ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೊಮ್ಯಾಟೊ, ಸ್ವಿಗ್ಗಿಗೆ ಬೆಂಗಳೂರು ಪೊಲೀಸ್ ಖಡಕ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಸ್ವಿಗ್ಗಿ, ಜೊಮ್ಯಾಟೊ ಆಹಾರ ಡೆಲಿವರಿ ಸಂಸ್ಥೆಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸಿರುವುದು ಸ್ವಿಗ್ಗಿ, ಜ್ಯೊಮ್ಯಾಟೊ ಡೆಲಿವರಿ ಹುಡಗರೇ ಅಂತೆ. 19 ಸಾವಿರ ಜ್ಯೊಮ್ಯಾಟೊ, ಸ್ವಿಗ್ಗಿ ಸಿಬ್ಬಂದಿ 30 ಸಾವಿರಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದು ಬೆಂಗಳೂರು ನಗರ ಒಂದಲ ಅಂಕಿ-ಅಂಶ.

ಖಡಕ್ ಅಧಿಕಾರಿ, ನಗರ ಸಂಚಾರ ವಿಭಾಗ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ಅವರು, ಸಂಚಾರ ನಿಯಮ ಉಲ್ಲಂಘನೆ ಕುರಿತು ಜ್ಯೊಮ್ಯಾಟೊ, ಸ್ವಿಗ್ಗಿಗೆ ಎಚ್ಚರಿಕೆ ನೀಡಿದ್ದು ನೋಟೀಸ್ ಸಹ ಜಾರಿ ಮಾಡಿದ್ದಾರೆ.

Bengaluru Traffic Police Issue Notice To Swiggy, Zomato

ಸಂಸ್ಥೆಗಳು ಡೆಲಿವರಿ ಸಿಬ್ಬಂದಿ ಮೇಲೆ ಅತಿಯಾದ ಒತ್ತಡ ಹಾಕುತ್ತಿದ್ದಾರೆ ಹಾಗಾಗಿ ಹುಡುಗರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದಿರುವ ರವಿಕಾಂತೇಗೌಡ, ಸ್ವಿಗ್ಗಿ, ಜ್ಯೊಮ್ಯಾಟೊ, ಊಬರ್ ಈಟ್ಸ್‌ ಗಳಿಗೆ ನೊಟೀಸ್ ನೀಡಿದೆ.

ಸಂಸ್ಥೆಗಳು ತನ್ನ ಡೆಲಿವರಿ ಹುಡುಗರಿಗೆ ನೀಡುವ ಬೈಕ್‌ಗಳಿಗೆ ಸ್ಪೀಡ್ ಗೌರ್ನರ್ ಅಳವಡಿಸಬೇಕು, ಡೆಲಿವರಿ ಹುಡುಗರ ಮೇಲೆ ಒತ್ತಡ ಹೇರಬಾರದು ಸೇರಿದಂತೆ ಇನ್ನೂ ಹಲವು ನಿಯಮಗಳನ್ನು ಪೊಲೀಸರು ಸ್ವಿಗ್ಗಿ, ಜ್ಯೊಮ್ಯಾಟೊ ಹಾಗೂ ಇತರ ಆಹಾರ ಡೆಲಿವರಿ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಕಂಪೆನಿಗಳು ಕಡಿಮೆ ಅವಧಿಯಲ್ಲಿ ಆಹಾರ ಡೆಲಿವರಿ ಮಾಡಲು ಸೂಚಿಸುವ ಕಾರಣ, ಹುಡುಗರು ಒನ್‌ವೇ ನಲ್ಲಿ ವಿರುದ್ಧವಾಗಿ ಗಾಡಿ ಓಡಿಸುವುದು, ಸಿಗ್ನಲ್ ಜಂಪ್ ಮಾಡುವುದು ಇನ್ನೂ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೆಲವು ದಿನಗಳ ಹಿಂದೆ ಸ್ವಿಗ್ಗಿ, ಜ್ಯೊಮ್ಯಾಟೊ ಗಳಿಗೆ ಎಚ್ಚರಿಕೆ ನೀಡಿದ್ದರು.

English summary
Bengaluru traffic police department issue notice to Swiggy and Zomato. These companies delivery boys violates traffic signal the most.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X