ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಟೆಂಪೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ದೌರ್ಜನ್ಯ

|
Google Oneindia Kannada News

Recommended Video

ಈ ಟ್ರಾಫಿಕ್ ಪೊಲೀಸ್ ಹೊಟ್ಟೆಗೆ ಅದು ಏನ್ ತಿಂತಾನೆ ಅಂತ ಗೊತ್ತಿಲ್ಲ.

ಬೆಂಗಳೂರು, ಸೆಪ್ಟೆಂಬರ್ 20: ಟೆಂಪೊ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡಿದ ಬೆಂಗಳೂರು ಟ್ರಾಫಿಕ್ ಕಾನ್ಸ್‌ಟೇಬಲ್ ಒಬ್ಬರ ವಿಡಿಯೋ ವೈರಲ್ ಆಗಿದೆ.

ಇಂದು ಬೆಳಗ್ಗೆ ಟೌನ್ ಹಾಲ್ ಬಳಿ ಘಟನೆಯು ನಡೆದಿದ್ದು, ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂ ಟರ್ನ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೊ ಟ್ರಾವೆಲರ್ ಚಾಲಕ ಸುನಿಲ್ ಎಂಬ ಯುವಕನಿಗೆ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಥಳಿಸಿದ್ದಾರೆ. ಅಷ್ಟೆ ಅಲ್ಲದೆ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ.

ಬೆಂಗಳೂರು: ಇನ್ಸ್‌ಪೆಕ್ಟರ್ ಬಲಿ ತೆಗೆದುಕೊಂಡ ಸಾರ್ವಜನಿಕರ ಆಕ್ರೋಶಬೆಂಗಳೂರು: ಇನ್ಸ್‌ಪೆಕ್ಟರ್ ಬಲಿ ತೆಗೆದುಕೊಂಡ ಸಾರ್ವಜನಿಕರ ಆಕ್ರೋಶ

ಘಟನೆಯ ಪೂರ್ಣ ದೃಶ್ಯಗಳನ್ನು ಚಾಲಕ ಸುನಿಲ್ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ತೋರಿದ ದೌರ್ಜನ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Bengaluru Traffic Police Constable Hitting A Driver Video Viral

ಯೂ ಟರ್ನ್ ತೆಗೆದುಕೊಂಡನೆಂಬ ಕಾರಣಕ್ಕೆ ಟೆಂಪೋ ಏರಿ ಚಾಲಕನ ಪಕ್ಕ ಕೂತ ಪೊಲೀಸ್ ಪೇದೆ, ಮೊದಲಿಗೆ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸುವಂತೆ ಹೇಳಿದ್ದಾರೆ. ಚಾಲಕ ಸುನಿಲ್‌, 'ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ' ಎಂದಿದ್ದಾರೆ. ಆಗ ತಾನೇ ವಾಹನದ ಸ್ಟೀರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಪೊಲೀಸ್ ಪೇದೆ.

ಬೆಂಗಳೂರು ಪೊಲೀಸರ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್' ವಿಡಿಯೋ ವೈರಲ್ಬೆಂಗಳೂರು ಪೊಲೀಸರ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್' ವಿಡಿಯೋ ವೈರಲ್

ಟ್ರಾಫಿಕ್ ಪೊಲೀಸ್ ಪೇದೆಯು ಅಲ್ಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯವರು ಎನ್ನಲಾಗಿದ್ದು, ಮಾಹಿತಿಗಾಗಿ ಠಾಣೆಗೆ ಕರೆ ಮಾಡಿದರೆ ಠಾಣೆಯ ಲ್ಯಾಂಡ್ ಲೈನ್ ದುರಸ್ಥಿ ಆಗಿತ್ತು, ಎಸ್‌ಐ ಸಹ ಕರೆಯನ್ನು ಸ್ವೀಕರಿಸಲಿಲ್ಲ.

ಜನ-ಪೊಲೀಸರ ಸಂಘರ್ಷಕ್ಕೆ ಕಾರಣವಾಗುತ್ತಿದೆ ದುಬಾರಿ ದಂಡಜನ-ಪೊಲೀಸರ ಸಂಘರ್ಷಕ್ಕೆ ಕಾರಣವಾಗುತ್ತಿದೆ ದುಬಾರಿ ದಂಡ

ಇತ್ತೀಚಿನ ದಿನಗಳಲ್ಲಿ ಪೊಲೀಸರ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಲಿವೆ. ಜೊತೆಗೆ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾಗಿ ದಂಡದ ಪ್ರಮಾಣ ಹೆಚ್ಚಾದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಾಕತಾಳೀಯವಲ್ಲ, ದಂಡ ಹೆಚ್ಚಳವು ಮೊದಲೇ ಇದ್ದ ಪೊಲೀಸ್-ಸಾರ್ವಜನಿಕರ ನಡುವೆ ಇದ್ದ ತಿಕ್ಕಾಟವನ್ನು ಹೆಚ್ಚು ಮಾಡಿದೆ.

English summary
A Bengaluru traffic police constable's video went viral today. In the video constable hitting a van driver for breaking the traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X