ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ಪೊಲೀಸರಿಗೂ ಮುಲಾಜಿಲ್ಲದೆ ದಂಡ ವಿಧಿಸಿದ ಬಿಟಿಪಿ

|
Google Oneindia Kannada News

Recommended Video

ಗುಜರಾತ್ ಮಾದರಯಲ್ಲೇ ರಾಜ್ಯದಲ್ಲೂ ಸಂಚಾರಿ ನಿಯಮ ಉಲ್ಲಂಘನೆಯಲ್ಲಿ ಬದಲಾವಣೆ ? | Oneindia Kannada

ಬೆಂಗಳೂರು, ಸೆಪ್ಟೆಂಬರ್ 13: ಪೊಲೀಸರು ಮಾತ್ರ ಹೆಲ್ಮೆಟ್ ಹಾಕದೆ, ಒನ್‌ವೇನಲ್ಲಿ ಓಡಿಸುತ್ತಾ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದರೆ ಅವರ ಮೇಲೆ ಯಾವ ದಂಡವನ್ನೂ ವಿಧಿಸುವುದಿಲ್ಲ, ಪ್ರಕರಣವೂ ದಾಖಲಾಗುವುದಿಲ್ಲ ಎನ್ನುವುದು ಜನಸಾಮಾನ್ಯರ ಆರೋಪ. ಸಣ್ಣಪುಟ್ಟ ನಿಯಮ ಉಲ್ಲಂಘನೆಗೂ ದುಬಾರಿ ದಂಡ ತೆರಬೇಕಿರುವ ವಾಹನ ಸವಾರರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಪೊಲೀಸರ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪೊಲೀಸರೂ ಕಾನೂನು ನಿಯಮಗಳಿಂದ ಹೊರತಲ್ಲ, ಅವರಿಗೂ ಯಾವ ಮುಲಾಜೂ ಇಲ್ಲದೆ ದಂಡ ವಿಧಿಸುತ್ತಿದ್ದೇವೆ ಎಂಬ ಸಂದೇಶ ನೀಡುವ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಜನಸಾಮಾನ್ಯರಿಗೆ ಸಮಾಧಾನ ಮಾಡಿದ್ದಾರೆ.

ಒಂದೇ ದಿನದಲ್ಲಿ 42 ಲಕ್ಷ ರೂ ದಂಡ ತೆತ್ತ ಬೆಂಗಳೂರಿಗರುಒಂದೇ ದಿನದಲ್ಲಿ 42 ಲಕ್ಷ ರೂ ದಂಡ ತೆತ್ತ ಬೆಂಗಳೂರಿಗರು

ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ಉಲ್ಲಂಘಟನೆ ಮಾಡುವ ಸರ್ಕಾರಿ ಅಧಿಕಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಹಾಗೆಯೇ ಪೊಲೀಸರೇ ಸಂಚಾರ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಎರಡು ಪಟ್ಟು ದಂಡ ವಿಧಿಸುವ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್‌ಸ್ಪೆಕ್ಟರ್‌ಗೆ 2,000 ರೂ ದಂಡ

ಇನ್‌ಸ್ಪೆಕ್ಟರ್‌ಗೆ 2,000 ರೂ ದಂಡ

ನಿಲುಗಡೆ ನಿಷೇಧಿತ ಜಾಗದಲ್ಲಿ ಪೊಲೀಸ್ ಜೀಪ್ ನಿಲ್ಲಿಸಿದ್ದಕ್ಕಾಗಿ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರಿಗೆ ಸಂಚಾರ ಪೊಲೀಸರು 2,000 ರೂ. ದಂಡ ವಿಧಿಸಿದ್ದಾರೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ ಜನ ಸಾಮಾನ್ಯರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಸರ್ಕಾರಿ ಅಧಿಕಾರಿಯಾಗಿರುವ ಇನ್‌ಸ್ಪೆಕ್ಟರ್‌ಗೆ ಎರಡುಪಟ್ಟು ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಸ್ತು ಕ್ರಮಕ್ಕೆ ಸೂಚನೆ

ಶಿಸ್ತು ಕ್ರಮಕ್ಕೆ ಸೂಚನೆ

ಸದಾಶಿವನಗರ ಸಂಚಾರ ಪೊಲೀಸ್ ಠಾಣೆಗೆ ನಿಯೋಜಿಸಲಾಗಿರುವ ಜೀಪ್‌ಅನ್ನು ಸದಾಶಿವನಗರ ಪೊಲೀಸ್ ಠಾಣೆಯ ಜಂಕ್ಷನ್‌ ಸಮೀಪದ ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಬೇರೆ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿತ್ತು. ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಇನ್‌ಸ್ಪೆಕ್ಟರ್‌ಗೆ ದುಪ್ಪಟ್ಟು ದಂಡ ವಿಧಿಸುವ ಜತೆಗೆ, ವಾಹನ ಚಾಲಕ ಡಿಎಸ್ ನಾಗೇಂದ್ರ ವಿರುದ್ಧ ಇಲಾಖೆಯ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಟಿಪಿ ತಿಳಿಸಿದೆ.

ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ

ಒಂದೇ ದಿನದಲ್ಲಿ 20 ಲಕ್ಷ ರೂ. ಸಂಗ್ರಹ

ಒಂದೇ ದಿನದಲ್ಲಿ 20 ಲಕ್ಷ ರೂ. ಸಂಗ್ರಹ

ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ 10ರಿಂದ ಗುರುವಾರ ಬೆಳಿಗ್ಗೆ 10 ಅವಧಿಯಲ್ಲಿ ಒಂದೇ ದಿನದಲ್ಲಿ 55 ಬಗೆಯ ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 20 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 20,55,200 ರೂ. ದಂಡ ವಸೂಲು ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಯಾವುದಕ್ಕೆ ಎಷ್ಟು ದಂಡ ವಸೂಲಿ?

ಯಾವುದಕ್ಕೆ ಎಷ್ಟು ದಂಡ ವಸೂಲಿ?

ಹೆಲ್ಮೆಟ್ ಧರಿಸದೆ ಇರುವ 1,274 ಪ್ರಕರಣಗಳು ದಾಖಲಾಗಿದೆ. ಅಂತಹ ಪ್ರಕರಣಗಳಲ್ಲಿ 2,82,400 ರೂ. ದಂಡ ವಸೂಲಿ ಮಾಡಲಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತುಕೊಳ್ಳುವವರು ಹೆಲ್ಮೆಟ್ ಧರಿಸದಿರುವ 967 ಪ್ರಕರಣಗಳು ದಾಖಲಾಗಿತ್ತು. ಇವುಗಳಿಗೆ 2,45,200 ರೂ. ದಂಡ ವಿಧಿಸಲಾಗಿದೆ. ಪಾರ್ಕಿಂಗ್ ನಿಷೇಧಿತ ಸ್ಥಳದಲ್ಲಿ ಗಾಡಿಗಳನ್ನು ನಿಲ್ಲಿಸಿದ 919 ಪ್ರಕರಣಗಳಲ್ಲಿ 1,58,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ; ದಂಡ ಎಷ್ಟು ಕಡಿತವಾಗಲಿದೆ?ಸಂಚಾರಿ ನಿಯಮ ಉಲ್ಲಂಘನೆ; ದಂಡ ಎಷ್ಟು ಕಡಿತವಾಗಲಿದೆ?

English summary
Bengaluru Traffic police has fined police inspector Shivakumar of Rs 2,000 for parking the office vehicle in no parking area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X