ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೇವಲ ಎರಡೂವರೆ ತಾಸಿನಲ್ಲಿ ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು ಗೊತ್ತೇ?

|
Google Oneindia Kannada News

ಬೆಂಗಳೂರು,ಫೆಬ್ರವರಿ 11: ನಗರದಲ್ಲಿ ಕೊರೊನಾ ಲಾಕ್‌ಡೌನ್ ಮುಗಿದಾಗಿನಿಂದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ಸಂಚಾರಗಳ ಸಂಖ್ಯೆ ಕಡಿಮೆ ಇತ್ತು. ಅದಾದ ಬಳಿಕ ಕೆಲವು ತಿಂಗಳುಗಳ ಕಾಲ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.

ವಾಹನ ವಿಮೆ ನವೀಕರಣದಲ್ಲಿ ವಿನಾಯಿತಿ ಇಲ್ಲ: ಜಿಐ ಕೌನ್ಸಿಲ್ ಸ್ಪಷ್ಟನೆವಾಹನ ವಿಮೆ ನವೀಕರಣದಲ್ಲಿ ವಿನಾಯಿತಿ ಇಲ್ಲ: ಜಿಐ ಕೌನ್ಸಿಲ್ ಸ್ಪಷ್ಟನೆ

ಇದೀಗ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ, ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗಿದೆ.ಅಲ್ಲದೆ‌ ಸಂಚಾರ ಪೊಲೀಸ್ ಇಲಾಖೆಯಿಂದ ನೀಡುವ ನೋಟಿಸ್ ನ ಗಂಭೀರವಾಗಿ ವಾಹನ ಮಾಲೀಕರು ತೆಗೆದುಕೊಳ್ಳದ ಕಾರಣ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿ 8362 ಪ್ರಕರಣಗಳಿಂದ 43,09,944 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಹಾಗೂ ದಾಖಲಾಗಿದ್ದ ಪ್ರಕರಣಗಳ ದಂಡ ವಸೂಲಿ ಮಾಡಲು ನಗರ ಸಂಚಾರಿ ಪೊಲೀಸರು ಬುಧವಾರ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ 8362 ಪ್ರಕರಣಗಳಿಂದ ರೂ.43 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಫೆಬ್ರವರಿ 10ರ ಮಧ್ಯಾಹ್ನ ನಡೆದ ಕಾರ್ಯಚರಣೆ

ಫೆಬ್ರವರಿ 10ರ ಮಧ್ಯಾಹ್ನ ನಡೆದ ಕಾರ್ಯಚರಣೆ

ನಿನ್ನೆ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ರೂ. 43,09,944 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ದಾಖಲಾದ 4,665 ಹೊಸ ಪ್ರಕರಣಗಳಲ್ಲಿ ರೂ. 30,65,150 ದಂಡ ಹಾಗೂ 3,697 ಹಳೆಯ ಪ್ರಕರಣಗಳಲ್ಲಿ ರೂ.12.36 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.

95 ಲಕ್ಷಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣ

95 ಲಕ್ಷಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣ

ಈ ಹಿಂದೆ ಹೇಳಿಕೆ ನೀಡಿದ್ದ ಸಂಚಾರಿ ಪೊಲೀಸರು ಇತ್ತೀಚೆಗಷ್ಟೇ 95 ಲಕ್ಷಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ರೂ. 390 ಕೋಟಿ ದಂಡ ಸಂಗ್ರಹಿಸಬೇಕಾಗಿದೆ ಎಂದು ಹೇಳಿದ್ದರು.

ನೋಟಿಸ್ ಜಾರಿ ಮಾಡಿದ್ದರೂ ದಂಡ ಕಟ್ಟಿಲ್ಲ

ನೋಟಿಸ್ ಜಾರಿ ಮಾಡಿದ್ದರೂ ದಂಡ ಕಟ್ಟಿಲ್ಲ

ಇದರಲ್ಲಿ ನೋಟಿಸ್ ಜಾರಿ ಮಾಡಿದ್ದರು ಸಾಕಷ್ಟು ಜನರು ಇನ್ನೂ ದಂಡವನ್ನು ಕಟ್ಟಿಲ್ಲ. ಈ ವಾಹನಗಳನ್ನು ಶೀಘ್ರದಲ್ಲೇ ಹಿಡಿದು, ದಂಡ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recommended Video

ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada
ಹಳೆಯ ಪ್ರಕರಣಗಳಿಂದ ಸಂದಾಯವಾದ ದಂಡ

ಹಳೆಯ ಪ್ರಕರಣಗಳಿಂದ ಸಂದಾಯವಾದ ದಂಡ

ಈ ಪೈಕಿ 3697 ಹಳೆಯ ಪ್ರಕರಣಗಳಿಂದ 12,36 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

English summary
The city traffic police who conducted an 'Operation Surprise Check' on Wednesday, booked 4,665 cases and collected over Rs. 43 lakh, including the penalty for 3,697 past violations, in 150 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X