿಕ್ಕಿಲ್ಲ.

English summary
South western railway will complete electrification of Bengaluru-Tumakuru railway line soon. Travel time between two cities reduce from 1.30 hours to one hour after electrification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X