ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು!

|
Google Oneindia Kannada News

ಬೆಂಗಳೂರು, ಡಿ. 05: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಇನ್ಮುಂದೆ ಎಸ್‌ಎಂಎಸ್ ಮೂಲಕವೇ ದಂಡ ಪಾವತಿ ನೋಟಿಸ್ ಬರಲಿದೆ!. ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿಗೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ. ಈ ಹಿಂದೆ ಅಂಚೆ ಮೂಲಕ ನೋಟಿಸ್ ನೀಡುವ ದುಬಾರಿ ವೆಚ್ಚದ ನಿಯಮಕ್ಕೆ ಬ್ರೇಕ್ ಹಾಕಿದ್ದು, ತಂತ್ರಜ್ಞಾನ ಆಧಾರಿತ, SMS ನೋಟಿಸ್ ರವಾನೆಗೆ ಪ್ರಾಯೋಗಿಕ ಚಾಲನೆ ನೀಡಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇಗೌಡ ಅವರು, ಬೆಂಗಳೂರು ಸಂಚಾರ ವಿಭಾಗದಲ್ಲಿ ಸಂಚಾರ ನಿಯಮ ಉಲ್ಲಂಘನೆ, ದಂಡದ ಮೊತ್ತವನ್ನು ಫೀಲ್ಡ್ ಟ್ರಾಫಿಕ್ ಉಲ್ಲಂಘನೆ ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಈ ವಿವರ ಆಧರಿಸಿ ಎಫ್‌ಟಿಆರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದನ್ನು ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿತ್ತು. ಇನ್ನು ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಗೆ ಅಂಚೆ ಮೂಲಕ ನೋಟಿಸ್ ರವಾನಿಸಲಾಗುತ್ತಿತ್ತು. ಪ್ರತಿ ನೋಟಿಸ್‌ಗೆ ಸರಾಸರಿ 4.50 ರೂ. ವೆಚ್ಚ ವಾಗುತ್ತಿತ್ತು. ಹೀಗಾಗಿ ಪ್ರತಿ ದಿನ 20 ಸಾವಿರ ನೋಟಿಸ್ ನೀಡಲು ಒಂದು ಲಕ್ಷ ರೂ. ವೆಚ್ಚವಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಂಚಾರ ಇಲಾಖೆ ತಂತ್ರಜ್ಞಾನ ಮೊರೆ ಹೋಗಿದೆ ಎಂದು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ

ಸಂಚಾರ ನಿಯಮ ಉಲ್ಲಂಘನೆ

ಸಂಚಾರ ನಿಯಮ ಉಲ್ಲಂಘನೆ ಸಾಕ್ಷಿ ಸಮೇತ ದಾಖಲಿಸಲು ಸಂಚಾರ ಪೊಲೀಸ್ ಸಿಬ್ಬಂದಿಗೆ ಡಿಜಿಟಲ್ ಫೀಲ್ಡ್ ಟ್ರಾಫಿಕ್ ವಯಲೇಷನ್ ಯಂತ್ರಗಳನ್ನು ವಿತರಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಪೋಟೋ ಸಮೇತ ತೆಗೆಯಲಾಗುತ್ತಿತ್ತು. ಭಾರತೀಯ ಮೋಟಾರು ವಾಹನ ಕಾಯ್ದೆ ನಿಯಮ 133 ಅಡಿ ಅಂಚೆ ಮೂಲಕ ಸಂಚಾರ ಪೊಲೀಸರು ರವಾನಿಸುತ್ತಿದ್ದರು.

ಮೊಬೈಲ್ ನಂಬರ್‌ಗೆ ನೋಟಿಸ್ ಜಾರಿ

ಮೊಬೈಲ್ ನಂಬರ್‌ಗೆ ನೋಟಿಸ್ ಜಾರಿ

ಅಂಚೆ ಮೂಲಕ ರವಾನಿಸಲು ಮುದ್ರಣ ವೆಚ್ಚ ಜತೆಗೆ ಕಾಗದ, ರವಾನೆ ವೆಚ್ಚ ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. 20 ಸಾವಿರ ನೋಟಿಸ್ ಜಾರಿಗೆ ಬರೋಬ್ಬರಿ 1 ಲಕ್ಷ ರೂ. ವೆಚ್ಚ ವ್ಯಯಿಸಬೇಕಿತ್ತು. ಇದಕ್ಕೆ ತಿಲಾಂಜಲಿ ಇಡಲಾಗಿದೆ. ಇದರ ಬದಲಾಗಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮೊಬೈಲ್ ನಂಬರ್‌ಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಎಸ್ಎಂಎಸ್ ಮೂಲಕವೇ ದಂಡದ ಮೊತ್ತ, ಸಂಚಾರ ನಿಯಮ ಉಲ್ಲಂಘನೆ ವಿವರಗಳು ಸಂದೇಶದಲ್ಲಿ ಅಡಕವಾಗಲಿದೆ.
ಇದರಿಂದ ಸಿಬ್ಬಂದಿ ಶ್ರಮದ ಜತೆಗೆ ಅನಾವಶ್ಯಕ ದುಂದು ವೆಚ್ಚ ಹಾಗೂ ಕಾಗದ ರಹಿತ ಆಡಳಿತ ನೀಡಲು ನೆರವಾಗಲಿದೆ. ಕೇವಲ 20 ಪೈಸೆ ವೆಚ್ಚದಲ್ಲಿ ಒಂದು ನೋಟಿಸ್ ರವಾನೆಯಾಗಲಿದ್ದು, ಒಂದು ನೋಟಿಸ್‌ನಿಂದ 4.30 ಪೈಸೆ ಇಲಾಖೆಗೆ ಉಳಿತಾಯವಾಗಲಿದೆ. ಇದರಿಂದ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಜತೆ ವಿನಿಯಮ

ಸಾರಿಗೆ ಇಲಾಖೆ ಜತೆ ವಿನಿಯಮ

ಇನ್ನು ಬೆಂಗಳೂರು ವಾಹನ ಮಾಲೀಕರ ವಿವರ, ಮೊಬೈಲ್ ಸಂಖ್ಯೆಗಳನ್ನು ಸಾರಿಗೆ ಇಲಾಖೆಯಿಂದ ಬೆಂಗಳೂರು ಸಂಚಾರ ಪೊಲೀಸರು ಪಡೆದುಕೊಳ್ಳಲಿದ್ದಾರೆ. ವಾಹನ ನೋಂದಣಿ ವೇಳೆ ಮೊಬೈಲ್ ನಂಬರ್ ನೀಡುವುದು ಕಡ್ಡಾಯವಾಗಿದ್ದು, ಆ ಸಂಖ್ಯೆಗಳನ್ನು ಸಂಚಾರ ಪೊಲೀಸರು ಪಡೆಯಲಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಸಂಖ್ಯೆ ನಮೂದಿಸಿದ ಕೂಡಲೇ ಆ ವಾಹನ ಮಾಲೀಕರ ಮೊಬೈಲ್ ಸಂಖ್ಯೆ ಸಂಚಾರ ಪೊಲೀಸರಿಗೆ ಗೊತ್ತಾಗಲಿದ್ದು, ಆ ಮೊಬೈಲ್ ಸಂಖ್ಯೆಗೆ ನೋಟಿಸ್ ಜಾರಿಯಾಗಿದೆ. ದಂಡದ ಮೊತ್ತವನ್ನು ಪಾವತಿ ಮಾಡುವಂತೆ ನೋಟಿಸ್ ನಲ್ಲಿ ಮನವಿ ಮಾಡಲಾಗುತ್ತದೆ.

ಸಂಚಾರ ಉಲ್ಲಂಘನೆ ನಿಯಂತ್ರಣ

ಸಂಚಾರ ಉಲ್ಲಂಘನೆ ನಿಯಂತ್ರಣ

ಈ ವಿನೂತನ ಕ್ರಮದಿಂದ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ವಾಣಿಜ್ಯ ವಾಹನಗಳು ನಿಯಮ ಉಲ್ಲಂಘನೆ ಮಾಡಿದರೆ ವಾಹನ ಮಾಲೀಕರಿಗೆ ವಿವರ ಲಭ್ಯವಾಗಲಿದೆ. ಈ ಉಪ ಕ್ರಮದಿಂದ ಸಂಚಾರ ಉಲ್ಲಂಘನೆ ಪ್ರಕರಣಗಳು ಕೂಡ ಕಡಿಮೆಯಾಗಲಿವೆ. ಪ್ರಾಯೋಗಿಕವಾಗಿ ಜಾರಿ ಮಾಡಿರುವ ಈ ನಿಯಮ ಅತಿ ಶೀಘ್ರದಲ್ಲಿ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

English summary
The Bengaluru Traffic Police implemented a new system to notify traffic rules violators via SMS regarding their outstanding fines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X