ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?

|
Google Oneindia Kannada News

ಬೆಂಗಳೂರು, ಜನವರಿ 16 : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ಎಂದಾಗ ಎಲ್ಲರ ಕಣ್ಣ ಮುಂದೆ ಬರುವುದು ಬೆಂಗಳೂರಿನ ಸಂಚಾರ ಸಮಸ್ಯೆ. ಕಳೆದ ಐದಾರು ವರ್ಷಗಳ ಹಿಂದೆ ವಿಪರೀತ ಟ್ರಾಫಿಕ್ ಸಮಸ್ಯೆ ಜನರನ್ನು ಕಾಡುತ್ತಿತ್ತು. ನಮ್ಮ ಮೆಟ್ರೋ ಹಾಗೂ ಬಿ-ಟ್ರ್ಯಾಕ್ ಯೋಜನೆ ಬಂದ ಮೇಲೆ ಟ್ರಾಫಿಕ್ ಸಮಸ್ಯೆ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ.

ಬೆಂಗಳೂರಿನ ಪ್ರಮಖ ಸಮಸ್ಯೆಯಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಇಲ್ಲಿನ ಸಂಚಾರ ಪೊಲೀಸರು ಟ್ರಾಫಿಕ್ ಸಂಬಂಧಿ ಅಂಕಿ-ಅಂಶಗಳನ್ನು ಸಮರ್ಥವಾಗಿ ಸಂಗ್ರಹಿಸಿ, ಅವುಗಳನ್ನು ಸಾರ್ವಜನಿಕರಿಗೆ ನೀಡಿ, ಅದರ ಮೂಲಕ ಸಂಚಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ 2019 ರ ಸಂಚಾರ ನಿಯಮಗಳ ಉಲ್ಲಂಘನೆಯ ವರದಿಯಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರ ನಿಯಮಗಳ ಉಲ್ಲಂಘನೆಗಳು ಕಡಿಮೆಯಾಗಿರುವುದು ಕಂಡು ಬರುತ್ತದೆ. ಕಳೆದ ವರ್ಷ ಜಾರಿಗೆ ಬಂದ ಹೊಸ Motor Vehicle (Amendment) Act 2019 ರ ಭಾರೀ ದಂಡದ ಭಯಕ್ಕೆ ಸಂಚಾರ ನಿಯಮಗಳ ಉಲ್ಲಂಘನೆ ಕಡಿಮೆಯಾಗಿರುವುದನ್ನು ಇದು ತೋರಿಸುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಸಂಚಾರ ನಿಯಮ ಉಲ್ಲಂಘನೆ ಇಳಿಕೆ

ಸಂಚಾರ ನಿಯಮ ಉಲ್ಲಂಘನೆ ಇಳಿಕೆ

ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಯಾವ ರೀತಿ ಕಣ್ಣಿಟ್ಟಿರುತ್ತಾರೆ ಎಂಬುದಕ್ಕೆ ಕಳೆದ ವರ್ಷ ದಾಖಲಿಸಿರುವ ಪ್ರಕರಣಗಳೇ ಸಾಕ್ಷಿ. ಸದ್ಯ ಹೊಸ ಕಾನೂನಿನ ಪ್ರಕಾರ 16 ಬಗೆಯ ಪ್ರಕರಣಗಳಲ್ಲಿ ಸಂಚಾರ ನಿಯಮಗಳು ಉಲ್ಲಂಘನೆಯಾಗಿದ್ದು, 79,25,134 ಪ್ರಕರಣಗಳು ದಾಖಲಾಗಿವೆ. 2019 ರ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಸಂಚಾರ ನಿಯಮಗಳ ಉಲ್ಲಂಘನೆ ಬೆಂಗಳೂರಿನಲ್ಲಿ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬರುತ್ತದೆ. 2018 ರಲ್ಲಿ 8274663 ಪ್ರಕರಣಗಳು ದಾಖಲಾಗಿದ್ದವು, 2017 ರಲ್ಲಿ ಸಮೀಪ ಒಂದು ಕೋಟಿ ಪ್ರಕರಣಗಳು (9922437) ದಾಖಲಾಗಿದ್ದವು.

ಹೆಲ್ಮೆಟ್ ಪ್ರಕರಣ ಜಾಸ್ತಿ

ಹೆಲ್ಮೆಟ್ ಪ್ರಕರಣ ಜಾಸ್ತಿ

2019 ರ ಬೆಂಗಳೂರು ಟ್ರಾಫಿಕ್ ಪೊಲೀಸ್ ವ್ಯಾಪ್ತಿಯ ಸಂಚಾರ ನಿಯಮಗಳ ಎಲ್ಲ ಬಗೆಯ ಉಲ್ಲಂಘನೆಯನ್ನು ಗಮನಿಸಿದಾಗ, ಹೆಲ್ಮೆಟ್ ರಹಿತ ಚಾಲನೆ ಹೊರತುಪಡಿಸಿ, ಕಳೆದ ಮೂರು ವರ್ಷದಲ್ಲಿ ಉಳಿದ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿವೆ. ಹಿಂಬದಿ ವಾಹನ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರುವುದು ಹೆಲ್ಮೆಟ್ ರಹಿತ ಚಾಲನೆ ಪ್ರಕರಣಗಳು ಹೆಚ್ಚಾಗಲು ಕಾರಣ ಎನ್ನಲಾಗಿದೆ. 2017 ರಲ್ಲಿ 3219640, 2018ರಲ್ಲಿ 2989064 ಹಾಗೂ 2019 ರಲ್ಲಿ 3327893 ಪ್ರಕರಣಗಳು ದಾಖಲಾಗಿದ್ದವು.

ಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿ

ಬೈಕ್ ಡ್ರ್ಯಾಗ್ ರೇಸ್‌ಗೆ ಕಡಿವಾಣ

ಬೈಕ್ ಡ್ರ್ಯಾಗ್ ರೇಸ್‌ಗೆ ಕಡಿವಾಣ

ಶಾಲಾ ಕಾಲೇಜು ಬಳಿ ಕಿಡಗೇಡಿಗಳು ಬೈಕ್ ಡ್ರ್ಯಾಗ್ ರೇಸ್ ಹಾಗೂ ವೀಲಿಂಗ್‌ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಾರೆ ಎನ್ನುವ ದೂರುಗಳು ಹೆಚ್ಚಾಗಿದ್ದರಿಂದ ಪೊಲೀಸರು ಇಂತಹ ಘಟನೆಗಳನ್ನು ಸಮರ್ಥವಾಗಿ ಹತ್ತಿಕ್ಕಿದ್ದಾರೆ. ಕಳೆದ ವರ್ಷ ಕೇವಲ 665 ಪ್ರಕರಣಗಳು ದಾಖಲಾಗಿದ್ದವು. 2017 ರಲ್ಲಿ ಇದು ಮೂರು ಪಟ್ಟು ಇತ್ತು. ಆ ವರ್ಷ, 2683 ಪ್ರಕರಣಗಳು, 2018 ರಲ್ಲಿ 1314 ನಡೆದಿದ್ದವು. ಈ ಮೂಲಕ ಸಂಚಾರ ಪೊಲೀಸರು ಬೈಕ್ ಡ್ರ್ಯಾಗ್ ರೇಸ್ ಹಾಗೂ ವೀಲಿಂಗ್‌ ಹಾವಳಿಯನ್ನು ಗಣನೀಯವಾಗಿ ಹತ್ತಿಕ್ಕಿದ್ದಾರೆ.

ಪ್ರತಿನಿತ್ಯ ಇಬ್ಬರ ಸಾವು

ಪ್ರತಿನಿತ್ಯ ಇಬ್ಬರ ಸಾವು

ಇನ್ನು ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ನಡೆದ ಅಪಘಾತಗಳಲ್ಲಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಸರಾಸರಿ ಇಬ್ಬರು ರಸ್ತೆ ಅಫಘಾತದಲ್ಲಿ ಮೃತಪಡುತ್ತಿದ್ದಾರೆ ಎಂದು ಸಂಚಾರ ಪೊಲೀಸರ 2019 ರ ವರದಿ ಹೇಳಿದೆ. ಸರಾಸರಿ ಪ್ರತಿನಿತ್ಯ 33 ಜನ ಗಾಯಗೊಳ್ಳುತ್ತಿದ್ದಾರೆ. ದೇಶದ ಇತರೆ ಮಹಾನಗರಿಗಳಿಗೆ ಹೋಲಿಸಿದರೆ, ಇದು ಕಡಿಮೆ ಎಂದು ವರದಿ ಹೇಳಿದೆ. 2019 ರಲ್ಲಿ ನಡೆದ 4688 ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟು 744 ಜನ ಮೃತಪಟ್ಟಿದ್ದರು.

ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರ

English summary
Bengaluru Traffic Police Report On 2019 Traffic Violations. It Shows, Traffic Violations cases redused year by Year In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X